ಕಾಸರಗೋಡು: ಕೃಷಿ ಬೆಳೆಗಳಲ್ಲಿನ ರೋಗ ಪತ್ತೆಹಚ್ಚಲು ಮತ್ತು ರೋಗವನ್ನು ಗುರುತಿಸಲು ರೈತರಿಗೆ ಸಹಾಯ ಮಾಡುವ ಅತ್ಯಾಧುನಿಕ ಸಸ್ಯ ಆರೋಗ್ಯ ಚಿಕಿತ್ಸಾಲಯವನ್ನು ಇದೇ ಮೊದಲ ಬಾರಿಗೆ ಜಿಲ್ಲೆಯ ಪಡನ್ನಕ್ಕಾಡ್ ಕೃಷಿ ಕಾಲೇಜಿನಲ್ಲಿ ಆರಂಭಿಸಲಾಗಿದೆ.
ಕೃಷಿ ಇಲಾಖೆಯ ಅಧೀನದಲ್ಲಿರುವ ಸಸ್ಯ ಆರೋಗ್ಯ ಚಿಕಿತ್ಸಾಲಯದ ಅಧೀನದಲ್ಲಿ ಅತ್ಯಾಧುನಿಕ ಸಸ್ಯ ಆರೋಗ್ಯ ಚಿಕಿತ್ಸಾಲಯ ಆರಂಭಿಸಲಾಗಿದೆ. ರಾಜ್ಯ ತೋಟಗಾರಿಕಾ ಮಿಷನ್ ನಿಧಿಯಿಂದ 25 ಲಕ್ಷ ರೂಪಾಯಿ ವೆಚ್ಚದಲ್ಲಿ ಕ್ಲಿನಿಕ್ ಸ್ಥಾಪಿಸಲಾಗಿದೆ. ಹವಾಮಾನ ವೈಪರೀತ್ಯದಿಂದ ಕೃಷಿ ಕ್ಷೇತ್ರದಲ್ಲಿ ಹಲವು ಬದಲಾವಣೆಗಳು ಕಂಡುಬರುತ್ತಿದ್ದು, ಇದರಿಂದ ಸಸ್ಯಗಳಲ್ಲಿ ಅನೇಕ ಹೊಸ ರೋಗಗಳು ವರದಿಯಾಗುತ್ತಿದೆ. ಸಸ್ಯಗಳನ್ನು ಬಾಧಿಸುವ ರೋಗಗಳನ್ನು ಗುರುತಿಸಲು ಲ್ಯಾಬ್ ಸಹಕಾರಿಯಾಗಲಿದೆ. ಕೃಷಿ ಭವನದ ಮೂಲಕ ಅಥವಾ ರೈತರು ನೇರವಾಗಿ ಪ್ರಯೋಗಾಲಯಕ್ಕೆ ಪರೀಕ್ಷೆಗಾಗಿ ಕೃಷಿ ಮಾದರಿಗಳನ್ನು ತರಬಹುದಾಗಿದೆ.
ಪ್ರಸ್ತುತ ಉತ್ತರದ ಕಣ್ಣೂರು, ವಯನಾಡು, ಕೋಯಿಕ್ಕೋಡ್ ಜಿಲ್ಲೆಗಳಲ್ಲಿ ಈ ರೀತಿಯ ಲ್ಯಾಬ್ ಸೌಲಭ್ಯವಿಲ್ಲ. ವೈರಸ್, ಶಿಲೀಂಧ್ರಗಳು, ಬ್ಯಾಕ್ಟೀರಿಯಾ, ಫೈಟೊಪ್ಲಾಸ್ಮಾ ಇತ್ಯಾದಿಗಳಿಂದ ಉಂಟಾಗುವ ಬೆಳೆ ರೋಗಗಳನ್ನು ಗುರುತಿಸಲು ಸಸ್ಯ ಮಾದರಿಯ ಆನ್ವಿಕ ಪ್ರಯೋಗಾಲಯದ ಮೂಲಕ ರೋಗನಿರ್ಣಯವನ್ನು ಸಹ ನಡೆಸಬಹುದಾಗಿದೆ. ಆನ್ವಿಕ ರೋಗನಿರ್ಣಯ ಕೇಂದ್ರದ ಅತ್ಯಾಧುನಿಕ ತಂತ್ರಜ್ಞಾನವನ್ನು ಇಲ್ಲಿ ಬಳಸಲಾಗುತ್ತದೆ. ಬೆಳೆಗಳಿಗೆ ನೀಡಬೇಕಾದ ಪ್ರಾಥಮಿಕ ಪರೀಕ್ಷೆಗಳನ್ನು ಪ್ರಸ್ತುತ ಕೃಷಿ ಭವನದಿಂದ ಮಾಡಲಾಗುತ್ತಿದೆ. ಆದರೆ ಅತ್ಯಾಧುನಿಕ ಸಸ್ಯ ಆರೋಗ್ಯ ಚಿಕಿತ್ಸಾಲಯಗಳ ಮೂಲಕ ಹಾಗೂ ಪಿ.ಸಿಕ್ಲಿನಿಕ್ ಮೂಲಕ ಹೊಸ ರೋಗಗಳನ್ನು ಕಂಡುಹಿಡಿಯಬಹುದು. ಇದು ಪಿಸಿಆರ್ ಯಂತ್ರ, ಜೆಲ್ ಎಲೆಕ್ಟ್ರೋಫೆÇೀರೆಸಿಸ್ ಘಟಕ, ನ್ಯಾನೊಡ್ರಾಪ್ ಸ್ಪೆಕ್ಟ್ರೋಫೆÇೀಟೋಮೀಟರ್ ಮತ್ತು ಬಿ.ಓ.ಡಿ ಇನ್‍ಕ್ಯುಬೇಟರ್‍ನಂತಹ ಸುಧಾರಿತ ಸಾಧನಗಳನ್ನು ಹೊಂದಿದೆ. ಇದು ಅತ್ಯಾಧುನಿಕ ಲ್ಯಾಬ್ ಸೌಲಭ್ಯವನ್ನು ಹೊಂದಿದ್ದು, ಸಸ್ಯ ಮಾದರಿಗಳನ್ನು ಸಹ ಸಂಗ್ರಹಿಸಬಹುದಾಗಿದೆ. ಸಸ್ಯ ರೋಗಶಾಸ್ತ್ರ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕ ಡಾ.ಪಿ.ಕೆ.ಸಜೀಶ್ ಇದರ ಪ್ರಧಾನ ತನಿಖಾಧಿಕಾರಿಯಾಗಿದ್ದು, ಇವರ ನೇತೃತ್ವದಲ್ಲಿ ಲ್ಯಾಬ್ ಕೆಲಸದಲ್ಲಿ ಪಿಜಿ ವಿದ್ಯಾರ್ಥಿಗಳನ್ನು ಸೇರಿಸಲಾಗುತ್ತದೆ. ಬೆಳೆ ಹಾನಿ ಮತ್ತು ಹೊಸ ರೋಗಗಳಿಂದ ಸಂಕಷ್ಟ ಎದುರಿಸುತ್ತಿರುವ ಕೃಷಿಕರಿಗೆ ಪಡನ್ನಕ್ಕಾಡ್ ಕೃಷಿ ಕಾಲೇಜಿನಲ್ಲಿ ಆರಂಭಿಸಲಾಗಿರುವ ಅಡ್ವಾನ್ಸ್‍ಡ್‍ಪ್ಲಾಂಟ್ ಹೆಲ್ತ್ ಕ್ಲಿನಿಕ್ ಜಿಲ್ಲೆಯ ಕೃಷಿಯನ್ನು ರಕ್ಷಿಸಲು ಸಹಾಯ ಮಾಡಲಿದೆ.
ಬೆಳೆಹಾನಿ, ಬೆಳೆರೋಗಗಳಿಂದ ಸಂಕಷ್ಟ: ಕೃಷಿಕರಿಗೆ ವರದಾನವಾದ ಸಸ್ಯ ಆರೋಗ್ಯ ಚಿಕಿತ್ಸಾ ಕೇಂದ್ರ
0
ಆಗಸ್ಟ್ 28, 2022
Tags