ಮಂಜೇಶ್ವರ: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಬಾವಲಿಗುಳಿ, ವರ್ಕಾಡಿ,ಇದರ ವತಿಯಿಂದ ನಡೆಯುವ 8ನೇ ವರ್ಷದ ಗಣೇಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ ಶ್ರೀ ಕಟೀಲ್ ಟ್ರಾವೆಲ್ ಆಫೀಸ್ ನಲ್ಲಿ ಏರ್ಪಡಿಸಲಾಯಿತು. ಸಮಿತಿ ಯ ಗೌರವ ಅಧ್ಯಕ್ಷ ಲಕ್ಷ್ಮೀ ನಾರಾಯಣ ಹೊಳ್ಳ ಮರಿಕಾಪು ಬಿಡುಗಡೆಗೊಳಿಸಿ ಆಮಂತ್ರಣ ಪತ್ರಿಕೆ ಎಲ್ಲಾ ಮನೆ ಮನೆಗಳಿಗೆ ತಲಪಿಸುವಂತಹ ವ್ಯವಸ್ಥೆಯನ್ನು ಕಾರ್ಯಕರ್ತರು ಶ್ರಮವಹಿಸಿ ಮಾಡಬೇಕು. ಗಣೇಶೋತ್ಸವವು ವೈಭವದ ಉತ್ಸವ ಆಗಬೇಕಾದರೆ ನಿಮ್ಮ ಶ್ರಮದ ಫಲ ಕಾಣಬೇಕು. ಸಪ್ತವರ್ಷಗಳಲ್ಲಿ ಅದ್ಧೂರಿಯಾಗಿ ಗಣೇಶೋತ್ಸವ ನಡೆಯಿತೆಂದರೆ ಅದಕ್ಕೆ ಕಾರ್ಯಕರ್ತರ ಶ್ರಮದ ಪಾಲು ಖಂಡಿತ ಇದೆ ಎಂದು ಹೇಳಿದರು.
ವೇದಿಕೆಯಲ್ಲಿ ಸಮಿತಿ ಅಧ್ಯಕ್ಷ ವಿಶ್ವನಾಥ ರೈ ಅಡ್ಕ, ಪ್ರಧಾನ ಸಂಚಾಲಕ ಹರೀಶ್ ಕನ್ನಿಗುಳಿ, ಪ್ರಧಾನ ಕಾರ್ಯದರ್ಶಿ ಕೃಷ್ಣ ದಾಸ್, ಕೋಶಾಧಿಕಾರಿ ರವಿ ಮುಡಿಮಾರ್, ಉಪಾಧ್ಯಕ್ಷ ಜೀತೇಶ್ ಪೂಂಜಾರ ಮನೆ, ಸತೀಶ್ ಮಳಿ, ನವೀನ್ ಬೋಳದಪದವು,ಪವನ್ ಬೋಳದಪದವು,ವಿಜಯನ್ ಹಾಗೂ ಪ್ರಿಯದರ್ಶಿನಿ ಅಟ್ಸ್- ಸ್ಪೋಟ್ರ್ಸ್ ಕ್ಲಬ್, ಶಿವಾಜಿ ಪ್ರೆಂಡ್ಸ್ ಬಾವಲಿಗುಳಿ ಇದರ ಸದಸ್ಯರು ಪಾಲ್ಗೊಂಡಿದ್ದರು.
ಬಾವಲಿಗುಳಿ ಗಣೇಶೋತ್ಸವ: ಆಮಂತ್ರಣ ಪತ್ರಿಕೆ ಬಿಡುಗಡೆ
0
ಆಗಸ್ಟ್ 04, 2022