ತಿರುವನಂತಪುರ: ಆಟೋ ಚಾಲಕರ ಅಜಾಗರೂಕತೆಯಿಂದ ಅಪಘಾತಗಳು ಸಂಭವಿಸುತ್ತಿರುವುದು ಹೆಚ್ಚಳಗೊಳ್ಳುತ್ತಿರುವ ಮಧ್ಯೆ ಸುರಕ್ಷತಾ ಮಾರ್ಗಸೂಚಿಗಳನ್ನು ಅನುಸರಿಸುವಂತೆ ಕೇರಳ ಪೋಲೀಸರು ನಿರ್ದೇಶನ ನೀಡಿದ್ದಾರೆ.
ಫೇಸ್ ಬುಕ್ ಪೋಸ್ಟ್ ನಲ್ಲಿ ಕೇರಳ ಪೋಲೀಸರು, ಯಾರೊಬ್ಬರೂ ಊಹಿಸಲು ಸಾಧ್ಯವಾಗದ ರೀತಿಯಲ್ಲಿ ನಡುರಸ್ತೆಯಲ್ಲಿ ಕ್ಷಿಪ್ರವಾಗಿ ಚಲಿಸುವ ಕೆಲವು ಆಟೋ ಚಾಲಕರಿಂದಾಗಿ ಎಲ್ಲಾ ಚಾಲಕರನ್ನು ದೂಷಿಸಬೇಕಾಗಿದೆ ಎಂದು ಹೇಳಿದ್ದಾರೆ. ವಿಡಿಯೋ ಶೇರ್ ಮಾಡುವ ಮೂಲಕ ಪೋಲೀಸರು ನಿರ್ದೇಶನ ನೀಡಿದ್ದಾರೆ.
ಆಟೋ ಚಾಲಕರು ಇಂಡಿಕೇಟರ್ ಹಾಕದೆ, ಸಿಗ್ನಲ್ ನೀಡದೆ, ಹಿಂಬದಿಯಿಂದ ಬರುವ ವಾಹನಗಳತ್ತ ಗಮನ ಹರಿಸದೆ ಏಕಾಏಕಿ ಕಟಿಂಗ್ ಮಾಡುವುದರಿಂದ ಅಪಘಾತಗಳ ಅಪಾಯ ಹೆಚ್ಚುತ್ತಿದೆ. ಮುಂದಿನ ವಾಹನದ ಅನಿರೀಕ್ಷಿತ ತಿರುವುಗಳಿಂದ ಹಿಂದಿನ ವಾಹನಗಳು ಹಠಾತ್ ಬ್ರೇಕ್ ಮತ್ತು ನಿಯಂತ್ರಣವನ್ನು ಕಳೆದುಕೊಳ್ಳುತ್ತವೆ.
ಆಟೋರಿಕ್ಷಾ ಮೂರು ಚಕ್ರಗಳಲ್ಲಿ ಚಲಿಸುವುದರಿಂದ ಸುಲಭವಾಗಿ ಚಲಿಸಬಹುದಾದ ವಾಹನವಾಗಿದೆ. ಜೊತೆಗೆ ಆಟೋರಿಕ್ಷಾ ಸುಲಭವಾಗಿ ಪಲ್ಟಿ ಹೊಡೆಯುವ ವಾಹನವೂ ಹೌದು. ಯು-ಟರ್ನ್ ತೆಗೆದುಕೊಳ್ಳುವ ಮೊದಲು, ಇಂಡಿಕೇಟರ್ ಹಾಕಿಕೊಂಡು ರಸ್ತೆಯ ಎಡಭಾಗದಲ್ಲಿ ನಿಂತ ನಂತರ, ವಾಹನವು ಬಲಕ್ಕೆ ತಿರುಗುತ್ತದೆ ಎಂದು ಸಂಕೇತ ಭಾμÉಯಲ್ಲಿ ಸಿಗ್ನಲ್ ತೋರಿಸಿದ ಬಳಿಕ, ಯಾವುದೇ ವಾಹನಗಳು ಬರದಂತೆ ನೋಡಿಕೊಳ್ಳಿ ಎಂದು ಸೂಚನೆಯಲ್ಲಿ ಹೇಳಲಾಗಿದೆ. ಹಿಂದಿನಿಂದ ಯು-ಟರ್ನ್ ತೆಗೆದುಕೊಳ್ಳಿ ಎಂದು ತಿಳಿಸಲಾಗಿದೆ.
ವೀಡಿಯೋ ಗಮನಿಸಿ: വീഡിയോ