ಮಧೂರು: ನುಳ್ಳಿಪ್ಪಾಡಿಯಲ್ಲಿ ಪುಸ್ತಕ ಪ್ರಕಾಶನ ಸಂಸ್ಥೆಗೆ ರೂಪುರೇಖೆ ನೀಡಲಾಗಿದೆ. ಪ್ರತಿಭಾವಂತ ಉದಯೋನ್ಮುಖರ ಪ್ರಥಮ ಕೃತಿಗಳನ್ನು ಮತ್ತು ಹಿರಿಯ ಸಾಧಕರ ಯಶೋಗಾಥೆಗಳನ್ನು ಸಹಕಾರ ತತ್ವದಡಿಯಲ್ಲಿ ಬೆಳಕಿಗೆ ತರುವ ಪ್ರಯತ್ನಕ್ಕೆ ಒತ್ತು ಕೊಟ್ಟು ಈ ಸಂಸ್ಥೆಯನ್ನು ಸ್ಥಾಪಿಸಲಾಗಿದೆ. ಈ ಸಂಸ್ಥೆಯು ಈಗಾಗಲೇ ಹಲವು ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸಿದ್ದು ಕೃತಿ ಪ್ರಕಟಣಾ ಕಾರ್ಯವನ್ನು ಕೈಗೆತ್ತಿಕೊಂಡಿದೆ.
ಕೃತಿ ಪ್ರಕಟಣಾ ಯೋಜನೆಗೆ ಹಣ ಹೊಂದಿಸಲು ಕೆಲವು ಕೃತಿಕಾರರೇ ಮುಂದೆ ಬಂದಿದ್ದು, ಆರ್ಥಿಕವಾಗಿ ಹಿಂದುಳಿದ ಉದಯೋನ್ಮುಖ ಲೇಖಕರ ಹಾಗು ಹಿರಿಯ ಸಾಧಕರ ವ್ಯಕ್ತಿ ಚಿತ್ರಣದ ಕೃತಿಗಳನ್ನು ಪ್ರಕಟಿಸಿ ಅವರನ್ನು ಜೀವಂತವಾಗಿಸುವ ಮಹತ್ ಯೋಜನೆಗೆ ಹಣ ಹೊಂದಿಸಲು ಸಾಹಿತ್ಯಾಸಕ್ತ ವಿಶಾಲ ಹೃದಯದ, ಸಹೃದಯ ದಾನಿಗಳಿಂದ ಹಾಗು ಸಾರ್ವಜನಿಕರಿಂದ, ಸಂಘ ಸಂಸ್ಥೆಗಳಿಂದ ಕ್ರೋಢೀಕರಿಸಲು ನಿರ್ಧರಿಸಲಾಗಿದೆ.
ಕನ್ನಡ ಭವನ ಪುಸ್ತಕ ಪ್ರಕಾಶನ ಸಂಸ್ಥೆ ಸ್ವತಂತ್ರ ಅಸ್ತಿತ್ವವುಳ್ಳ ಸಂಸ್ಥೆಯಾಗಿರುತ್ತದೆ. ಸಹೃದಯ ಲೇಖಕರ, ವಿಶಾಲ ಮನೋಭಾವದ ಸಾಹಿತ್ಯಾಸಕ್ತರ ತಂಡವು ಈ ಪ್ರವೃತ್ತಿಯಲ್ಲಿ ಸಕ್ರಿಯವಾಗಿದೆ. ಈಗಾಗಲೇ ಒಂದು ವ್ಯಕ್ತಿ ಚಿತ್ರಣ, ಎರಡು ಕವನ ಸಂಕಲನ ಪ್ರಕಟನೆ ಯೋಗ್ಯವಾಗಿ ಕಾರ್ಯರೂಪಕ್ಕೆ ಬರುತ್ತಿದೆ.
ಇದು ಕಾಸರಗೋಡಿನ ಕನ್ನಡ ಭವನ ಮತ್ತು ಗ್ರಂಥಾಲಯ ನುಳ್ಳಿಪ್ಪಾಡಿ, ಪಿ.ಎಂ.ಎಸ್. ರೋಡ್ ಕಾಸರಗೋಡು - 671121 ಸಂಕೀರ್ಣದಲ್ಲಿ ಕಾರ್ಯಾಚರಿಸುವುದು. ಕನ್ನಡ ಭವನ ಗ್ರಂಥಾಲಯದ ಸಂಸ್ಥಾಪಕ ಕೆ.ವಾಮನ್ ರಾವ್ ಬೇಕಲ್ ಸಂಚಾಲಕರಾಗಿ, ಪುಸ್ತಕ ಪ್ರಕಾಶನಕ್ಕೆ ಮುತುವರ್ಜಿ ವಹಿಸಿ ಕಾರ್ಯೋನ್ಮುಖರಾಗಿರುವರು. ಆಪ್ತ ವಲಯದ ಪೂರ್ಣ ಸಹಕಾರದಲ್ಲಿ ಕಾರ್ಯ ನಿರ್ವಹಿಸುತ್ತಿದೆ.
ಸಮಾನ ಚಿಂತಕರನ್ನು, ಸಮಾನ ಮನಸ್ಕ ಸಾಹಿತ್ಯಾಸಕ್ತ, ಲೇಖಕ, ಭಾಷಾಭಿಮಾನಿ, ದಾನಿಗಳ, ಸಂಘ ಸಂಸ್ಥೆಗಳ ಪೂರ್ಣ ಸಹಕಾರವನ್ನು ನಿರೀಕ್ಷಿಸಲಾಗಿದೆ.
ತಮ್ಮ ಸಾಹಿತ್ಯ ಕೃತಿಗಳನ್ನು, ಕವನ, ಕಥೆ, ವ್ಯಕ್ತಿ ಚಿತ್ರಣ, ಚುಟುಕು ಪ್ರಕಟಿಸಬೇಕೆಂದು ಇಚ್ಛಿಸುವವರು ಕೆ.ವಾಮನ್ ರಾವ್ ಬೇಕಲ್, ಕನ್ನಡ ಭವನ ಪುಸ್ತಕ ಪ್ರಕಾಶನ ಸಂಸ್ಥೆ, ಪಿ.ಎಂ.ಎಸ್. ರೋಡ್, ನುಳ್ಳಿಪ್ಪಾಡಿ, ಕಾಸರಗೋಡು-671121, ಮೊಬೈಲ್-9633073400 ಸಂಖ್ಯೆಯಲ್ಲಿ ಯಾ ಪ್ರದೀಪ್ ಬೇಕಲ್-9995232032, ರಾಧಾಕೃಷ್ಣ ಕೆ.ಉಳಿಯತ್ತಡ್ಕ-9995119326, ರವಿ ನಾಯ್ಕಾಪು-99959
ಕನ್ನಡ ಭವನ ಪುಸ್ತಕ ಪ್ರಕಾಶನ ಸಂಸ್ಥೆ ಅಸ್ತಿತ್ವಕ್ಕೆ
0
ಆಗಸ್ಟ್ 28, 2022
Tags