ಕಾಸರಗೋಡು: ಬ್ಯಾಂಕ್ ಖಾತೆ ಹೊಂದಿರುವ ಪ್ರತಿಯೊಬ್ಬನಿಗೂ ಕನಿಷ್ಠ ಒಂದಾದರೂ ಡಿಜಿಟಲ್ ವಹಿವಾಟು ಸೌಲಭ್ಯ ಒದಗಿಸುವುದರೊಂದಿಗೆ ಕಾಸರಗೋಡು ಜಿಲ್ಲೆ ಸಂಪೂರ್ಣ ಡಿಜಿಟಲ್ ಬ್ಯಾಂಕಿಂಗ್ ಸಾಧನೆ ಮಾಡಿದೆ. ಕೇಂದ್ರ ಸರ್ಕಾರದ ಡಿಜಿಟಲ್ ಇಂಡಿಯಾ ಯೋಜನೆಯ ಅಂಗವಾಗಿ ಕೇರಳ ಸರ್ಕಾರ, ಭಾರತೀಯ ರಿಸರ್ವ್ ಬ್ಯಾಂಕ್ ಮತ್ತು ರಾಜ್ಯ ಮಟ್ಟದ ಬ್ಯಾಂಕರ್ಸ್ ಸಮಿತಿಯ ಆದೇಶದ ಆಧಾರದ ಮೇಲೆ ರಾಜ್ಯದ ಎಲ್ಲಾ ಬ್ಯಾಂಕ್‍ಗಳು ಡಿಜಿಟಲ್ ಬ್ಯಾಂಕಿಂಗ್ ಅನ್ನು ಜಾರಿಗೆ ತರುತ್ತಿವೆ. ಇದರ ಅಂಗವಾಗಿ ಎರಡನೇ ಹಂತದಲ್ಲಿ ಜಿಲ್ಲೆ ಮೊದಲ ಸಾಧನೆ ಮಾಡಿದೆ.
ಈ ಮೂಲಕ ರಾಜ್ಯದಲ್ಲಿ ಸಂಪೂರ್ಣ ಡಿಜಿಟಲ್ ಬ್ಯಾಂಕಿಂಗ್ ತಲುಪಿದ ಮೂರನೇ ಜಿಲ್ಲೆಯಾಗಿ ಕಾಸರಗೋಡು ಗುರುತಿಸಲ್ಪಟ್ಟಿದೆ. ಮೊದಲ ಹಂತದಲ್ಲಿ ಕೊಟ್ಟಾಯಂ ಮತ್ತು ತ್ರಿಶೂರ್ ಸಂಪೂರ್ಣ ಡಿಜಿಟಲ್ ಬ್ಯಾಂಕಿಂಗ್ ವ್ಯವಸ್ಥೆಯನ್ನು ಯಶಸ್ವಿಯಾಗಿ ಜಾರಿಗೊಳಿಸಿದೆ. ಇದರ ಆಧಾರದ ಮೇಲೆ ಪ್ರತಿ ಜಿಲ್ಲೆಯಲ್ಲೂ ಡಿಜಿಟಲ್ ಬ್ಯಾಂಕಿಂಗ್ ವ್ಯವಸ್ಥೆ ಜಾರಿಗೆ ತರಲು ನಿರ್ಧರಿಸಲಾಗಿದೆ. ಎರಡನೇ ಹಂತದಲ್ಲಿ ಘೋಷಣೆಯಾದ ಮೊದಲ ಜಿಲ್ಲೆ ಕಾಸರಗೋಡು ಆಗಿದೆ.
ಜಿಲ್ಲೆಯಲ್ಲಿ 11 ಸಾರ್ವಜನಿಕ ವಲಯದ ಬ್ಯಾಂಕ್‍ಗಳು, 12 ಖಾಸಗಿ ಬ್ಯಾಂಕ್‍ಗಳು, ಪ್ರಾದೇಶಿಕ ಗ್ರಾಮೀಣ ಬ್ಯಾಂಕ್, ಕೇರಳ ಬ್ಯಾಂಕ್, ಸಣ್ಣ ಹಣಕಾಸು ಬ್ಯಾಂಕ್ ಮತ್ತು ಇಂಡಿಯನ್ ಪೆÇೀಸ್ಟ್ ಪೇಮೆಂಟ್ ಬ್ಯಾಂಕ್ ಸೇರಿದಂತೆ 26 ಬ್ಯಾಂಕ್‍ಗಳು ಕಾರ್ಯನಿರ್ವಹಿಸುತ್ತಿವೆ. ಇವೆಲ್ಲವೂ 276 ಶಾಖೆಗಳನ್ನು ಹೊಂದಿವೆ. ಈಬ್ಯಾಂಕ್‍ಗಳಲ್ಲಿನ 18.62 ಲಕ್ಷ ಖಾತೆಗಳಿಗೆ ಕನಿಷ್ಠ ಒಂದು ಡಿಜಿಟಲ್ ಸೌಲಭ್ಯವನ್ನು ಒದಗಿಸುವ ಮೂಲಕ ಜಿಲ್ಲೆಯಲ್ಲಿ ಸಂಪೂರ್ಣ ಡಿಜಿಟಲ್ ಬ್ಯಾಂಕಿಂಗ್ ವ್ಯವಸ್ಥೆ ಜಾರಿಯಾಗಿದೆ.
