ನವದೆಹಲಿ: 'ಕಿರು ಉಪಗ್ರಹ ಉಡ್ಡಯನ ವಾಹನ'ವು (ಎಸ್‌ಎಸ್‌ಎಲ್‌ವಿ) ಉಪಗ್ರಹಗಳನ್ನು ನಿಗದಿತ ಕಕ್ಷೆಗೆ ಸೇರಿಸುವಲ್ಲಿ ವಿಫಲಗೊಂಡಿರುವುದರಿಂದ ಹಿನ್ನಡೆಯಾಗಿಲ್ಲ. ಶೀಘ್ರವೇ ಇನ್ನೊಂದು ಎಸ್‌ಎಸ್‌ಎಲ್‌ವಿ ನೌಕೆ ಉಡಾವಣೆಗೆ ಪ್ರಯತ್ನಿಸಲಾಗುವುದು ಎಂದು ಬಾಹ್ಯಾಕಾಶ ಆಯೋಗದ ಸದಸ್ಯ ಎ.ಎಸ್.ಕಿರಣ್‌ಕುಮಾರ್ ತಿಳಿಸಿದ್ದಾರೆ.