ಕೋಝಿಕ್ಕೋಡ್: ಮುಸ್ಲಿಂ ಲೀಗ್ ಎಲ್ ಡಿ ಎಫ್ ನೊಂದಿಗೆ ಸೇರ್ಪಡೆಗೊಳ್ಳದು ಎಂದು ಹೇಳಲು ಸಾಧ್ಯವಿಲ್ಲ ಎಂದು ಹಿರಿಯ ಮುಖಂಡ ಹಾಗೂ ಮಾಜಿ ಸಚಿವ, ಮುಸ್ಲಿಂ ಲೀಗ್ ಹಾಲಿ ಶಾಸಕ ಎಂ.ಕೆ.ಮುನೀರ್ ಬಾಂಬ್ ವೊಂದನ್ನು ಸಿಡಿಸಿ ಸಂಚಲ ಸೃಷ್ಟಿಸಿದ್ದಾರೆ.
ಲೀಗ್ ಕುರುಡಾಗಿ ಸಿಪಿಎಂ ವಿರೋಧಿಯಲ್ಲ. ಸೈದ್ಧಾಂತಿಕ ಭಿನ್ನಾಭಿಪ್ರಾಯ ಹೊಂದಿರುವವರು ಮುಂದಾಳುವಾಗಿ ಕೆಲಸ ಮಾಡಲು ಅಡ್ಡಿಯಿಲ್ಲ ಎಂದರು.
ಲೀಗ್ ಎಲ್ ಡಿಎಫ್ ಗೆ ಬಂದರೆ ಪರವಾಗಿಲ್ಲ ಎಂಬ ಅಭಿಪ್ರಾಯ ಸಿಪಿಎಂನಲ್ಲಿದೆ ಎಂದು ಮುನೀರ್ ಹೇಳಿದರು. ಅಸೆಂಬ್ಲಿಯಲ್ಲಿ ನೋಡಿದರೆ ಲೀಗ್ ವಿರುದ್ದ ಆಡಳಿತರೂಢ ಪಕ್ಷ ನಿರಂತರ ದಾಳಿ ನಡೆಸುತ್ತಿದೆ. ಎಡರಂಗದ ಆಡಳಿತದ ವಿರುದ್ದ ಭಿನ್ನಾಭಿಪ್ರಾಯಗಳನ್ನು ವ್ಯಕ್ತಪಡಿಸುವ ಹಕ್ಕು ಲೀಗಿಗಿದೆ. ಹಾಗೆಂದು ಎಡರಂಗವನ್ನಲ್ಲ ಎಂದು ತಿಳಿಸಿದರು.
ಈ ಹಿಂದೆ ಮುಸ್ಲಿಂ ಲೀಗ್ ಎಲ್ ಡಿ ಎಫ್ ಗೆ ಸೇರಲು ಯೋಜಿಸುತ್ತಿದೆ ಎಂಬ ವರದಿಗಳು ಬಂದಿದ್ದವು. ಹಿರಿಯ ನಾಯಕ ಕುನ್ಹಾಲಿಕುಟ್ಟಿ ಸುತ್ತ ಸುದ್ದಿ ಸುತ್ತುತ್ತಿತ್ತು. ಕಾಂಗ್ರೆಸ್ ತೊರೆದು ಮುಸ್ಲಿಂ ಲೀಗ್ ಸೇರುವ ಬಗ್ಗೆ ಯೋಚಿಸುವಂತೆ ಇ.ಪಿ.ಜಯರಾಜನ್ ಹೇಳಿಕೆ ನೀಡಿದ ನಂತರ, ಸದ್ಯಕ್ಕೆ ಎಲ್ ಡಿ ಎಫ್ ಸೇರುವ ಇರಾದೆ ಇಲ್ಲ ಎಂದು ಕುನ್ಹಾಲಿಕುಟ್ಟಿ ಸ್ಪಷ್ಟಪಡಿಸಿದ್ದರು. ಈ ಮಧ್ಯೆ ಮುನೀರ್ ಅವರ ಓರೆ ನೋಟದ ಹೇಳಿಕೆ ಸಂಚಲನ ಮೂಡಿಸಿದ್ದು, ರಾಜಕೀಯ ನಿರೀಕ್ಷಕರ ಕಲ್ಪನೆಯಂತೆ ಮುಂದಿನ ಚುನಾವಣೆ ವೇಳೆ ಕಾಂಗ್ರೆಸ್ಸ್ ಏಕಾಂಗಿಯಾಗುವ ಸಾಧ್ಯತೆ ನಿಚ್ಚಳವಾಗಿದೆ.
ಮುಸ್ಲಿಂಲೀಗ್ ಗೆ ಸಿಪಿಎಂನಲ್ಲಿ ಕುರುಡು ವಿರೋಧವಿಲ್ಲ; ಮುಸ್ಲಿಂ ಲೀಗ್ ಎಲ್ ಡಿಎಫ್ ನೊಂದಿಗೆ ಸೇರ್ಪಡೆಗೊಳ್ಳದು ಎಂದು ಹೇಳಲಾಗದು; ಎಂ ಕೆ ಮುನೀರ್
0
ಆಗಸ್ಟ್ 08, 2022
Tags