ಮುಳ್ಳೇರಿಯ: ಕಾರಡ್ಕ ಬ್ಲಾಕ್ ಆರೋಗ್ಯ ಮೇಳವು ಪೆನಾಲ್ಟಿ ಶೂಟೌಟ್ ಸ್ಪರ್ಧೆಯೊಂದಿಗೆ ಭಾನುವಾರ ಪ್ರಾರಂಭವಾಯಿತು. ಇರಿಯಣ್ಣಿಯಲ್ಲಿ ನಡೆದ ಶೂಟ್ ಔಟ್ ಸ್ಪರ್ಧೆಯನ್ನು ಬ್ಲಾಕ್ ಪಂಚಾಯಿತಿ ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಕೆ.ನಾರಾಯಣನ್ ಉದ್ಘಾಟಿಸಿದರು.
ಮುಳಿಯಾರ್ ಗ್ರಾಮ ಪಂಚಾಯಿತಿ ಸದಸ್ಯೆ ನಾರಾಯಣಿ ಕುಟ್ಟಿ ಅಧ್ಯಕ್ಷತೆ ವಹಿಸಿದ್ದರು. ಮುಳಿಯಾರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪಿ.ವಿ.ಮಿನಿ ಮುಖ್ಯ ಅತಿಥಿಯಾಗಿದ್ದರು. ಮುಳಿಯಾರ್ ಸಿಎಚ್ ಸಿ ಆರೋಗ್ಯ ಮೇಲ್ವಿಚಾರಕ ಪಿ.ಕುಂಞÂ್ಞ ಕೃಷ್ಣನ್ ಮಾತನಾಡಿ, ಜೀವನಶೈಲಿ ರೋಗ ನಿಯಂತ್ರಣಕ್ಕೆ ಕ್ರೀಡಾ ವ್ಯಾಯಾಮದ ಮಹತ್ವವನ್ನು ತಿಳಿಸಿದರು.
ಮುಖ್ಯ ಗುಮಾಸ್ತ ಅಶೋಕ್ ಕುಮಾರ್, ಜಿ ರಂಜಿತ್, ಅಂಬೇಡ್ಕರ್ ಕ್ಲಬ್ ಪದಾಧಿಕಾರಿ ವಿಜಯನ್ ಪೂವಾಳ, ಯುವಶಕ್ತಿ ಕ್ಲಬ್ ಪದಾಧಿಕಾರಿ ಪಿ.ವಿನಯ ಕುಮಾರ್ ಮಾತನಾಡಿದರು. ಮುಳಿಯಾರ್ ಪಂಚಾಯತಿ ಸದಸ್ಯ ರವೀಂದ್ರನ್ ಸ್ವಾಗತಿಸಿ, ಜಿಬಿ ವಂದಿಸಿದರು. ಶೂಟ್ ಔಟ್ ಸ್ಪರ್ಧೆಯಲ್ಲಿ ಎಫ್ ಸಿ ಪಾಣೂರು ಪ್ರಥಮ ಸ್ಥಾನ ಹಾಗೂ ಯುವಶಕ್ತಿ ಬಾಫೆ ದ್ವಿತೀಯ ಸ್ಥಾನ ಪಡೆದರು. 20ರಂದು ನಡೆಯುವ ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಟ್ರೋಫಿಗಳನ್ನು ವಿತರಿಸಲಾಗುವುದು.
ಕಾರಡ್ಕ ಬ್ಲಾಕ್ ಆರೋಗ್ಯ ಮೇಳಕ್ಕೆ ಚಾಲನೆ
0
ಆಗಸ್ಟ್ 08, 2022