ನವದೆಹಲಿ:ಜನಸಾಮಾನ್ಯರೆಲ್ಲಾ ಈಗಾಗಲೇ ಫೋನ್‌ಪೇ, ಗೂಗಲ್ ಪೇ, ಪೇಟಿಎಂ(Phonepe, googlepay, Paytm) ಸಹಿತ ಹಲವಾರು ಯುಪಿಐ ಆಧಾರಿತ(UPI) ಅಪ್ಲಿಕೇಶನ್ ಗಳಿಗೆ ಹೊಂದಿಕೊಂಡಿದ್ದಾರೆ. ಇದೀಗ ರಿಸರ್ವ್ ಬ್ಯಾಂಕ್ ಯುಪಿಐ ಆಧಾರಿತ ವಹಿವಾಟುಗಳಿಗೆ ಶುಲ್ಕ ವಿಧಿಸಲು ಲೆಕ್ಕಾಚಾರ ಹಾಕಿದೆ ಎಂದು ಮಾಧ್ಯಮಗಳು ವರದಿ ಮಾಡಿದ್ದವು.
ಈ ಹಿನ್ನೆಲೆಯಲ್ಲಿ ಸಾಮಾಜಿಕ ತಾಣದಾದ್ಯಂತ ಆಕ್ರೋಶ ವ್ಯಕ್ತವಾಗಿದೆ.
"ಕಡಿಮೆ ಆದಾಯ ಹೊಂದಿರುವ ಕೆಲ ರೈತರ ಸಾಲ ಮನ್ನಾ ಆಗುತ್ತದೆ. ಅತೀ ಹೆಚ್ಚು ಆದಾಯ ಹೊಂದಿರುವ ಉದ್ಯಮಿಗಳ ಸಾಲವನ್ನೂ ಮನ್ನಾ ಮಾಡಲಾಗುತ್ತದೆ. ಆದರೆ ಮಧ್ಯಮ ವರ್ಗದವರ ಗೋಳು ಕೇಳುವವರಿಲ್ಲ" ಎಂದು ವ್ಯಕ್ತಿಯೋರ್ವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. "ಮೊದಲು ನಮಗೊಂದು ಯೋಜನೆಯನ್ನು ಪರಿಚಯಿಸಿ, ಬಳಿಕ ನಮಗದು ಅಭ್ಯಾಸವಾದಂತೆಯೇ ಅದಕ್ಕೆ ಶುಲ್ಕ ವಿಧಿಸುವ ಪರಿಪಾಠ ಹಿಂದಿನಿಂದಲೂ ಈ ಸರಕಾರ ನಡೆಸುತ್ತಲೇ ಬಂದಿದೆ ಎಂದು ಇನ್ನೋರ್ವ ಟ್ವಿಟರ್ ಬಳಕೆದಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಸಾಮಾಜಿಕ ತಾಣಗಳಲ್ಲಿ(Social Media) ಹಲವಾರು ಮೀಮ್ ಗಳನ್ನೂ ಪೋಸ್ಟ್ ಮಾಡಲಾಗಿದೆ. ಸದ್ಯ #UPIpayments ಹ್ಯಾಶ್‌ಟ್ಯಾಗ್ ದೇಶದಾದ್ಯಂತ ಟ್ರೆಂಡಿಂಗ್ ಆಗಿದೆ.