ಒಂದು ಕಪ್ ಕಾಫಿಗೆ ಕೊಂಚ ಶುಂಠಿ ರಸ ಹಿಂಡಿ ಕುಡಿದರೆ ತಲೆ ನೋವು ಮಂಗಮಾಯವಾಗುತ್ತದೆ. ಇಂತಹ ಚಿಕಿತ್ಸಾ ಗುಣಹೊಂದಿರುವ ಶುಂಠಿಯನ್ನು ಅಡುಗೆಗೂ ಬಳಸುತ್ತಾರೆ. ಅದರಲ್ಲೂ ಶುಂಠಿ ಇಲ್ಲದ ಅಡುಕೋಣೆ ಭಾರತದಲ್ಲಿ ಇಲ್ಲವೆ ಇಲ್ಲ. ಯಾಕೆಂದರೆ ಮನೆಯಲ್ಲಿ ಮಾಡುವ ಅನೇಕ ಆಹಾರಕ್ಕೆ ಶುಂಠಿಯನ್ನು ಬಳಸಲಾಗುತ್ತದೆ. ಶುಂಠಿಯ ವಾಸನೆ ನಿಜಕ್ಕೂ ಅದ್ಭುತ.
ಒಂದು ಕಪ್ ಕಾಫಿಗೆ ಕೊಂಚ ಶುಂಠಿ ರಸ ಹಿಂಡಿ ಕುಡಿದರೆ ತಲೆ ನೋವು ಮಂಗಮಾಯವಾಗುತ್ತದೆ. ಇಂತಹ ಚಿಕಿತ್ಸಾ ಗುಣಹೊಂದಿರುವ ಶುಂಠಿಯನ್ನು ಅಡುಗೆಗೂ ಬಳಸುತ್ತಾರೆ. ಅದರಲ್ಲೂ ಶುಂಠಿ ಇಲ್ಲದ ಅಡುಕೋಣೆ ಭಾರತದಲ್ಲಿ ಇಲ್ಲವೆ ಇಲ್ಲ. ಯಾಕೆಂದರೆ ಮನೆಯಲ್ಲಿ ಮಾಡುವ ಅನೇಕ ಆಹಾರಕ್ಕೆ ಶುಂಠಿಯನ್ನು ಬಳಸಲಾಗುತ್ತದೆ. ಶುಂಠಿಯ ವಾಸನೆ ನಿಜಕ್ಕೂ ಅದ್ಭುತ.
ಅತಿಯಾದ್ರೆ ಅಮೃತವೂ ವಿಷ ಅನ್ನುವ ಹಾಗೇ, ಹೆಚ್ಚು ಶುಂಠಿ ಸೇವಿಸುವುದರಿಂದ ಆರೋಗ್ಯದ ಮೇಲೆ ಹಲವು ಅಡ್ಡಪರಿಣಾಮಗಳು ಬೀರುತ್ತವೆ. ಹಾಗಾದ್ರೆ ಏನದು? ಇಲ್ಲಿದೆ ಈ ಬಗ್ಗೆ ಸಂಪೂರ್ಣ ಮಾಹಿತಿ.
ಹೃದಯ ಸಂಬಂಧಿ ಸಮಸ್ಯೆಗಳು!
ಜಾಸ್ತಿ ಶುಂಠಿ ತಿನ್ನುವ ಅಭ್ಯಾಸ ನಿಮಗಿದ್ದರೆ ಕೂಡಲೇ ಬಿಟ್ಟುಬಿಡಿ ಯಾಕೆಂದ್ರೆ ನಿತ್ಯ ಶುಂಠಿ ಸೇವನೆಯಿಂದ ಹೃದಯ ಸಂಬಂಧಿ ಸಮಸ್ಯೆಗಳು ಅಂಟಿಕೊಳ್ಳುತ್ತದೆ. ಅತೀ ಹೆಚ್ಚು ಶುಂಠಿ ಸೇವನೆಯಿಂದ ಹೃದಯದ ಬಡಿತವು ಹೆಚ್ಚಾಗುತ್ತದೆ. ಅಲ್ಲದೇ ಮಸುಕಾದ ದೃಷ್ಟಿ ಮತ್ತು ಹೆಚ್ಚಿನ ಪ್ರಮಾಣದಲ್ಲಿ ನಿದ್ರಾಹೀನತೆಗೂ ಶುಂಠಿ ಕಾರಣವಾಗುತ್ತದೆ. ಇನ್ನು ಹೆಚ್ಚು ಶುಂಠಿ ಸೇವನ್ಯಿಂದ ಕಡಿಮೆ ರಕ್ತದೊತ್ತಡ ಉಂಟಾಗುತ್ತದ್ಚೆ ಇದು ಹೃದಯಾಘಾತಕ್ಕೂ ಕಾರಣವಾಗಬಹುದು. ಹೀಗಾಗಿ ಶುಂಠಿಯನ್ನು ಕಡಿಮೆ ಪ್ರಮಾಣದಲ್ಲಿ ಸೇವಿಸುವುದು ಒಳ್ಳೆಯದು.
ಗರ್ಭಿಣಿಯರಿಗೆ ಆರೋಗ್ಯ ಸಮಸ್ಯೆ ಉಂಟಾಗುತ್ತದೆ!
ಶುಂಠಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದಾಗ ಗರ್ಭಾವಸ್ಥೆಯಲ್ಲಿ ಗರ್ಭಾಶಯದ ಸಂಕೋಚನಕ್ಕೆ ಇದು ಕಾರಣವಾಗಬಹುದು ಹೀಗಾಗಿ ಇದು ಗರ್ಭಿಣಿ ಮಹಿಳೆಯರಿಗೆ ಸಮಸ್ಯೆಯಾಗುತ್ತದೆ. ಇದೇ ಕಾರಣಕ್ಕೆ ಮಹಿಳೆಯರು ಗರ್ಭಿಣಿಯಾಗಿರುವ ವೇಳೆ ಶುಂಠಿ ಸೇವಿಸಬಾರದು ಅನ್ನುತ್ತಾರೆ. ಇನ್ನು ಗರ್ಭಿಣಿಯಾಗಿರುವ ವೇಳೆ ಮಹಿಳೆಯರಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುತ್ತದೆ ಹೀಗಾಗಿ ಅತಿಯಾದ ಶುಂಠಿಯು ಗರ್ಭಾವಸ್ಥೆಯಲ್ಲಿ ತೀವ್ರವಾದ ಎದೆಯುರಿ ಮತ್ತು ಆಸಿಡ್ ರಿಫ್ಲಕ್ಸ್ ಗೆ ಕಾರಣವಾಗಬಹುದು.
ಮಧುಮೇಹ ರೋಗಿಗಳಿಗೂ ಹಾನಿಕಾರಕ!
ಶುಂಠಿಯ ಅತಿಯಾದ ಸೇವನೆಯು ಮಧುಮೇಹ ರೋಗಿಗಳಿಗೆ ಹಾನಿಕಾರಕವಾಗಿದೆ. ಹೆಚ್ಚಿನ ಶುಂಠಿ ಸೇವನೆನೆ ಇದು ದೇಹದಲ್ಲಿ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ, ಅದು ತಲೆತಿರುಗುವಿಕೆ ಮತ್ತು ಆಯಾಸಕ್ಕೆ ಕಾರಣವಾಗಬಹುದು. ಹೆಚ್ಚಿನ ಶುಂಠಿ, ಇತರ ಮಧುಮೇಹ ಔಷಧಿಗಳೊಂದಿಗೆ ಸಂಯೋಜಿಸಲ್ಪಟ್ಟರೆ, ಸಾಕಷ್ಟು ಅಪಾಯಕಾರಿಯಾಗಬಹುದು. ಶುಂಠಿಯನ್ನು ತೆಗೆದುಕೊಳ್ಳುವ ಮೊದಲು, ವೈದ್ಯಕೀಯ ಸಲಹೆಯನ್ನು ಪಡೆಯುವುದು ಒಳ್ಳೆಯದು.
ಹೊಟ್ಟೆಯ ಅಸ್ವಸ್ಥತೆ!
