ಮಲಪ್ಪುರಂ: ಕೀಜುಪರಂಬ್ ಜಿವಿಎಚ್‍ಎಸ್ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದ ವೇಳೆ ವೀರ ಸಾವರ್ಕರ್ ವೇಷ ಧರಿಸಿದ್ದ ಮಗು ಸಾವರ್ಕರ್ ಎಂದು ಬರೆದಿದ್ದ ಬೋರ್ಡ್ ತೆಗೆದಿರುವ ಬಗ್ಗೆ ದೂರು ದಾಖಲಾಗಿದೆ.
ಸ್ವಾತಂತ್ರ್ಯೋತ್ಸವದ ಮೆರವಣಿಗೆಯಲ್ಲಿ 75 ಸ್ವಾತಂತ್ರ್ಯ ಹೋರಾಟಗಾರರನ್ನು ಮರುರೂಪಿಸಲು ಶಾಲಾ ಅಧಿಕಾರಿಗಳು ನಿರ್ಧರಿಸಿದ್ದರು. ಇದಕ್ಕಾಗಿ ಶಾಲೆಯ ಶಿಕ್ಷಕರೊಬ್ಬರನ್ನು ಪಿ.ಟಿ.ಎ. ಜವಾಬ್ದಾರಿ ವಹಿಸಿತ್ತು.
ಮೆರವಣಿಗೆ ಪ್ರಾರಂಭವಾಗುವ ಮೊದಲು ಸಾವರ್ಕರ್ ವೇಶಧಾರಿ ಮಗು ಶಿಕ್ಷಕರ ಗಮನ ಸೆಳೆಯಿತು. ನಂತರ ತಕ್ಷಣವೇ ವೀರ ಸಾವರ್ಕರ್ ವೇಷ ಧರಿಸಿದ್ದ ವಿದ್ಯಾರ್ಥಿಯನ್ನು ಗ್ರೀನ್ ರೂಮ್ ಗೆ ಕರೆದೊಯ್ದ ಅಧಿಕಾರಿಗಳು ಸಾವರ್ಕರ್ ಎಂದು ಬರೆದಿದ್ದ ಕಾಗದವನ್ನು ತೆಗೆದಿರಿಸಿದರು. ಶಾಲೆಯ ಅಧಿಕಾರಿಗಳು ಘಟನೆಯಲ್ಲಿ ಸ್ವಾತಂತ್ರ್ಯ ಹೋರಾಟಗಾರರನ್ನು ಮರುರೂಪಿಸಲು ನಿಯೋಜಿಸಲಾದ ಶಿಕ್ಷಕರಿಂದ ಈ ಬಗ್ಗೆ ವಿವರಣೆಯನ್ನು ಕೇಳಿರುವÀರು.
ಮಗುವಿನ ಫೆÇೀಟೋ ಪ್ರಚಾರಗೊಂಡ ಬಳಿಕ ಕೀಜುಪರಂಬ ಪಂಚಾಯತ್ ಯೂತ್ ಲೀಗ್ ಹಾಗೂ ಯೂತ್ ಕಾಂಗ್ರೆಸ್ ಪ್ರತಿಭಟನಾ ಮೆರವಣಿಗೆ ನಡೆಸಿದವು. ವೀರ ಸಾವರ್ಕರ್ ವೇಶಧರಿಸಲು ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದೆ.
ಸ್ವಾತಂತ್ರ್ಯೋತ್ಸವ ರ್ಯಾಲಿ: ವೀರ ಸಾವರ್ಕರ್ ವೇಷ ಧರಿಸಿದ್ದ ಬಾಲಕನನ್ನು ತಡೆಹಿಡಿದ ಅಧಿಕೃತರು: ಫಲಕ ಹಿಂಪಡೆಯಲಾಗಿದೆ ಎಂದು ದೂರು
0
ಆಗಸ್ಟ್ 17, 2022