HEALTH TIPS

ಕೇರಳ ಐಪಿಎಸ್ ಅಧಿಕಾರಿಯ ನೇತೃತ್ವದಲ್ಲಿ ಹೊರಹೊಮ್ಮಿದ ವಿಶಿಷ್ಟ ಪರಿಕಲ್ಪನೆ 'ಸ್ಟೂಡೆಂಟ್ ಪೊಲೀಸ್ ಕೆಡೆಟ್ಸ್'

                   ಕೇರಳದ ಐಪಿಎಸ್ ಅಧಿಕಾರಿ ಪಿ ವಿಜಯನ್ ಅವರ `ಸ್ಟೂಡೆಂಟ್ ಪೊಲೀಸ್ ಕೆಡೆಟ್' ಪರಿಕಲ್ಪನೆಯು ಸಾಕಾರಗೊಂಡ ನಂತರ ಈಗ ದೇಶಾದ್ಯಂತ 2 ಲಕ್ಷಕ್ಕೂ ಅಧಿಕ ಸ್ಟೂಡೆಂಟ್ ಪೊಲೀಸ್ ಕೆಡೆಟ್‍ಗಳು(Student Police Cadet) ಹಲವೆಡೆ ಕಾನೂನು ಸುವ್ಯವಸ್ಥೆ ಕಾಪಾಡಲು ಹಾಗೂ ಸಾಮರಸ್ಯವನ್ನು ಪ್ರೋತ್ಸಾಹಿಸಲು ಶ್ರಮಿಸುತ್ತಿದ್ದಾರೆ.

                        ಸುಮಾರು ಎರಡು ವರ್ಷಗಳ ಶ್ರಮದ ನಂತರ ಈ ವಿಶಿಷ್ಟ ಸ್ಟೂಡೆಂಟ್ ಪೊಲೀಸ್ ಕೆಡೆಟ್ ಎಂಬ ಪರಿಕಲ್ಪನೆಯನ್ನು ವಿಜಯನ್ ಸಾಕಾರಗೊಳಿಸಿದ್ದರು. 2008ರಲ್ಲಿ ಪ್ರಾಯೋಗಿಕವಾಗಿ ಆರಂಭಗೊಂಡ ಈ ಯೋಜನೆಯನ್ನು 2010 ರಲ್ಲಿ ಕೇರಳ ಸರಕಾರ ವಹಿಸಿಕೊಂಡಿತ್ತು. ಆಗಸ್ಟ್ 2, 2010ರಲ್ಲಿ 127 ಶಾಲೆಗಳ ತಲಾ 44 ವಿದ್ಯಾರ್ಥಿಗಳ ಬ್ಯಾಚ್‍ನಂತೆ ಒಟ್ಟು 5,588 ಕೆಡೆಟ್‍ಗಳನ್ನು ಈ ಯೋಜನೆಗೆ ಸೇರ್ಪಡೆಗೊಳಿಸಲಾಯಿತು. "ನಾವು ಸೇವೆ ಸಲ್ಲಿಸಲು ಕಲಿಯುತ್ತೇವೆ" (ವಿ ಲರ್ನ್ ಟು ಸರ್ವ್) ಎಂಬ ಧ್ಯೇಯವಾಕ್ಯದೊಂದಿಗೆ ಸ್ಟೂಡೆಂಟ್ ಪೊಲೀಸ್ ಕೆಡೆಟ್ ಯೋಜನೆ ಮುಂದಡಿಯಿಡುತ್ತದೆ.

                     ಮೂಲತಃ ಈ ಸ್ಟೂಡೆಂಟ್ ಪೊಲಿಸ್ ಕೆಡೆಟ್ ಯೋಜನೆಯು ಹೈಸ್ಕೂಲ್ ವಿದ್ಯಾರ್ಥಿಗಳಿಗಾಗಿನ ಎರಡು ವರ್ಷದ ತರಬೇತಿ ಯೋಜನೆಯಾಗಿದ್ದು ಅವರನ್ನು ಜವಾಬ್ದಾರಿಯುತ ನಾಗರಿಕರನ್ನಾಗಿಸಲು ಕಾನೂನು ಬಗ್ಗೆ, ಅವರ ಸಾಮರ್ಥ್ಯ, ಶಿಸ್ತಿನ ಬಗ್ಗೆ ಅರಿವು ಮೂಡಿಸುವ, ಸಮಾಜದ ದುರ್ಬಲ ವರ್ಗಗಳ ಬಗ್ಗೆ ಅನುಕಂಪ ಹೊಂದುವಂತೆ ಹಾಗೂ ಸಾಮಾಜಿಕ ಪಿಡುಗುಗಳ ವಿರುದ್ಧ ಎದ್ದು ನಿಲ್ಲುವವರನ್ನಾಗಿ ವಿದ್ಯಾರ್ಥಿಗಳನ್ನು ರೂಪಿಸುವ ಉದ್ದೇಶವನ್ನು ಈ ಸ್ಟೂಡೆಂಟ್ ಪೊಲೀಸ್ ಕೆಡೆಟ್ ಯೋಜನೆ ಹೊಂದಿದೆ ಎಂದು ವಿಜಯನ್ ವಿವರಿಸುತ್ತಾರೆ.

