ಕಾಸರಗೋಡು: ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಡಾ.ವೈಭವ್ ಸಕ್ಸೇನಾ ಅವರು ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಜಿಲ್ಲೆಯಲ್ಲಿ ಕೈಗೊಳ್ಳಲಾಗಿರುವ ಭದ್ರತಾ ವ್ಯವಸ್ಥೆಗಳನ್ನು ಪರಿಶೀಲಿಸಿದರು.
ಸ್ವಾತಂತ್ರ್ಯೋತ್ಸವ ಪರೇಡ್ ನಡೆಯುತ್ತಿರುವ ಕಾಸರಗೋಡು ನಗರಸಭಾ ಕ್ರೀಡಾಂಗಣದಲ್ಲಿ ಭದ್ರತಾ ವ್ಯವಸ್ಥೆ ಹಾಗೂ ಕರ್ತವ್ಯದ ವಿವರಗಳ ಕುರಿತು ಪೊಲೀಸರಿಗೆ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಸೂಚನೆ ಹಾಗೂ ನಿಭಾಯಿಸಬೇಕಾದ ಕರ್ತವ್ಯಗಳ ಬಗ್ಗೆ ಮಾಹಿತಿ ನೀಡಿದರು. ಜಿಲ್ಲೆಯ ಇತರ ಪೆÇಲೀಸ್ ಅಧಿಕಾರಿಗಳು ಭಾಗವಹಿಸಿದ್ದರು. ಸ್ವಾತಂತ್ರ್ಯ ದಿನದಂದು ಕ್ರೀಡಾಂಗಣ ಮತ್ತು ಅದರ ಆವರಣ ಮತ್ತು ಇಡೀ ಜಿಲ್ಲೆ ಸಂಪೂರ್ಣ ಪೆÇಲೀಸ್ ನಿಯಂತ್ರಣದಲ್ಲಿರುತ್ತದೆ. ಕ್ರೀಡಾಂಗಣ ಮತ್ತು ಅದರ ಆವರಣವನ್ನು ಸಂಪೂರ್ಣವಾಗಿ ವೀಡಿಯೋಗ್ರಾಫ್ ಮಾಡಲಾಗುತ್ತದೆ ಮತ್ತು ಸಿಸಿಟಿವಿ ಕಣ್ಗಾವಲು ನಡೆಸಲಾಗುವುದು. ಕ್ರೀಡಾಂಗಣದ ಪ್ರವೇಶವು ಭದ್ರತಾ ಕ್ರಮಗಳಿಗೆ ಒಳಪಡಲಿರುವುದಾಗಿ ಪ್ರಕಟಣೆ ತಿಳಿಸಿದೆ
ಸ್ವಾತಂತ್ರ್ಯ ದಿನಾಚರಣೆ: ಭದ್ರತಾ ವ್ಯವಸ್ಥೆಗಳ ಪರಿಶೀಲನೆ
0
ಆಗಸ್ಟ್ 15, 2022
Tags