ಮಧೂರು : ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕøತಿಕ ಪ್ರತಿμÁ್ಠನದ ಆಶ್ರಯದಲ್ಲಿ ಸ್ವಾತಂತ್ರ್ಯ ಅಮೃತ ಮಹೋತ್ಸವದಂಗವಾಗಿ ಕಲಾ ಸಾಂಸ್ಕೃತಿಕ ಸಾಹಿತ್ಯ ವೈಭವ ಯಶಸ್ವಿಯಾಗಿ ಜರಗಿತು. ಪ್ರತಿμÁ್ಠನದ ನೂತನ ಸಾಂಸ್ಕೃತಿಕ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಸರಗೋಡಿನ ಹಿರಿಯ ಕಿರಿಯ ಕವಿಗಳು ' ತಾಯಿ ಭಾರತಿಗೆ ಕಾವ್ಯದಾರತಿ ' ಬೆಳಗಿದರು.
ಹಿರಿಯ ಕವಿ, ಪತ್ರಕರ್ತ, ಸಂಘಟಕ ರಾಧಾಕೃಷ್ಣ.ಕೆ. ಉಳಿಯತ್ತಡ್ಕ ಅವರ ಅಧ್ಯಕ್ಷತೆಯಲ್ಲಿ ಮಧೂರು ಗ್ರಾಮ ಪಂಚಾಯತು ಅಧ್ಯಕ್ಷ ಗೋಪಾಲಕೃಷ್ಣ ಕೂಡ್ಲು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನ್ಯಾಯವಾದಿ ಪದ್ಮನಾಭ ಹೊಳ್ಳ ಮುಖ್ಯ ಅತಿಥಿಯಾಗಿ ಭಾಗವಹಿಸಿ ದೇಶ ರಕ್ಷಣೆಯ ಕುರಿತಾದ ಕವನ ವಾಚಿಸಿ ಕಾವ್ಯದ ಸಾರ್ವಕಾಲಿಕ ಮೌಲ್ಯದ ಬಗ್ಗೆ ಮಾತನಾಡಿದರು.
ವಿ.ಬಿ. ಕುಳಮರ್ವ ,ಬಾಲ ಮಧುರಕಾನನ, ನರಸಿಂಹ ಭಟ್ ಏತಡ್ಕ, ಪ್ರಭಾವತಿ ಕೆದಿಲಾಯ, ಪ್ರಮೀಳಾ ಚುಳ್ಳಿಕಾನ, ನಿರ್ಮಲಾ ಶೇಷಪ್ಪ ಖಂಡಿಗೆ, ವಿರಾಜ್ ಅಡೂರು, ವನಜಾಕ್ಷಿ ಚೆಂಬ್ರಕಾನ, ಶ್ರಧ್ಧಾ ಹೊಳ್ಳ , ಚಂದ್ರಕಲಾ ನೀರಾಳ , ಸುಭಾμï ಪೆರ್ಲ ಸ್ವರಚಿತ ಕವನಗಳನ್ನು ವಾಚಿಸಿದರು. ಪ್ರತಿμÁ್ಠನದ ಅಧ್ಯಕ್ಷ ಸಿರಿಬಾಗಿಲು ರಾಮಕೃಷ್ಣ ಮಯ್ಯ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು. ವನಜಾಕ್ಷಿ ಚೆಂಬ್ರಕಾನ ಕಾರ್ಯಕ್ರಮ ನಿರೂಪಿಸಿದರು. ಭಾಗವಹಿಸಿದ ಕವಿಗಳಿಗೆ ಸ್ಮರಣಿಕೆ, ಪ್ರಮಾಣ ಪತ್ರವನ್ನು ಪ್ರತಿμÁ್ಠನದ ಅಧ್ಯಕ್ಷರು ನೀಡಿ ಗೌರವಿಸಿದರು.