                       ಕೊಚ್ಚಿ ನಗರದಲ್ಲಿ 2006ರಲ್ಲಿ ವಿದ್ಯಾರ್ಥಿಗಳ ಜೊತೆ ಸಂವಹನ ನಡೆಸುವ ವೇಳೇ ಈ ಯೋಜನೆಯ ಪರಿಕಲ್ಪನೆ ತಮ್ಮ ಮನಸ್ಸಿಗೆ ಹೊಳೆಯಿತು ಎಂದು ವಿಜಯನ್ ಹೇಳುತ್ತಾರೆ. 2013ರಲ್ಲಿ ಆಗ ಗುಜರಾತ್ ಸಿಎಂ ಆಗಿದ್ದ ನರೇಂದ್ರ ಮೋದಿ ಕೂಡ ಈ ಯೋಜನೆಯಿಂದ ಪ್ರಭಾವಿತರಾಗಿ ತಮ್ಮ ಸರಕಾರದ ಐಪಿಎಸ್ ಅಧಿಖಾರಿ ಹಸ್ಮುಖ್ ಪಟೇಲ್ ಅವರ ತಂಡವನ್ನು ಕೇರಳಕ್ಕೆ ಕಳುಹಿಸಿತ್ತು. ನಂತರ ಈ ನಿಯೋಗದ ವರದಿಯ ಆಧಾರದಲ್ಲಿ ಗುಜರಾತ್‍ನಲ್ಲಿ ಯೋಜನೆ ಜಾರಿಗೊಳಿಸಲಾಗಿತ್ತು. ಮುಂದೆ ಹರ್ಯಾಣ, ರಾಜಸ್ಥಾನ ಮತ್ತು ಕರ್ನಾಟಕದಲ್ಲೂ ಈ ಯೋಜನೆ ಜಾರಿಯಾಯಿತು.

                   2017ರಲ್ಲಿ ಆಗಿನ ಗೃಹ ಸಚಿವ ರಾಜನಾಥ್ ಸಿಂಗ್ ಕೇರಳಕ್ಕೆ ಭೇಟಿ ನೀಡಿದ್ದ ವೇಳೆ ಈ ಯೋಜನೆ ಬಗ್ಗೆ ತಿಳಿದು ಇದನ್ನು ರಾಷ್ಟ್ರಮಟ್ಟದಲ್ಲಿ ಜಾರಿಗೊಳಿಸಲು ಬ್ಯುರೋ ಆಫ್ ಪೊಲೀಸ್ ರಿಸರ್ಚ್ ಎಂಡ್ ಡೆವಲೆಪ್ಮೆಂಟ್ ಮೂಲಕ ವಿಸ್ತೃತ ವರದಿ ಪಡೆದುಕೊಂಡಿದ್ದರು.

              ಜುಲೈ 2018ರ ರಲ್ಲಿ ಗುರುಗ್ರಾಮದಲ್ಲಿ ನಡೆದ ಬೃಹತ್ ಕಾರ್ಯಕ್ರಮದಲ್ಲಿ ಪ್ರತಿ ರಾಜ್ಯದ 30 ಸ್ಟೂಡೆಂಟ್ ಪೊಲೀಸ್ ಕೆಡೆಟ್‍ಗಳು ಸೇರಿದಂತೆ ಸಾವಿರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು ಎಂದು ವಿಜಯನ್ ಹೇಳುತ್ತಾರೆ. ಕೇರಳದಲ್ಲಿ 1000 ಶಾಲೆಗಳಲ್ಲಿ 86,000 ಸ್ಟೂಡೆಂಟ್ ಪೊಲೀಸ್ ಕೆಡೆಟ್‍ಗಳಿದ್ದರೆ ರಾಷ್ಟ್ರಮಟ್ಟದಲ್ಲಿ 12,000 ಶಾಲೆಗಳಲ್ಲಿ ಅದನ್ನು ಜಾರಿಗೊಳಿಸಲಾಗಿದೆ. ಯುನಿಸೆಫ್ ಕೂಡ ಸ್ಟೂಡೆಂಟ್ ಪೊಲೀಸ್ ಕೆಡೆಟ್‍ಗಳನ್ನು `ಮಕ್ಕಳ ಹಕ್ಕುಗಳ ರಾಯಭಾರಿಗಳು' ಎಂದು ಗುರುತಿಸಿದೆ.‌


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries