ತಿರುವನಂತಪುರ: ಸಿಪಿಎಂ ಕಚೇರಿ ಮೇಲೆ ಅಪರಿಚಿತರಿಂದ ದಾಳಿ ನಡೆದಿದೆ. ತಿರುವನಂತಪುರಂ ಜಿಲ್ಲಾ ಸಮಿತಿ ಕಚೇರಿ ಮೇಲೆ ದಾಳಿ ನಡೆದಿದೆ.
ಮೂರು ಬೈಕ್‍ಗಳಲ್ಲಿ ಬಂದ ಗುಂಪು ಕಚೇರಿ ಮೇಲೆ ಕಲ್ಲು ತೂರಾಟ ನಡೆಸಿದೆ.
ಬೆಳಗಿನ ಜಾವ 2 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಕಲ್ಲೆಸೆತದಿಂದ ಜಿಲ್ಲಾ ಕಾರ್ಯದರ್ಶಿ ಅನವೂರು ನಾಗಪ್ಪ ಅವರ ಕಾರಿಗೆ ಹಾನಿಯಾಗಿದೆ. ಎಕೆಜಿ ಸೆಂಟರ್ ಮೇಲೆ ದಾಳಿ ನಡೆದ ಮೂರು ತಿಂಗಳ ನಂತರ ಸಿಪಿಎಂ ಕಚೇರಿ ಮೇಲೆ ದಾಳಿ ನಡೆಸಲಾಗಿದೆ.
ಸ್ಪೋಟಕ ಎಸೆದು ತಿಂಗಳು ಕಳೆದರೂ ದಾಳಿಕೋರನ ಪತ್ತೆಗೆ ಪೋಲೀಸರಿಗೆ ಇನ್ನೂ ಸಾಧ್ಯವಾಗಿಲ್ಲ. ಪಕ್ಷದ ಕಾರ್ಯಕರ್ತರೇ ದಾಳಿಯ ಹಿಂದಿರುವುದರಿಂದ ಆರೋಪಿಗಳ ಬಂಧನ ವಿಳಂಬವಾಗುತ್ತಿದೆ ಎಂಬ ತೀವ್ರ ಟೀಕೆ ವ್ಯಕ್ತವಾಗಿದೆ.
ಸಿಪಿಎಂ ಕಚೇರಿಗೆ ಮತ್ತೆ ದಾಳಿ
0
ಆಗಸ್ಟ್ 27, 2022
Tags