ನವದೆಹಲಿ:ಹಿರಿಯ ವಿಜ್ಞಾನಿ ನಲ್ಲತಂಬಿ ಕಲೈಸೆಲ್ವಿ (Nallathamby Kalaiselvi) ಅವರನ್ನು ಶನಿವಾರ ವೈಜ್ಞಾನಿಕ ಹಾಗೂ ಕೈಗಾರಿಕಾ ಸಂಶೋಧನಾ ಪರಿಷತ್ (CSIR) ಮಹಾನಿರ್ದೇಶಕಿಯನ್ನಾಗಿ ನೇಮಕ ಮಾಡಲಾಗಿದೆ.
ದೇಶದಾದ್ಯಂತ 38 ಸಂಶೋಧನಾ ಸಂಸ್ಥೆಗಳ ಒಕ್ಕೂಟವನ್ನು ಮುನ್ನಡೆಸಲಿರುವ ಮೊದಲ ಮಹಿಳೆ ಎಂಬ ಹಿರಿಮೆಗೆ ಕಲೈಸೆಲ್ವಿ ಪಾತ್ರರಾಗಿದ್ದಾರೆ.
ಲಿಥಿಯಂ ಐಯಾನ್ ಬ್ಯಾಟರಿಗಳ ಕ್ಷೇತ್ರದಲ್ಲಿ ತನ್ನ ಸೇವೆಗೆ ಹೆಸರುವಾಸಿಯಾಗಿರುವ ಕಲೈಸೆಲ್ವಿ ಪ್ರಸ್ತುತ ತಮಿಳುನಾಡಿನ ಕಾರೈಕುಡಿಯಲ್ಲಿರುವ CSIR-ಸೆಂಟ್ರಲ್ ಎಲೆಕ್ಟ್ರೋಕೆಮಿಕಲ್ ರಿಸರ್ಚ್ ಇನ್ಸ್ಟಿಟ್ಯೂಟ್‌ನ ನಿರ್ದೇಶಕಿಯಾಗಿದ್ದಾರೆ.
ಕಲೈಸೆಲ್ವಿ ಅವರು ಎಪ್ರಿಲ್‌ನಲ್ಲಿ ನಿವೃತ್ತಿ ಹೊಂದಿದ ಶೇಖರ್ ಮಾಂಡೆ ಅವರ ಉತ್ತರಾಧಿಕಾರಿಯಾಗಿದ್ದಾರೆ. ಮಾಂಡೆಯವರ ನಿವೃತ್ತಿಯ ನಂತರ ಬಯೋಟೆಕ್ನಾಲಜಿ ಇಲಾಖೆಯ ಕಾರ್ಯದರ್ಶಿ ರಾಜೇಶ್ ಗೋಖಲೆ ಅವರಿಗೆ CSIR ನ ಹೆಚ್ಚುವರಿ ಜವಾಬ್ದಾರಿಯನ್ನು ನೀಡಲಾಯಿತು.
ಕಲೈಸೆಲ್ವಿ ಅವರು ವೈಜ್ಞಾನಿಕ ಹಾಗೂ ಕೈಗಾರಿಕಾ ಸಂಶೋಧನಾ ಇಲಾಖೆಯ ಕಾರ್ಯದರ್ಶಿಯಾಗಿಯೂ ಅಧಿಕಾರ ವಹಿಸಿಕೊಳ್ಳಲಿದ್ದಾರೆ.