ಹೆಚ್ಚು ಶುಂಠಿ ಸೇವನೆಯಿಂದ ಹೊಟ್ಟೆ ನೋವು ಅಥವಾ ಅಸ್ವಸ್ಥತೆ ಉಂಟಾಗುತ್ತದೆ.ಶುಂಠಿ ಸೇವಿಸುವುದರಿಂದ ಹೊಟ್ಟೆಯಲ್ಲಿ ಪಿತ್ತರಸದ ಉತ್ಪಾದನೆ ಹೆಚ್ಚುತ್ತದೆ. ಹೀಗಾಗಿ ನೀವು ಖಾಲಿ ಹೊಟ್ಟೆಯಲ್ಲಿ ಶುಂಠಿ ಸೇವಿಸಿದರೆ, ಇದು ಗ್ಯಾಸ್ಟ್ರಿಕ್ ಪ್ರಚೋದನೆಗೆ ಕಾರಣವಾಗಬಹುದು, ಇದರ ಪರಿಣಾಮವಾಗಿ ಜೀರ್ಣಕ್ರಿಯೆಯಲ್ಲಿ ಕಿರಿಕಿರಿ ಮತ್ತು ಹೊಟ್ಟೆಯುಬ್ಬರ ಉಂಟಾಗಬಹುದು. ಹೊಟ್ಟೆಯನ್ನು ಅಸ್ವಸ್ಥಗೊಳಿಸುತ್ತದೆ.
ಬೇಧಿ ಉಂಟಾಗುತ್ತದೆ!
ಅತಿಯಾದ ಶುಂಠಿ ಸೇವನೆಯಿಂದ ವಾಂತಿ, ಲೂಸ್ ಮೋಷನ್ ನಂತಹ ಅಪಾಯಕಾರಿ ಅಡ್ಡಪರಿಣಾಮ ಉಂಟಾಗುತ್ತದೆ. ಹೌದು, ಹೆಚ್ಚಿನ ಶುಂಠಿ ಸೇವನೆಯಿಂದ ತೀವ್ರ ತರದ ಬೇಧಿ ಆರಂಭವಾಗುತ್ತದಂತೆ ಇದರೊಂದಿಗೆ ವಾಂತಿಯು ಇರಲಿದೆ. ಹೀಗಾಗಿ ಹೆಚ್ಚಿನ ಶುಂಠಿ ಸೇವನೆಯಿಂದ ದೂರವಿರಿ.
ಚರ್ಮ ಮತ್ತು ಕಣ್ಣಿನ ಅಲರ್ಜಿಗೆ ಕಾರಣವಾಗುತ್ತದೆ!
ಕೆಲವು ಸಂದರ್ಭಗಳಲ್ಲಿ, ಅತಿಯಾದ ಶುಂಠಿಯು ಅಲರ್ಜಿಯ ಪ್ರತಿಕ್ರಿಯೆಗಳಿಗೆ ಕಾರಣವಾಗಬಹುದು. ಚರ್ಮದ ಮೇಲೆ ದದ್ದುಗಳು, ಕಣ್ಣುಗಳಲ್ಲಿ ಕೆಂಪಾಗುವುದು, ತುರಿಕೆ, ಉಬ್ಬಿದ ತುಟಿಗಳು, ತುರಿಕೆ ಕಣ್ಣುಗಳು ಮತ್ತು ಗಂಟಲು ಅಸ್ವಸ್ಥತೆ ಈ ಸ್ಥಿತಿಯ ಅತ್ಯಂತ ಸಾಮಾನ್ಯ ಲಕ್ಷಣಗಳಾಗಿವೆ. ಅಂತಹ ಸಂದರ್ಭಗಳಲ್ಲಿ ನೀವೇ ಸ್ವತಃ ಮನೆಯಲ್ಲಿ ಔಷಧಿಗಳನ್ನು ತೆಗೆದುಕೊಳ್ಳದೆ, ತಕ್ಷಣವೇ ವೈದ್ಯರನ್ನು ಭೇಟಿ ಮಾಡಿ ಸೂಕ್ತವಾದ ಸಲಹೆ ಪಡೆಯಿರಿ.