ಬದಿಯಡ್ಕ: ಶ್ರೀ ಭಾರತೀ ವಿದ್ಯಾಪೀಠ ಬದಿಯಡ್ಕ ಶಾಲೆಯಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಮಾರೋಪ ಸಮಾರಂಭ ಕಾರ್ಯಕ್ರಮ ಸಂಭ್ರಮದಿಂದ ನಡೆಯಿತು. ಶಿಸ್ತು ಬದ್ಧ ಜೀವನ, ಕರ್ತವ್ಯ ಪರಿಪಾಲನೆ ಮತ್ತು ದೇಶಪ್ರೇಮ ಇವುಗಳನ್ನು ನಾವು ಅಳವಡಿಸಿಕೊಂಡರೆ ಮಾತ್ರ ನಮ್ಮ ಗುರಿ ಸಾಧನೆ ಸಾಧ್ಯ. ಇವುಗಳೇ ನಮ್ಮ ಸಾರ್ಥಕ ಜೀವನದ ಮೂಲಮಂತ್ರಗಳು ಎಂದು ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಡಾ. ಶಂಕರ ಪಾಟಾಳಿಯವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ರಕ್ಷಕ-ಶಿಕ್ಷಕ ಸಂಘದ ಅಧ್ಯಕ ಅರುಣ್ ಕುಮಾರ್ ಕುಂಜತ್ತೋಡಿ ವಿದ್ಯೆ ಮತ್ತು ವಿದ್ಯಾರ್ಥಿ ಜೀವನದ ಮೌಲ್ಯಗಳ ಬಗ್ಗೆ ವಿವರಿಸಿದರು. ಶಾಲಾ ಮುಖ್ಯೋಪಾಧ್ಯಾಯ ಸತ್ಯನಾರಾಯಣ ಶರ್ಮ ಅಧ್ಯಕ್ಷತೆ ವಹಿಸಿದ್ದರು.
ಈ ಸಂದಭರ್Àದಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ನಡೆಸಲಾದ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು. ವಿದ್ಯಾರ್ಥಿಗಳಾದ ವೈಶಾಲಿ ಸ್ವಾಗತಿಸಿ, ಶ್ರೀನಿಧಿ ಎಸ್ ವಂದಿಸಿದರು. ಹತ್ತನೇ ತರಗತಿಯ ವಿದ್ಯಾರ್ಥಿಗಳಾದ ದೃಷಿಕಾ ರೈ ಮತ್ತು ಸುಹಾನ್ ಎನ್ ಶೆಟ್ಟಿ ನಿರೂಪಿಸಿದರು.
ಶಿಸ್ತುಬದ್ಧ ಜೀವನ, ಕರ್ತವ್ಯ ಪಾಲನೆಯಿಂದ ಗುರಿ ತಲುಪಲು ಸಾಧ್ಯ: ಡಾ. ಶಂಕರ ಪಾಟಾಳಿ
0
ಆಗಸ್ಟ್ 21, 2022