ತಿರುವನಂತಪುರ: ಆನ್‍ಲೈನ್ ರಮ್ಮಿ ಆಟಗಳು ಸೇರಿದಂತೆ ಇತರ ಜೂಜು ಆಟಗಳನ್ನು ನಿಯಂತ್ರಿಸಲು ಲೋಪದೋಷ ಮುಕ್ತ ಮತ್ತು ಪರಿಣಾಮಕಾರಿ ತಿದ್ದುಪಡಿಯನ್ನು ಸರ್ಕಾರ ಪರಿಗಣಿಸುತ್ತಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ.
ಎಪಿ ಅನಿಲ್ ಕುಮಾರ್ ಅವರ ಮನವಿ ಸಲ್ಲಿಕೆಗೆ ನೀಡಿದ ಉತ್ತರದಲ್ಲಿ ಮುಖ್ಯಮಂತ್ರಿಗಳು ಈ ಬಗ್ಗೆ ಸ್ಪಷ್ಟಪಡಿಸಿದ್ದಾರೆ.
ಪ್ರಸ್ತುತ ಆನ್‍ಲೈನ್ ರಮ್ಮಿಗೆ ಯಾವುದೇ ನಿμÉೀಧವಿಲ್ಲದ ಕಾರಣ, ಪೋಲೀಸ್ ಮತ್ತು ಇತರ ಇಲಾಖೆಗಳು ಶಾಲಾ-ಕಾಲೇಜುಗಳಲ್ಲಿ ಬಲವಾದ ಜಾಗೃತಿ ಕಾರ್ಯಕ್ರಮಗಳನ್ನು ನಡೆಸುತ್ತಿವೆ. ಸಾಮಾಜಿಕ ಪೋಲೀಸ್ ವ್ಯವಸ್ಥೆ, ವಿದ್ಯಾರ್ಥಿ ಪೋಲೀಸ್ ಕೆಡೆಟ್‍ಗಳ ವಿವಿಧ ಯೋಜನೆಗಳು ಮತ್ತು ಮಾಧ್ಯಮಗಳ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ. ಆನ್‍ಲೈನ್ ರಮ್ಮಿ ಗೇಮ್‍ಗಳ ಹೆಸರಿನಲ್ಲಿ ವಂಚನೆಗಳು ಮತ್ತು ಇತರ ಸೈಬರ್ ಅಪರಾಧಗಳ ವಿರುದ್ಧ ಅಸ್ತಿತ್ವದಲ್ಲಿರುವ ಕಾನೂನಿನ ಪ್ರಕಾರ ಪೋಲೀಸರು ಕಠಿಣ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ ಎಂದು ಮುಖ್ಯಮಂತ್ರಿ ತಿಳಿಸಿದರು.
ಫೆಬ್ರವರಿ 2021 ರಲ್ಲಿ, ಆನ್‍ಲೈನ್ ರಮ್ಮಿಯ ಮೇಲೆ ಬೆಟ್ಟಿಂಗ್ ನ್ನು ನಿμÉೀಧಿಸಲು 1960 ರ ಕೇರಳ ಗೇಮಿಂಗ್ ಆಕ್ಟ್ ಅನ್ನು ತಿದ್ದುಪಡಿ ಮಾಡಲಾಯಿತು. ಆದರೆ ಇದರ ವಿರುದ್ಧ ಗೇಮಿಂಗ್ ಕಂಪನಿಗಳು ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಪರಿಗಣಿಸಿದ ಹೈಕೋರ್ಟ್ ಏಕ ಪೀಠ ತಿದ್ದುಪಡಿಯನ್ನು ರದ್ದುಗೊಳಿಸಿದೆ. ಇದರ ವಿರುದ್ಧ ಸರ್ಕಾರ ಸಲ್ಲಿಸಿರುವ ಮೇಲ್ಮನವಿ ಹೈಕೋರ್ಟ್‍ನಲ್ಲಿ ವಿಚಾರಣೆ ಹಂತದಲ್ಲಿದೆ. ರಮ್ಮಿ ಸೇರಿದಂತೆ ಆನ್‍ಲೈನ್ ಆಟಗಳನ್ನು ನಿಯಂತ್ರಿಸುವ ಪ್ರಕ್ರಿಯೆಯು ಹೈಕೋರ್ಟ್‍ನ ಅಂತಿಮ ತೀರ್ಪಿಗೆ ಒಳಪಟ್ಟಿರುತ್ತದೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.
ರಾಜ್ಯದಲ್ಲಿ ಆನ್‍ಲೈನ್ ರಮ್ಮಿ ಜೂಜಾಟವು ಅನೇಕ ಜನರನ್ನು ದೊಡ್ಡ ಆರ್ಥಿಕ ಹೊಣೆಗಾರಿಕೆ ಮತ್ತು ಆತ್ಮಹತ್ಯೆಗೆ ತಳ್ಳಿರುವ ಪರಿಸ್ಥಿತಿಯಲ್ಲಿ ಅನಿಲ್ ಕುಮಾರ್ ಅವರ ಮನವಿ ಸಲ್ಲಿಕೆಯಾಗಿದೆ. ಆನ್‍ಲೈನ್ ರಮ್ಮಿಗೆ ಜನರನ್ನು ಆಕರ್ಷಿಸಲು ಬೃಹತ್ ಜಾಹೀರಾತು ಪ್ರಚಾರವೂ ನಡೆಯುತ್ತಿದೆ ಎಂದು ಮುಖ್ಯಮಂತ್ರಿ ಗಮನಸೆಳೆದರು. ಇಂತಹ ಜಾಹಿರಾತುಗಳಲ್ಲಿ ಕಲಾಲೋಕದ ಗಣ್ಯರು ಕಾಣಿಸಿಕೊಳ್ಳುತ್ತಿರುವುದು ದುರದೃಷ್ಟಕರ ಸನ್ನಿವೇಶ. ಸಾಮಾಜಿಕ ವಿಕೋಪಕ್ಕೆ ಕಾರಣವಾಗುವ ಇಂತಹ ಕ್ರಮಗಳಿಂದ ಹಿಂದೆ ಸರಿಯಲು ಕೆಲವರಾದರೂ ಸಿದ್ಧರಿದ್ದಾರೆ ಎಂದು ಮುಖ್ಯಮಂತ್ರಿಗಳು ತಮ್ಮ ಉತ್ತರದಲ್ಲಿ ಹೇಳಿದರು.
ಆನ್‍ಲೈನ್ ರಮ್ಮಿ ಆಟಗಳನ್ನು ನಿಯಂತ್ರಿಸಲು ಸರ್ಕಾರವು ತಿದ್ದುಪಡಿಯನ್ನು ಪರಿಗಣಿಸುತ್ತಿದೆ: ಮುಖ್ಯಮಂತ್ರಿ: ಕೆಲವು ಕಲಾವಿದರು ಮಾದರಿಯಾಗಿ ಜಾಹೀರಾತಿನಿಂದ ಹಿಂದೆ ಸರಿದಿರುವುದು ಸ್ತುತ್ಯರ್ಹ
0
ಆಗಸ್ಟ್ 23, 2022