ಕಾಸರಗೋಡು: ವಿಶ್ವ ಹಿಂದೂ ಪರಿಷತ್-ಬಜರಂಗ ದಳ ವತಿಯಿಂದ ಅಖಂಡ ಭಾರತ ಸಂಕಲ್ಪ ಕಾರ್ಯಕ್ರಮ ಆ. 14ರಂದು ಪೆರ್ಲ ಪೇಟೆಯಲ್ಲಿ ಜರುಗಲಿದೆ.
ಕಾರ್ಯಕ್ರಮದ ಅಂಗವಾಗಿ ಅಂದು ಸಂಜೆ 5.30ಕ್ಕೆ ಪೆರ್ಲ ಪೇಟೆಯಲ್ಲಿ ಪಂಜಿನ ಮೆರವಣಿಗೆ, 6ಕ್ಕೆ ಸಭಾ ಕಾರ್ಯಕ್ರಮ ಜರುಗಲಿದೆ. ಅಖಂಡ ಭಾರತ ವಿಭಜನೆಗೊಂಡ 1947ರ ಆ. 14ರ ಕರಾಳ ದಿನದ ಹಿನ್ನೆಲೆಯಲ್ಲಿ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ.
ವಿಹಿಂಪ ಕಾಸರಗೋಡು ಜಿಲ್ಲಾಧ್ಯಕ್ಷ ಜಯದೇವ ಖಂಡಿಗೆ ಸಮಾರಂಭ ಉದ್ಘಾಟಿಸುವರು. ಎಣ್ಮಕಜೆ ವಲಯಾಧ್ಯಕ್ಷ ಉದಯ ಚೆಟ್ಟಿಯಾರ್ ಅಧ್ಯಕ್ಷತೆ ವಹಿಸುವರು. ಆರೆಸ್ಸೆಸ್ ಜಿಲ್ಲಾ ಸೇವಾ ಪ್ರಮುಖ್ ಪುರುಷೋತ್ತಮ ಪ್ರತಾಪನಗರ ಪ್ರಧಾನ ಬೌದ್ಧಿಕ್ ನೆರವೇರಿಸುವರು. ವಿಹಿಂಪ ಮುಖಂಡರಾದ ಸಂಕಪ್ಪ ಭಂಡಾರಿ ಬಳ್ಳಂಬೆಟ್ಟು, ಡಾ. ಕೇಶವ ನಾಯ್ಕ್ ಖಂಡಿಗೆ, ಹರಿಪ್ರಸಾದ್ ಪುತ್ರಕಳ, ಪಾಲ್ಗೊಳ್ಳುವರು.
ಪೆರ್ಲದಲ್ಲಿ ಅಖಂಡ ಭಾರತ ಸಂಕಲ್ಪ ಕಾರ್ಯಕ್ರಮ
0
ಆಗಸ್ಟ್ 11, 2022
Tags