ಯುಪಿಐ ವಹಿವಾಟು, ಡೆಬಿಟ್ ಯಾ ರೂಪೇ ಕಾರ್ಡ್ ವಿತರಣೆ, ಮೊಬೈಲ್ ಬ್ಯಾಂಕಿಂಗ್, ಇಂಟರ್ನೆಟ್ ಬ್ಯಾಂಕಿಂಗ್, ಎಇಪಿಎಸ್ ಮತ್ತು ಪಿಓಎಸ್ ಸೌಲಭ್ಯಗಳನ್ನು ಗ್ರಾಹಕರಿಗೆ ಒದಗಿಸಲಾಗಿದೆ.ಸಂಪೂರ್ಣ ಡಿಜಿಟಲೀಕರಣಕ್ಕಾಗಿ ಜೂನ್‍ನಲ್ಲಿ ಪ್ರಾರಂಭವಾದ ಕಾರ್ಯವಿಧಾನಗಳು ಎರಡೂವರೆ ತಿಂಗಳಲ್ಲಿ ಪೂರ್ಣಗೊಳ್ಳಲಿದೆ.
ಕೇರಳ ಬ್ಯಾಂಕ್ ಸಭಾಂಗಣದಲ್ಲಿ ನಡೆದ ಸಂಪೂರ್ಣ ಡಿಜಿಟಲ್ ಬ್ಯಾಂಕಿಂಗ್ ಜಿಲ್ಲಾ ಘೋಷಣೆ ಕಾರ್ಯಕ್ರಮವನ್ನು ಸಹಾಯಕ ಜಿಲ್ಲಾಧಿಕಾರಿ (ಎಲ್.ಆರ್.)ಜೆಗ್ಗಿ ಪಾಲ್ ಉದ್ಘಾಟಿಸಿದರು. ಭಾರತೀಯ ರಿಸರ್ವ್ ಬ್ಯಾಂಕ್ (ತಿರುವನಂತಪುರಂ) ಜನರಲ್ ಮ್ಯಾನೇಜರ್ ಸೆಡ್ರಿಕ್ ಲಾರೆನ್ಸ್ ಅವರು ಸಂಪೂರ್ಣ ಡಿಜಿಟಲ್ ಸಾಧನೆ ಬಗ್ಗೆ ಘೋಷಣೆ ನಡೆಸಿದರು.
ಎಸ್‍ಎಲ್‍ಬಿಸಿ ಕನ್ವೀನರ್ ಮತ್ತು ಕೆನರಾ ಬ್ಯಾಂಕ್ (ತಿರುವನಂತಪುರಂ) ಜನರಲ್ ಮ್ಯಾನೇಜರ್ ಎಸ್. ಪ್ರೇಮಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಬ್ಯಾಂಕಿಂಗ್‍ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದ ಎಫ್‍ಎಲ್‍ಸಿ ಮತ್ತು ಸಿಎಫ್‍ಎಲ್ ಸಂಯೋಜಕರನ್ನು ಸನ್ಮಾನಿಸಲಾಯಿತು. ಆರ್‍ಬಿಐ (ತಿರುವನಂತಪುರ) ಎಜಿಎಂ ಪ್ರದೀಪ್ ಮಾಧವ್, ನಬಾರ್ಡ್ ಎಜಿಎಂ ಕೆಬಿ ದಿವ್ಯಾ, ಎಸ್‍ಬಿಐ ಪ್ರಾದೇಶಿಕ ವ್ಯವಸ್ಥಾಪಕ ಧನಂಜಯ ಮೂರ್ತಿ, ಕೇರಳ ಬ್ಯಾಂಕ್ (ಕಾಸರ್‍ಕೋಟ್) ಡಿಜಿಎಂ ಕೆ.ಕೃಷ್ಣನ್, ಕೇರಳ ಗ್ರಾಮೀಣ ಬ್ಯಾಂಕ್ ಪ್ರಾದೇಶಿಕ ವ್ಯವಸ್ಥಾಪಕ ವಿ.ಎಂ.ಪ್ರಭಾಕರನ್ ಉಪಸ್ಥಿತರಿದ್ದರು. ಕೆನರಾ ಬ್ಯಾಂಕ್ ಪ್ರಾದೇಶಿಕ ಕಚೇರಿ ಕಾಸರಗೋಡು ಎಜಿಎಂ ಎಚ್.ಶಶಿಧರ ಆಚಾರ್ಯ ಸ್ವಾಗತಿಸಿದರು. ಲೀಡ್ ಬ್ಯಾಂಕ್ ಜಿಲ್ಲಾ ವ್ಯವಸ್ಥಾಪಕ ಎನ್.ವಿ.ಬಿಮಲ್ ವಂದಿಸಿದರು.