ಬದಿಯಡ್ಕ: ರಾಮಾಯಣ ವಾರಾಚರಣೆ ಸಮಿತಿ ಬದಿಯಡ್ಕ ಇವರ ನೇತೃತ್ವದಲ್ಲಿ ಶ್ರೀರಾಮಲೀಲಾ ಯೋಗ ಶಿಕ್ಷಣ ಕೇಂದ್ರದಲ್ಲಿ ವಿವಿಧÀ ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ನಡೆಯುವ ರಾಮಾಯಣ ವಾರಾಚರಣೆಗೆ ಚಾಲನೆಯನ್ನು ನೀಡಲಾಯಿತು.
ಮಂಗಳವಾರ ನಡೆದ ಉದ್ಘಾಟನಾ ಸಮಾರಂಭÀದಲ್ಲಿ ವಿಶ್ವಹಿಂದು ಪರಿಷತ್ ಜಿಲ್ಲಾ ಅಧ್ಯಕ್ಷ ಜಯದೇವ ಖಂಡಿಗೆ ದೀಪಬೆಳಗಿಸಿದರು. ವಿಶ್ರಾಂತ ಮುಖ್ಯೋಪಾಧ್ಯಾಯ ಪಿಲಿಂಗಲ್ಲು ಕೃಷ್ಣ ಭÀಟ್ ಅಧ್ಯಕ್ಷತೆ ವಹಿಸಿದ್ದರು. ವಿಶ್ರಾಂತ ಪ್ರಾಂಶುಪಾಲ ಡಾ. ಬೇ.ಸೀ. ಗೋಪಾಲಕೃಷ್ಣ ಅಭ್ಯಾಗತರಾಗಿ ಮಾತನಾಡಿದರು. ಕರಿಂಬಿಲ ಲಕ್ಷ್ಮಣ ಪ್ರಭು ನಿರೂಪಿಸಿದರು.
ನಂತರ ದಿ. ಪರಮೇಶ್ವರ ಆಚಾರ್ಯ ಕಲಾಸೇವಾ ಪ್ರತಿಷ್ಠಾನ ನೀರ್ಚಾಲು ಇವರಿಂದ ವೀರಮಣಿ ಕಾಳಗ ಯಕ್ಷಗಾನ ತಾಳಮದ್ದಳೆ ಜರಗಿತು. ಆಗಸ್ಟ್ 11ರಂದು ಅಪರಾಹ್ನ 3 ಗಂಟೆಗೆ ಸಭಾಕಾರ್ಯಕ್ರಮದ ನಂತರ ಯಕ್ಷಿವಿಹಾರಿ ಯಕ್ಷಗಾನ ತಂಡ ಬದಿಯಡ್ಕ ಇವರಿಂದ ಮೋಕ್ಷದ್ವಯ ಕಥಾಭಾÁಗದ ತಾಳಮದ್ದಳೆ ನಡೆಯಲಿದೆ. ಆ.12ರಂದು ಸಂಜೆ ಹಣಮೇಲೋ-ಗುಣಮೇಲೋ ವಿಚಾರದಲ್ಲಿ ಸಂವಾದ ನಡೆಯಲಿದೆ. ಆ.13ರಂದು 4 ಗಂಟೆಯಿಂದ ಯಾಗ ಸಂರಕ್ಷಣೆ ಸೀತಾಕಲ್ಯಾಣ ಕಥಾಭಾಗದ ಗಮಕ ಶ್ರಾವ್ಯ, ಆ.14ರಂದು 4 ಗಂಟೆಯಿಂದ ಕು. ಅನುಶ್ರೀ ಕೋರಿಕ್ಕಾರು ಮತ್ತು ಬಳಗದವರಿಂದ ಶಾಸ್ತ್ರೀಯ ಸಂಗೀತ ನಡೆಯಲಿದೆ. ಆಗಸ್ಟ್ 15ರಂದು ನಡೆಯುವ ಸಮಾರೋಪ ಸಮಾರಂಭದಲ್ಲಿ ಡಾಕ್ಟರೇಟ್ ಪಡೆದ ಶ್ರೀಶಕುಮಾರ ಪಂಜಿತ್ತಡ್ಕ ಇವರಿಗೆ ಅಭಿನಂದನೆ, ಸಂಜೆ 4ರಿಂದ ಕು. ಶ್ರೀವರದಾ ಪಟ್ಟಾಜೆ ಮತ್ತು ಬಳಗದವರಿಂದ ಶಾಸ್ತ್ರೀಯ ಸಂಗೀತ ನಡೆಯಲಿದೆ. ಪ್ರತೀ ದಿನ ಯೋಗಗುರು ಸೂರ್ಯನಾರಾಯಣ ವಳಮಲೆ ಇವರ ನೇತೃತ್ವದಲ್ಲಿ ರಾಮ ತಾರಕ ಮಂತ್ರ ಜಪ ನಡೆಯಲಿರುವುದು.
ಚಿತ್ರ: 10 ಬಿಎ ರಾಮಾಯಣ
. ಬದಿಯಡ್ಕದಲ್ಲಿ ರಾಮಾಯಣ ವಾರಾಚರಣೆ ಚಾಲನೆ
0
ಆಗಸ್ಟ್ 11, 2022