ಕಾಸರಗೋಡು: ಜಿಲ್ಲೆಯ ಚಿಮೇನಿ ಮತ್ತು ಕರಿಂದಲ ಗ್ರಾಮಗಳಲ್ಲಿನ ವಿವಿಧ ಅಭಿವೃದ್ಧಿ ಚಟುವಟಿಕೆಗಳನ್ನು ನೇರವಾಗಿ ಮೌಲ್ಯಮಾಪನ ಮಾಡುವ ನಿಟ್ಟಿನಲ್ಲಿ ರಾಜ್ಯದ ಸಹಾಯಕ ಮುಖ್ಯ ಕಾರ್ಯದರ್ಶಿ ಡಾ.ಎ.ಜಯತಿಲಕ್ ಅವರು ಗುರುವಾರ ಭೇಟಿ ನೀಡಿ ಅವಲೋಕನ ನಡೆಸಿದರು.
ಏಕಲವ್ಯ ಮಾದರಿ ವಸತಿ ಶಾಲೆ ನಿರ್ಮಾಣಕ್ಕಾಗಿ ಭೂಮಿ ಸ್ವಾಧೀನಪಡಿಸಿಕೊಂಡ ಕರಿಂದಲದ ಕೊಯಿತ್ತಟ್ಟ್ ಮತ್ತು ಚಿಮೇನಿಯಲ್ಲಿ ಉದ್ದೇಶಿತ ಸೋಲಾರ್ ಪಾರ್ಕ್ ಯೋಜನೆ ಪ್ರದೇಶಕ್ಕೆ ಭೇಟಿ ನೀಡಿದರು. ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಲ್ಲಿ ಕ್ರೀಡಾ ಅಭಿರುಚಿ ಹೆಚ್ಚಿಸುವ ಉದ್ದೇಶದಿಂದ ರಾಜ್ಯದಲ್ಲೇ ಪ್ರಥಮ ಬಾರಿಗೆ ಏಕಲವ್ಯ ಮಾದರಿ ಸಹವಾಸ ವಿದ್ಯಾಲಯ (ಕ್ರೀಡೆ) ಆರಂಭಿಸಲಾಗಿದೆ. ಪ್ರಸಕ್ತ ನೀಲೇಶ್ವರದ ಬಂಗಳಂ ಎಂಬಲ್ಲಿ ಏಕಲವ್ಯ ಎಂಆರ್‍ಎಸ್ ಚಟುವಟಿಕೆ ನಡೆಸುತ್ತಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಇಲಾಖೆ ಸಚಿವ ಕೆ.ರಾಧಾಕೃಷ್ಣನ್ ಅವರು ಇತ್ತೀಚೆಗೆ ಉದ್ಘಾಟಿಸಿದ ಏಕಲವ್ಯ ಮಾದರಿ ವಸತಿ ಶಾಲೆಗೆ ಅಪರ ಮುಖ್ಯ ಕಾರ್ಯದರ್ಶಿ ಭೇಟಿ ನೀಡಿದರು. ಈ ಸಂದರ್ಭ ತರಬೇತುದಾರರು, ಶಿಕ್ಷಕರು ವಿದ್ಯಾರ್ಥಿಗಳೊಂದಿಗೆ ಮಾತನಾಡಿದರು. ಈಗಿರುವ 10 ಎಕರೆ ಜಮೀನಿನ ಜತೆಗೆ ಶಾಲೆಗೆ ಅಗತ್ಯ ಇರುವ ಐದು ಎಕರೆ ಜಮೀನು ನೀಡಲು ಕ್ರಮ ಕೈಗೊಳ್ಳಬೇಕು. ಈಗಿರುವ ಜಮೀನನ್ನು ತೆರವುಗೊಳಿಸಿ ಗಡಿ ಗುರುತು ಹಾಕುವಂತೆಯೂ ಕಂದಾಯ ಇಲಾಖೆ ಅಧಿಕಾರಿಗಳಿಗೆ ಡಾ.ಎ.ಜಯತಿಲಕ್ ಸೂಚಿಸಿದರು.
ಚಿಮೇನಿ ಸೋಲಾರ್ ಪಾರ್ಕ್ ನಿರ್ಮಾಣಗೊಳ್ಳುತ್ತಿರುವ ಪ್ರದೇಶಗಳಲ್ಲಿನ ಪರಿಸ್ಥಿತಿ ಅವಲೋಕಿಸಿದರು. ನೀಲೇಶ್ವರಂನ ಇಎಂಎಸ್ ಕ್ರೀಡಾಂಗಣಕ್ಕೂ ಭೇಟಿ ನೀಡಿದರು. ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣವೀರ್ ಚಂದ್, ಅಪರ ಜಿಲ್ಲಾಧಿಕಾರಿ ಡಿ.ಆರ್.ಮೇಘಶ್ರೀ, ತಹಸೀಲ್ದಾರ್ ಎನ್.ಮಣಿರಾಜ್ ಹಾಗೂ ಕಂದಾಯ ಅಧಿಕಾರಿಗಳು ಉಪಸ್ಥಿತರಿದ್ದರು.
ಅಪರ ಮುಖ್ಯ ಕಾರ್ಯದರ್ಶಿಯಿಂದ ಜಿಲ್ಲಾ ಭೇಟಿ: ಅಭಿವೃದ್ಧಿ ಚಟುವಟಿಕೆಗಳ ಅವಲೋಕನ
0
ಆಗಸ್ಟ್ 20, 2022
Tags