ತಿರುವನಂತಪುರ: ಓಣಂ ಸಂದರ್ಭದಲ್ಲಿ ಉಂಟಾಗಬಹುದಾದ ಪ್ರಯಾಣಿಕರ ದಟ್ಟಣೆ ಪರಿಗಣಿಸಿ ಕೆಎಸ್‍ಆರ್‍ಟಿಸಿ ಪ್ರಯಾಣ ದುಬಾರಿಯಾಗಲಿದೆ. ಅಂತಾರಾಜ್ಯ ಸೇವೆಗಳಿಗೆ ಫ್ಲೆಕ್ಸಿ ಶುಲ್ಕ ವಿಧಿಸಲು ನಿರ್ದೇಶನ ನೀಡಿ ಆದೇಶ ಹೊರಡಿಸಲಾಗಿದೆ. ಎ.ಸಿ. ಸೇವೆಗಳಿಗೆ ಅಸ್ತಿತ್ವದಲ್ಲಿರುವ ದರಗಳಿಗಿಂತ 20 ಪ್ರತಿಶತವನ್ನು ಹೆಚ್ಚುವರಿಯಾಗಿ ವಿಧಿಸಲಾಗುತ್ತದೆ.
ಓಣಂ ಸಮಯದಲ್ಲಿನ ದಟ್ಟಣೆಯ ಲಾಭವನ್ನು ಪಡೆದುಕೊಂಡು, ಆಗಸ್ಟ್-ಸೆಪ್ಟೆಂಬರ್ ತಿಂಗಳಲ್ಲಿ ಪ್ರಯಾಣಿಕರ ಸಂಖ್ಯೆಯಲ್ಲಿ ಗಮನಾರ್ಹ ಹೆಚ್ಚಳವನ್ನು ಗಮನದಲ್ಲಿಟ್ಟುಕೊಂಡು ಪ್ರಯಾಣ ದರವನ್ನು ಹೆಚ್ಚಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.
ಎ.ಸಿ. ಆನ್‍ಲೈನ್ ಬುಕಿಂಗ್‍ಗೆ 10 ಪ್ರತಿಶತ ಹೆಚ್ಚುವರಿ ಶುಲ್ಕ ವಿಧಿಸಲಾಗುವುದು. ಎಕ್ಸ್‍ಪ್ರೆಸ್ ಮತ್ತು ಡೀಲಕ್ಸ್ ಬಸ್‍ಗಳಿಗೂ ಫ್ಲೆಕ್ಸಿ ಚಾರ್ಜ್ ವಿಧಿಸಲಾಗುತ್ತದೆ. ಬೆಂಗಳೂರು, ಮೈಸೂರು ಮತ್ತು ಚೆನ್ನೈ ಗಳ ಬಸ್ ಗಳಿಗೆ ಶುಲ್ಕ ಹೆಚ್ಚಳಗೊಳ್ಳಲಿದೆ. ನಗರಗಳಿಗೆ ಕೆ.ಎಸ್.ಆರ್.ಟಿ.ಸಿ 25 ಹೆಚ್ಚುವರಿ ವೇಳಾಪಟ್ಟಿಗಳನ್ನು ಪ್ರಕಟಿಸಿದೆ.
ಈ ನಡುವೆ ಈ ಬಾರಿಯ ಓಣಂ ಗೌಜಿಯಿಂದ ನಿರ್ವಹಿಸಲು ರಾಜ್ಯ ಸರಕಾರ 7.47 ಕೋಟಿ ರೂ. ಮೊನ್ನೆಯೇ ಮಂಜೂರು ಆಡಿದೆ. ರಾಜ್ಯಮಟ್ಟದ ಓಣಂ ಸಪ್ತಾಹವನ್ನು ಸೆ.6ರಿಂದ 12ರವರೆಗೆ ಆಯೋಜಿಸಲು ನಿರ್ಧರಿಸಲಾಗಿದೆ.
ಈ ಹಿಂದೆ ಓಣಂ ವಾರದ ಆಚರಣೆಯನ್ನು 2019 ರಲ್ಲಿ ಆಯೋಜಿಸಲಾಗಿತ್ತು. ಕೋವಿಡ್ ಸಾಂಕ್ರಾಮಿಕ ರೋಗದಿಂದಾಗಿ ಕಳೆದ ಎರಡು ವರ್ಷಗಳಿಂದ ಓಣಂ ವಾರದ ಆಚರಣೆ ಇರಲಿಲ್ಲ. 1980 ರ ದಶಕದಲ್ಲಿ, ಓಣಂ ವಾರದ ಆಚರಣೆಯನ್ನು ರಾಜ್ಯದಲ್ಲಿ ಆಯೋಜಿಸಲು ಪ್ರಾರಂಭಿಸಲಾಯಿತು.
ರಾಜ್ಯ ಮಟ್ಟದ ಓಣಂ ಆಚರಣೆಗೆ ಐದು ಕೋಟಿ ರೂ.ಮೀಸಲಿರಿಸಲಾಗಿದೆ. ಡಿಟಿಪಿಸಿ ನಡೆಸುವ ಜಿಲ್ಲಾ ಮಟ್ಟದ ಓಣಂ ಆಚರಣೆಗೆ 2.47 ಕೋಟಿ ರೂ.ನೀಡಲಾಗುತ್ತದೆ. ಆಚರಣೆಗೆ ಜಿಲ್ಲೆಗಳಿಗೆ ಮೀಸಲಿಟ್ಟ ಹಣದಲ್ಲಿ ಏರುಪೇರಾಗಿದ್ದು ಏಕೆ ಎಂಬುದು ತಿಳಿದುಬಂದಿಲ್ಲ. ಓಣಂ ಆಚರಣೆಗೆ ವಿವಿಧ ಜಿಲ್ಲೆಗಳಿಗೆ 8ರಿಂದ 36 ಲಕ್ಷ ರೂ.ವರೆಗೂ ವಿವಿಧ ರೀತಿಯಲ್ಲಿ ಹಣ ಮಂಜೂರಾಗಿದೆ.
ಓಣಂ ಆಚರಣೆ (ಲಕ್ಷಗಳಲ್ಲಿ) ಆಯೋಜಿಸಲು ಜಿಲ್ಲೆಗಳಿಗೆ ಅನುಮತಿಸಲಾದ ಮೊತ್ತ- ತಿರುವನಂತಪುರಂ- 27, ಕೊಲ್ಲಂ- 27, ಕಣ್ಣೂರು- 27, ಎರ್ನಾಕುಳಂ- 36, ಕೋಝಿಕ್ಕೋಡ್- 36, ತ್ರಿಶೂರ್- 30, ಆಲಪ್ಪುಳ- 8, ಪತ್ತನಂತಿಟ್ಟ- 8, ಕೊಟ್ಟಾಯಂ- 8, ಇಡುಕ್ಕಿ 8, ಪಾಲಕ್ಕಾಡ್ - 8, ಮಲಪ್ಪುರಂ- 8, ವಯನಾಡ್- 8 ಮತ್ತು ಕಾಸರಗೋಡು- 8.
ಓಣಂ ಕಾಲದ ಪ್ರಯಾಣಕ್ಕೆ ದರ ಹೆಚ್ಚಿಸಿದ ಕೆ.ಎಸ್.ಆರ್.ಟಿ.ಸಿ: ಫ್ಲೆಕ್ಸಿ ಶುಲ್ಕಗಳು ಅನ್ವಯ
0
ಆಗಸ್ಟ್ 01, 2022
Tags