HEALTH TIPS

ಮಳೆಗಾಲದಲ್ಲಿ ಬೆಡ್‌ಶೀಟ್, ದಿಂಬಿನಿಂದ ಬರೋ ದುರ್ವಾಸನೆಯಿಂದ ಪಾರಾಗೋದು ಹೇಗೆ?

 ಮಳೆಗಾಲದಲ್ಲಿ ಸಾಮಾನ್ಯವಾಗಿ ನಿಮ್ಮ ಹಾಸಿಗೆ, ದಿಂಬು ಅಥವಾ ಇತರ ಪಿಠೋಕರಣಗಳು ಸುರ್ವಾಸನೆ ಬೀರುವುದನ್ನು ಕಂಡಿರಬಹುದು. ಇದಕ್ಕೆ ಅತಿಯಾದ ತೇವಾಂಶದಿಂದ ಹುಟ್ಟಿಕೊಳ್ಳುವ ಶಿಲೀಂಧ್ರಗಳೇ ಕಾರಣ. ಇವುಗಳು ನಿಮ್ಮ ಹಾಸಿಗೆ, ಬೆಡ್‌ಶೀಟ್, ಸೋಫಾ ಸೇರಿದಂತೆ ಇತರ ಪಿಠೋಪಕರಣಗಳಲ್ಲಿ ಒಂದು ರೀತಿಯ ಬೂಸ್ಟ್ ಅಥವಾ ಪಾಚಿ ಬೆಳವಣಿಗೆಗೆ ಕಾರಣವಾಗುತ್ತವೆ. ಕೆಲವೊಮ್ಮೆ ಸಾಕು ಪ್ರಾಣಿಗಳಿಂದಲೂ ಸಹ ಈ ಶಿಲೀಂಧ್ರ ನಿಮ್ಮ ಮನೆ ಸೇರಬಹುದು. ಇದರಿಂದಲೇ ಆ ದುರ್ವಾಸನೆ ಹುಟ್ಟಿಕೊಳ್ಳುವುದು. ಹಾಗಾದರೆ, ಇದನ್ನು ಹೋಗಲಾಡಿಸುವುದು ಹೇಗೆ? ಇದರಿಂದ ಆಗುವ ಸಮಸ್ಯೆಗಳೇನು ಎಂಬುದನ್ನು ಇಲ್ಲಿ ನೋಡೋಣ.

ಮಳೆಗಾಲದ ಶಿಲೀಂಧ್ರಗಳಿಂದ ಆಗುವ ಸಮಸ್ಯೆಗಳೇನು?:

ಮಳೆಗಾಲದಲ್ಲಿ ಮನೆಯ ಪಿಠೋಪಕರಣಗಳ ಮೇಲೆ ಕಾಣುವ ಪಾಚಿ ಅಥವಾ ಬೂಸ್ಟ್ ರೀತಿಯ ಶಿಲೀಂದ್ರಗಳು ಕಣ್ಣು, ಚರ್ಮ ಮತ್ತು ಶ್ವಾಸಕೋಶದಲ್ಲಿ ಕಿರಿಕಿರಿ ಉಂಟುಮಾಡಿ, ಅಸ್ವಸ್ಥತೆಗೆ ಕಾರಣವಾಗಬಹುದು. ಜೊತೆಗೆ ತಲೆನೋವು, ಮೂಗಿನ ಕಿರಿಕಿರಿ, ತಲೆತಿರುಗುವಿಕೆ, ಆಯಾಸ ಮತ್ತು ವಾಕರಿಕೆ ಮುಂತಾದ ಸಮಸ್ಯೆಗಳಿಗೂ ಕಾರಣವಾಗುತ್ತವೆ. ಆದ್ದರಿಂದ ಮನೆಯ ಬೆಡ್‌ಶೀಟ್, ಪರದೆ, ದಿಂಬು, ಹಾಸಿಗೆಗಳನ್ನು ಆಗಾಗ ಸ್ವಚ್ಛಗೊಳಿಸುತ್ತಿರಬೇಕು.

ಮಳೆಗಾಲದಲ್ಲಿ ಪಿಠೋಪಕರಣಗಳಿಂದ ಬರುವ ವಾಸನೆ ಹೋಗಲಾಡಿಸಲು ಇರುವ ಮಾರ್ಗಗಳೇನು?:

ಆಗಾಗ್ಗೆ ಮನೆಯನ್ನು ಸ್ಯಾನಿಟೈಸ್ ಮಾಡಿ:

