ತ್ರಿಶೂರ್: ಗುರುವಾಯೂರಿನಲ್ಲಿ ಭಕ್ತರನ್ನು ಕಚ್ಚಿದ ಬೀದಿ ನಾಯಿಗೆ ರೇಬಿಸ್ ಇರುವುದು ದೃಢಪಟ್ಟಿದೆ. ಮನ್ನುತ್ತಿ ಪಶು ಆಸ್ಪತ್ರೆಯಲ್ಲಿ ರೇಬಿಸ್ ಸೋಂಕು ದೃಢಪಟ್ಟಿದೆ.
ದೇವಸ್ಥಾನಕ್ಕೆ ಭೇಟಿ ನೀಡಿದ ಐವರಿಗೆ ನಾಯಿ ಕಚ್ಚಿತ್ತು. ಅವರು ಅದೇ ದಿನ ತ್ರಿಶೂರ್ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಪಡೆದರು. ರೇಬಿಸ್ ಸೋಂಕು ದೃಢಪಟ್ಟ ನಂತರ ಈ ನಿಟ್ಟಿನಲ್ಲಿ ಹೆಚ್ಚಿನ ಚಿಕಿತ್ಸೆ ನೀಡುವಂತೆ ಆರೋಗ್ಯ ಇಲಾಖೆ ಸೂಚಿಸಿದೆ.
ದೇವಸ್ಥಾನದ ಆವರಣದಲ್ಲಿದ್ದ ಇತರ ನಾಯಿಗಳಿಗೂ ಈ ನಾಯಿ ಕಚ್ಚಿದೆ ಎಂದು ವರದಿಯಾಗಿದೆ. ಕೂಡಲೇ ಅವನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಬೇಕೆಂಬ ಆಗ್ರಹ ಬಲವಾಗುತ್ತಿದೆ. ಆದರೆ ದೇವಸ್ವಂ ಅಧಿಕಾರಿಗಳು ಹಾಗೂ ಮಹಾನಗರ ಪಾಲಿಕೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳುತ್ತಿಲ್ಲ ಎಂಬ ಆರೋಪವಿದೆ.
ಗುರುವಾಯೂರಿನಲ್ಲಿ ಭಕ್ತರಿಗೆ ಕಚ್ಚಿದ ನಾಯಿಗೆ ರೇಬಿಸ್ ಸೋಂಕು ದೃಢ: ದೇವಾಲಯದ ಆವರಣದಲ್ಲಿ ಇತರ ಪ್ರಾಣಿಗಳಿಗೂ ಕಚ್ಚಿರುವ ಸೂಚನೆ: ಅಧಿಕೃತರಿದ ನಿರಾಸಕ್ತಿ ಎಂದು ಆರೋಪ
0
ಆಗಸ್ಟ್ 10, 2022
Tags