ವಾಷ್ಟಿಂಗನ್: ಕೌಟುಂಬಿಕ ವ್ಯವಹಾರಕ್ಕೆ ಸಂಬಂಧಿಸಿದ ವಿಚಾರಣೆಗಾಗಿ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ , ನ್ಯೂಯಾರ್ಕ್ ನ ಮ್ಯಾನ್ ಹ್ಯಾಟನ್ ನಲ್ಲಿರುವ ಅಟಾರ್ನಿ ಜನರಲ್ ಕಚೇರಿಗೆ ಆಗಮಿಸಿದ್ದಾರೆ.
ಟ್ರಂಪ್ ಕುಟುಂಬ ಮತ್ತು ಅವರ ಸಂಸ್ಥೆಗೆ ಸಂಬಂಧಿಸಿದ ಅವ್ಯವಹಾರಗಳ ಬಗ್ಗೆ ನ್ಯೂಯಾರ್ಕ್ ಅಟಾರ್ನಿ ಜನರಲ್ ಕಚೇರಿಯು ತನಿಖೆ ನಡೆಸುತ್ತಿದೆ. ಅವರ ಆಸ್ತಿಗಳ ತಪ್ಪು ಮೌಲ್ಯ ಮಾಪನ ಮತ್ತು ಸಾಲದಾತರು ಮತ್ತು ತೆರಿಗೆ ಅಧಿಕಾರಿಗಳನ್ನು ತಪ್ಪು ದಾರಿಗೆಳೆಯುವ ಆರೋಪವನ್ನು ಟ್ರಂಪ್ ಎದುರಿಸುತ್ತಿದ್ದಾರೆ.
ತಮ್ಮ ಮೇಲೆ ಹೂರಿಸಿರುವ ಆರೋಪವನ್ನು ನಿರಾಕರಿಸಿರುವ ಅವರು, ತಾವಾಗಲಿ ಅಥವಾ ತಮ್ಮ ಕಂಪನಿಯಾಗಲಿ ಯಾವುದೇ ರೀತಿಯ ತಪ್ಪನ್ನು ಮಾಡಿಲ್ಲ ಎಂದು ಟ್ರಂಪ್ ಹೇಳಿದ್ದಾರೆ. ತಮ್ಮ ವಿರುದ್ಧ ನಡೆಯುತ್ತಿರುವ ತನಿಖೆಯನ್ನು ರಾಜಕೀಯ ಪ್ರೇರಿತ ಎಂದು ಅಮೆರಿಕದ ಮಾಜಿ ಅಧ್ಯಕ್ಷ ಟ್ರಂಪ್ ತಿಳಿಸಿದ್ದಾರೆ.
ನಾನು ಹೊಂದಿರುವುದು ದೊಡ್ಡ ಕಂಪನಿಯಾಗಿದೆ. ನನ್ನ ಮೇಲೆ ಎಲ್ಲಾ ಕಡೆಯಿಂದ ದಾಳಿ ನಡೆಯುತ್ತಿದೆ
ಎಂದು ಟ್ರಂಪ್ ಸಾಮಾಜಿಕ ಮಾಧ್ಯಮದಲ್ಲಿ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಿದ್ದಾರೆ.