ಮಳೆಗಾಲದಲ್ಲಿ ಶಿಲೀಂಧ್ರಗಳ ಬೆಳವಣಿಗೆ ತಡೆಯಲು ಮನೆಯ ವಸ್ತುಗಳನ್ನು ಆಗಾಗ ಸ್ವಚ್ಛಗೊಳಿಸಬೇಕು. ಅಂದರೆ ಮಂಚ, ಪರದೆಗಳು, ದಿಂಬಿನಿಂದ ಬರುವ ವಾಸನೆಯನ್ನು ತಡೆಯಲು ಅವುಗಳನ್ನು ಆಗಾಗ ಸ್ಯಾನಿಟೈಸ್ ಮಾಡಬೇಕು. ಅದಕ್ಕಾಗಿ ಮಾರುಕಟ್ಟೆಯಲ್ಲಿ ಸಿಗುವ ಸೋಂಕುನಿವಾರಕ ಸ್ಪ್ರೇಗಳನ್ನು ನಿಮ್ಮ ಮನೆಯ ಪೀಠೋಪಕರಣಗಳಿಗೆ ಬಳಸಬಹುದು. ಇದರಿಂದ ವಾಸನೆ ಉಂಟುಮಾಡುವ ಶಿಲೀಂಧ್ರಗಳ ಬೆಳವಣಿಗೆಯನ್ನು ತಡೆಯಬಹುದು. ಜೊತೆಗೆ ಆ ಶಿಲೀಂಧ್ರಗಳನ್ನು ನಾಶವೂ ಮಾಡಬಹುದು. ಈ ಸ್ಪ್ರೇಗಳು ಗಾಳಿಯಲ್ಲಿ ಬೇಗನೇ ಆವಿಯಾಗಿ, ತಮ್ಮ ಕಾರ್ಯವನ್ನು ಮಾಡುತ್ತವೆ.

ಮನೆಯೊಳಗಿನ ತೇವಾಂಶವನ್ನು ಸುಧಾರಿಸಿ:

ಮಳೆಗಾಲದಲ್ಲಿ ವಾತಾವರಣ ತಂಪಾಗಿರುತ್ತದೆ. ಇದಕ್ಕಾಗಿ ಮನೆಯ ಬಾಗಿಲಿ, ಕಿಟಕಿಗಳನ್ನು ಯಾವಾಗಲೂ ಮುಚ್ಚವುದು ಸಾಮಾನ್ಯ. ಇದರಿಂದ ಫ್ರೆಶ್ ಗಾಳಿ ಮನೆಯೊಳಗೆ ಬರಲಾಗುವುದಿಲ್ಲ. ಆದ್ದರಿಂದ ಸಾಧ್ಯವಾದಾಗಲೆಲ್ಲಾ ಬಾಗಿಲು ಹಾಗೂ ಕಿಟಕಿಗಳನ್ನು ತೆರೆಯಿರಿ. ಜೊತೆಗೆ ಪೀಠೋಪಕರಣಗಳನ್ನು ಗೋಡೆಗಳಿಂದ ದೂರ ಸರಿಸಿ. ಇದರಿಂದ ಗೋಡೆಯ ಅಂಚಿನಲ್ಲಿ ಶಿಲೀಂದ್ರಗಳು ಬೆಳೆಯುವುದನ್ನು ತಡೆಯಬಹುದು. ಏಕೆಂದರೆ, ಇಂತಹ ಜೀವಿಗಳು ತಂಪಾಗಿರುವ ಜಾಗದಲ್ಲಿ ಹುಟ್ಟಿಕೊಳ್ಳಲಾರವು. ಗೋಡೆ ಹಾಗೂ ಪೀಠೋಪಕರಣಗಳ ನಡುವಿನ ಬೆಚ್ಚಗಿನ ಜಾಗದಲ್ಲಿ ಹುಟ್ಟಿಕೊಂಡು ವಾಸನೆಗೆ ಕಾರಣವಾಗುತ್ತವೆ. ಜೊತೆಗೆ ಎಸಿ ಇರುವ ಕೋಣೆಯೊಳಗೆ ಗಾಳಿ ಹೋಗುವಂತೆ ನೋಡಿಕೊಳ್ಳಿ. ಇದಕ್ಕಾಗಿ ನೀವು ಕೂಲರನ್ನು ಹೀಟರ್‌ಗೆ ಬದಲಿಸಿ ಬಳಸಬಹುದು.

ಮನೆಯನ್ನು ಬೆಚ್ಚಗಿಟ್ಟುಕೊಳ್ಳಿ:

ಮನೆಯಲ್ಲಿ ಶಿಲೀಂಧ್ರ ಬೆಳವಣಿಗೆಯನ್ನು ತಡೆಗಟ್ಟುವ ಮುಖ್ಯ ವಿಧಾನವೆಂದರೆ, ನಿಮ್ಮ ಮನೆಯನ್ನು ಆದಷ್ಟು ಬೆಚ್ಚಗಿಡಲು ಪ್ರಯತ್ನಿಸುವುದು. ಆದ್ದರಿಂದ ಮನೆಯಲ್ಲಿ ಯಾವುದೇ ಸೋರಿಕೆ ಇದ್ದರೆ ಮೊದಲೇ ಪತ್ತೆ ಹಚ್ಚಿ ಸರಿಪಡಿಸಿ. ಮನೆಯೊಳಗೆ ತೇವಾಂಶ ಸಂಗ್ರಹವಾಗದಂತೆ ಚೆನ್ನಾಗಿ ಒರೆಸಿ, ಒಣಗಿಸಿಕೊಳ್ಳುವುದು ಉತ್ತಮ. ಇದು ಯಾವುದೇ ಶಿಲೀಂಧ್ರ ಅಥವಾ ಪಾಚಿ ಬೆಳವಣಿಗೆಯನ್ನು ತಪ್ಪಿಸಲು ಸಹಾಯ ಮಾಡುತ್ತದೆ.


 

 

 

 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries