ಕೊಚ್ಚಿ: ನೆಡುಂಬಶ್ಶೇರಿ ವಿಮಾನ ನಿಲ್ದಾಣದಲ್ಲಿ ಇಳಿದ ಪ್ರಯಾಣಿಕನಿಗೆ ಮಂಗನ ಕಾಯಿಲೆಯ ಲಕ್ಷಣಗಳು ಕಂಡುಬಂದಿವೆ. ಇಂದು ಬೆಳಗ್ಗೆ ಜಿದ್ದಾದಿಂದ ಕೊಚ್ಚಿಗೆ ಆಗಮಿಸಿದ ಪ್ರಯಾಣಿಕರೊಬ್ಬರಲ್ಲಿ ಮಂಗನ ಕಾಯಿಲೆಯ ಲಕ್ಷಣಗಳು ಕಂಡುಬಂದಿವೆ.
ಈ ಹಿನ್ನೆಲೆಯಲ್ಲಿ ಅವರನ್ನು ಅಲುವಾದ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಇವರು ಉತ್ತರ ಪ್ರದೇಶ ಮೂಲದವರು.
ಹೆಚ್ಚಿನ ಪರೀಕ್ಷೆಗಾಗಿ ಮಾದರಿಯನ್ನು ಆಲಪ್ಪುಳದ ವೈರಾಲಜಿ ಸಂಸ್ಥೆಗೆ ಕಳುಹಿಸಲಾಗಿದೆ. ರಾಜ್ಯದಲ್ಲಿ ಇದುವರೆಗೆ ಐವರಿಗೆ ಮಂಗನ ಕಾಯಿಲೆ ಇರುವುದು ದೃಢಪಟ್ಟಿದೆ. ಮೊದಲ ರೋಗಿಯು ಡಿಸ್ಚಾರ್ಜ್ ಆಗಿದ್ದರೆ, ಉಳಿದವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಓರ್ವ ಮೃತರಾಗಿದ್ದಾರೆ.
ನಿನ್ನೆ ಕೇಂದ್ರ ಸರ್ಕಾರ ಮಂಗನ ಕಾಯಿಲೆ ತಡೆಗೆ ಮಾರ್ಗಸೂಚಿಗಳನ್ನು ಪರಿಷ್ಕರಿಸಲು ತಜ್ಞರ ಸಭೆ ನಡೆಸಿತ್ತು. ದೇಶದಲ್ಲಿ ಒಂಬತ್ತು ಜನರಿಗೆ ಈ ಕಾಯಿಲೆ ಇರುವುದು ಪತ್ತೆಯಾದ ಸಂದರ್ಭ ಆರೋಗ್ಯ ಸಚಿವಾಲಯ ಕಟ್ಟುನಿಟ್ಟಿನ ಸೂಚನೆಗಳನ್ನು ಹೊರಡಿಸಿದೆ. ಆರೋಗ್ಯ ಸಚಿವಾಲಯ ಇಂದು ಪರಿಷ್ಕøತ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಬಹುದು ಎಂದು ವರದಿಯಾಗಿದೆ.
ನೆಡುಂಬಶ್ಚೇರಿ ವಿಮಾನ ನಿಲ್ದಾಣದಲ್ಲಿ ಇಳಿದ ಪ್ರಯಾಣಿಕನಿಗೆ ಮಂಗನ ಕಾಯಿಲೆಯ ಲಕ್ಷಣಗಳು: ಆಸ್ಪತ್ರೆಗೆ ರವಾನೆ
0
ಆಗಸ್ಟ್ 05, 2022