HEALTH TIPS

ಪುರುಷರ ಸ್ವಾತಂತ್ರ್ಯಕ್ಕಾಗಿ ಮಾರ್ಚ್; ಪಡಿತರ ಚೀಟಿಯಿಂದಲೂ ಹೊರಗುಳಿದ ಪುರುಷ ತುಳಿತಕ್ಕೊಳಗಾಗುವ ಕಾಲ ದೂರವಿಲ್ಲ: ರಾಹುಲ್ ಈಶ್ವರ್- ಆಲ್ ಕೇರಳ ಮೆನ್ಸ್ ಅಸೋಸಿಯೇಷನ್ ಪುರುಷರ ಮಾರ್ಚ್


                    ತಿರುವನಂತಪುರ: 75ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ  ಪುರುಷರ ಸ್ವಾತಂತ್ರ್ಯ ರಕ್ಷಣೆಗಾಗಿ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು. ಅಖಿಲ ಕೇರಳ ಪುರುಷರ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ಸಿ. ನೇತೃತ್ವ ವಹಿಸಿದ್ದರು.
         ಪುರುಷರ ವಿರುದ್ಧದ ಕಾನೂನು ವ್ಯವಸ್ಥೆಯನ್ನು ಕಿತ್ತುಹಾಕಬೇಕೆಂದು ಅವರು ಒತ್ತಾಯಿಸಿದರು. . ಪಾಳ್ಯಂ ರಕ್ತಸಾಕ್ಷಿ ಮಂಟಪದಿಂದ ಈಸ್ಟ್ ಪೋರ್ಟ್  ವರೆಗೆ ನಡೆದ ಜಾಥಾವನ್ನು ರಾಹುಲ್ ಈಶ್ವರ್ ಉದ್ಘಾಟಿಸಿದರು.  ಅಜಿತ್‍ಕುಮಾರ್ ಮಾತನಾಡಿ, ಇಂದು ಪುರುಷರಿಗೆ ಆಗುತ್ತಿರುವ ಕಿರುಕುಳದಲ್ಲಿ ಬದಲಾವಣೆಯಾಗಬೇಕಾದರೆ ಪಾದಯಾತ್ರೆ ಯಶಸ್ವಿಯಾಗಬೇಕು ಎಂದರು.
         ಪಡಿತರ ಚೀಟಿಯಿಂದಲೂ ಪುರುಷರ ಹೆಸರನ್ನು ಕಿತ್ತೆಗೆಯಲಾಗಿದೆ. ಪುರುಷರು ಮತ್ತು ಮಹಿಳೆಯರು ಸಮಾನವಾಗಿರಬೇಕು. ಪುರುಷರ ಆಸ್ತಿ ಕದಿಯಲು ಸುಳ್ಳು ದೂರು ನೀಡುವ ಮಹಿಳೆಯರನ್ನು ಬಂಧಿಸಿ ಜೈಲಿಗಟ್ಟುವುದು ಪಾದಯಾತ್ರೆಯ ಉದ್ದೇಶವಾಗಿದೆ ಎಂದು ಅಜಿತ್ ಕುಮಾರ್ ಹೇಳಿದರು.
        ಹೆಂಗಸರು ತಮ್ಮ ಪ್ರೇಮಿಗಳ ಜೊತೆ ಸೇರಿ ಗಂಡನನ್ನು ಕೊಲ್ಲುತ್ತಾರೆ. ಮಹಿಳೆ ಒಂಟಿಯಾಗಿ ಕೊಲೆ ಮಾಡುತ್ತಾಳೆ. ಹೆರಿಗೆಯಾಗಿ ಮಕ್ಕಳನ್ನು ಕೊಂದು ಗಂಡನಮೇಲೆ ಹೊರಿಸುವ ಘಟನೆಗಳೂ ನಡೆದಿದೆ.  ಇದನ್ನೆಲ್ಲಾ ನೋಡಿ, ಕೇಳಿದ ಮೇಲೆ ಮನಸ್ಸು ಸ್ಥಬ್ದವಾಗುತ್ತದೆ ಎಂದು ಅಜಿತ್ ಪ್ರತಿಕ್ರಿಯಿಸಿದ್ದಾರೆ. ಸಮಾನತೆ ಸಾರುವ ಮೂಲಕ ಮಹಿಳೆಯರು ಪುರುಷರ ಮೆಟ್ಟಿಲು ಏರುತ್ತಿದ್ದಾರೆ. ಅವರು ಪುರುಷರನ್ನು ಕೊಲ್ಲುತ್ತಾರೆ ಮತ್ತು ಈ ಹತ್ಯೆಗಳಲ್ಲಿ ಕೆಲವೇ ಕೆಲವು ಮಾತ್ರ ತಿಳಿದಿದೆ ಎಂದು ಅವರು ಹೇಳಿದರು.



 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries