ಕಾಸರಗೋಡು: ನಗರಸಭೆ ವತಿಯಿಂದ ಪಿಎಂವೈ-ಲೈಫ್ ಯೋಜನೆಯನ್ವಯ ಸ್ವಂತ ಭೂಮಿ ಹೊಂದಿದ್ದು, ಮನೆ ನಿರ್ಮಾಣಕ್ಕಾಗಿ ಒಟ್ಟು 114ಮಂದಿ ಫಲಾನುಭವಿಗಳ ಡಿ.ಪಿ.ಆರ್ ನಗರಸಭೆ ತಯಾರಿಸಿದೆ. ಫಲಾನುಭವಿಗಳ ಮಾಹಿತಿಯನ್ನು ಎಂಐಎಸ್ ಮೂಲಕ ದಾಖಲಿಸುವ ನಿಟ್ಟಿನಲ್ಲಿ ಭೂಮಿಯ ಮಾಹಿತಿ ಹಾಗೂ ವೈಯಕ್ತಿಕ ವಿವರಗಳನ್ನು ನಗರಸಭೆಯ ಪಿ.ಎಚ್ 3 ವಇಭಾಗದಲ್ಲಿ ಸಲ್ಲಿಸಬೇಕಾಗಿದೆ. ಮಾಹಿತಿ ಸಲ್ಲಿಸದವರ ಹೆಸರನ್ನು ಕೌನ್ಸೆಲಿಂಗ್ ತೀರ್ಮಾನದನ್ವಯ ಫಲಾನುಭವಿಗಳ ಪಟ್ಟಿಯಿಂದ ಹೊರತುಪಡಿಸಲಾಗುವುದು ಎಂದು ನಗರಸಭಾ ಪ್ರಕಟಣೆ ತಿಳಿಸಿದೆ.
ಪಿಎಂವೈ-ಲೈಫ್ ಯೋಜನೆ: ಶೀಘ್ರ ಮಾಹಿತಿ ಸಲ್ಲಿಸಲು ಸೂಚನೆ
0
ಆಗಸ್ಟ್ 17, 2022
Tags