ತಿರುವನಂತಪುರ: ತಮಿಳುನಾಡಿನಲ್ಲಿ ಬಂಧಿತನಾಗಿರುವ ಕಾಲೇಜು ವಿದ್ಯಾರ್ಥಿಯಿಂದ ಪಡೆದ ಮಾಹಿತಿ ಮೇರೆಗೆ ಐಎಸ್ ನಂಟು ಹೊಂದಿರುವ ಭಯೋತ್ಪಾದಕನ ಶೋಧಕ್ಕೆ ತಿರುವನಂತಪುರಂನಲ್ಲಿ ಎನ್ ಐಎ ತನಿಖೆ ನಡೆಸಲಾಗಿದೆ ಎಂದು ಸೂಚಿಸಲಾಗಿದೆ.
ಶನಿವಾರ ಬಂಧಿತರಾಗಿರುವ ತಮಿಳುನಾಡಿನ ಖಾಸಗಿ ಇಂಜಿನಿಯರಿಂಗ್ ವಿದ್ಯಾರ್ಥಿ ಮೀರ್ ಅನಾಸ್ ಅಲಿ ಅವರಿಂದ ದೊರೆತ ಮಾಹಿತಿ ಆಧರಿಸಿ ಶೋಧ ನಡೆಸಲಾಗಿದೆ. ತನಿಖಾ ತಂಡಕ್ಕೆ ತಮಿಳುನಾಡಿನ ಮುಸ್ಲಿಮೇತರ ಸಮುದಾಯಗಳಲ್ಲಿ ಭಯ ಮೂಡಿಸಲು ವಿಐಪಿಯನ್ನು ಕೊಲ್ಲಲು ಯೋಜಿಸಲಾಗಿತ್ತು ಎಂಬ ಸುಳಿವು ಸಿಕ್ಕಿದೆ.
ಇದನ್ನು ಸುದ್ದಿ ಸಂಸ್ಥೆ ಐಎಎನ್ಎಸ್ ವರದಿ ಮಾಡಿದೆ. ಮೀರ್ ಅನಸ್ ಅಲಿ ತಮಿಳುನಾಡಿನ ಅಂಬೂರು ಜಿಲ್ಲೆಯ ಮಸೂದಿ ಬೀದಿಯ ನಿವಾಸಿ. ಈತ ಐಎಸ್ ಗುಂಪುಗಳೊಂದಿಗೆ ನಿರಂತರ ಸಂಪರ್ಕದಲ್ಲಿ ಇದ್ದಾನೆ ಎಂದು ಕೇಂದ್ರ ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದ ಹಿನ್ನೆಲೆಯಲ್ಲಿ ಪೋಲೀಸರು ಆತನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಆತ ಐಎಸ್ ಸದಸ್ಯರೊಂದಿಗೆ ಸಂವಹನ ನಡೆಸಲು ಟೆಲಿಗ್ರಾಮ್ ಮತ್ತು ಇತರ ಸಾಮಾಜಿಕ ಮಾಧ್ಯಮ ವೇದಿಕೆಗಳನ್ನು ಬಳಸಿದ್ದ.
ಮೀರ್ ಅನಸ್ ಅಲಿ ರಾಣಿಪೇಟ್ ಜಿಲ್ಲೆಯ ಖಾಸಗಿ ಕಾಲೇಜಿನಲ್ಲಿ ಮೂರನೇ ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿ. ವೆಲ್ಲೂರಿನ ಅನೈಕಟ್ ಪೋಲೀಸ್ ಠಾಣೆಗೆ ಕರೆದೊಯ್ದು ಮುಂದಿನ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲಾಗಿದೆ ಎಂದು ಪೋಲೀಸರು ಮಾಹಿತಿ ನೀಡಿದ್ದಾರೆ. ದೇಶದಲ್ಲಿ ಯುದ್ಧ ನಡೆಸಲು ಯೋಜನೆ ರೂಪಿಸಿದ್ದಕ್ಕಾಗಿ ಐಪಿಸಿ 121, ದೇಶದ ವಿರುದ್ಧ ಯುದ್ಧ ನಡೆಸಲು ಸಿದ್ಧತೆ ನಡೆಸಲು ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಿದ್ದಕ್ಕಾಗಿ ಸೆಕ್ಷನ್ 122 ಮತ್ತು ಯುಎಪಿಎ ಸೆಕ್ಷನ್ 125 ರ ಅಡಿಯಲ್ಲಿ ಎಫ್‍ಐಆರ್ ದಾಖಲಿಸಲಾಗಿದೆ.
ಆತನನ್ನು ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ವೆಲ್ಲೂರು ಕೇಂದ್ರ ಕಾರಾಗೃಹಕ್ಕೆ ರಿಮಾಂಡ್ ಮಾಡಲಾಗಿದೆ. ತಿರುವನಂತಪುರದ ವಟ್ಟಿಯೂರ್ಕಾದಲ್ಲಿ ಎನ್‍ಐಎ ತಂಡ ತಪಾಸಣೆ ನಡೆಸಿತು. ತಮಿಳುನಾಡು ಮೂಲದ ಸಾದಿಕ್ ಬಾμÁ ಅವರ ಪತ್ನಿ ಮನೆಯಲ್ಲಿ ತಪಾಸಣೆ ನಡೆಸಲಾಗಿದೆ. ಹಾರ್ಡ್ ಡಿಸ್ಕ್ ಮತ್ತು ಸಿಮ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಸಾದಿಕ್ ಬಾμÁ ತಮಿಳುನಾಡು ಜೈಲಿನಲ್ಲಿದ್ದಾನೆ.
ತಮಿಳುನಾಡಿನಲ್ಲಿ ಬಂಧಿತ ಕಾಲೇಜು ವಿದ್ಯಾರ್ಥಿ ನೀಡಿದ ಮಾಹಿತಿಯ ಆಧಾರದ ಮೇಲೆ ತಿರುವನಂತಪುರದಲ್ಲಿ ಎನ್.ಐ.ಎ ದಾಳಿ: ವಿ.ಐ.ಪಿ ಹತ್ಯೆಗೆ ಯೋಜಿಸಿದ್ದ ಮೀರ್ ಅನಾಸ್ ಅಲಿ ಮತ್ತು ತಂಡ
0
ಆಗಸ್ಟ್ 01, 2022