HEALTH TIPS

ರಿಲಯನ್ಸ್ ರೀಟೇಲ್‌ಗೆ ಪುತ್ರಿ ಇಶಾ ಮುಖ್ಯಸ್ಥೆ: ಮುಖೇಶ್ ಅಂಬಾನಿ ಘೋಷಣೆ!

 

      ಮುಂಬೈ: ಬಿಲಿಯನೇರ್ ಮುಖೇಶ್ ಅಂಬಾನಿ ಸೋಮವಾರ ತಮ್ಮ ಮಗಳು ಇಶಾ ಅಂಬಾನಿ ಅವರನ್ನು ರಿಲಯನ್ಸ್‌ನ ರೀಟೇಲ್‌ ವ್ಯವಹಾರದ ಮುಖ್ಯಸ್ಥೆ ಎಂದು ಪರಿಚಯಿಸಿದ್ದಾರೆ. ಇಶಾ ಅವರನ್ನು ಭಾರತದ ಪ್ರಮುಖ ಸಂಸ್ಥೆಯ ಉತ್ತರಾಧಿಕಾರಿಯನ್ನಾಗಿ ಘೋಷಿಸಿದ್ದಾರೆ.

                 ಅಂಬಾನಿ ಈ ಹಿಂದೆ ಮಗ ಆಕಾಶ್ ಅವರನ್ನು ರಿಲಾಯನ್ಸ್ ಗುಂಪಿನ ಟೆಲಿಕಾಂ ವಿಭಾಗದ ರಿಲಯನ್ಸ್ ಜಿಯೋ ಅಧ್ಯಕ್ಷರನ್ನಾಗಿ ಹೆಸರಿಸಿದ್ದರು.

                ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ 45ನೇ ವಾರ್ಷಿಕ ಷೇರುದಾರರ ಸಭೆಯಲ್ಲಿ ರೀಟೆಲ್ ವ್ಯವಹಾರದೊಂದಿಗೆ ವಾಟ್ಸಾಪ್ ಅನ್ನು ಸಂಯೋಜಿಸುವ ಕುರಿತು ಮಾತನಾಡಲು ಅಂಬಾನಿ, ಇಶಾ ಅವರನ್ನು ಕರೆದರು. ಈ ಮೂಲಕ ರೀಟೆಲ್ ಬ್ಯುಸಿನೆಸ್‌ನ ಮುಖ್ಯಸ್ಥೆ ಎಂದು ಪರಿಚಯಿಸಿದರು.

             30 ವರ್ಷದ ಇಶಾ, ವಾಟ್ಸಾಪ್ ಬಳಸಿ ಆನ್‌ಲೈನ್‌ನಲ್ಲಿ ದಿನಸಿ ಆರ್ಡರ್‌ ಮಾಡುವುದು ಮತ್ತು ಪಾವತಿ ಮಾಡುವ ಕುರಿತು ಪ್ರಸೆಂಟೇಷನ್ ನೀಡಿದರು. 65 ವರ್ಷದ ಅಂಬಾನಿ ಅವರಿಗೆ ಆಕಾಶ್ ಮತ್ತು ಇಶಾ ಎಂಬ ಅವಳಿ ಮಕ್ಕಳು ಮತ್ತು ಕಿರಿಯ ಮಗ ಅನಂತ್ ಇದ್ದಾರೆ.ಪಿರಾಮಲ್ ಗ್ರೂಪ್‌ನ ಅಜಯ್ ಮತ್ತು ಸ್ವಾತಿ ಪಿರಾಮಲ್ ಅವರ ಪುತ್ರ ಆನಂದ್ ಪಿರಮಾಲ್ ಅವರನ್ನು ಇಶಾ 2018ರಲ್ಲಿ ವಿವಾಹವಾಗಿದ್ದಾರೆ.

              ರಿಲಯನ್ಸ್ ಮೂರು ವಿಸ್ತೃತ ವ್ಯವಹಾರಗಳನ್ನು ಹೊಂದಿದೆ. ಅವುಗಳೆಂದರೆ ತೈಲ ಸಂಸ್ಕರಣೆ ಮತ್ತು ಪೆಟ್ರೋಕೆಮಿಕಲ್ಸ್, ರೀಟೇಲ್ ಮತ್ತು ದೂರಸಂಪರ್ಕವನ್ನು ಒಳಗೊಂಡ ಡಿಜಿಟಲ್ ಸೇವೆಗಳನ್ನು ಹೊಂದಿದೆ. ಚಿಲ್ಲರೆ ಮತ್ತು ಡಿಜಿಟಲ್ ಸೇವೆಗಳನ್ನು ಪ್ರತ್ಯೇಕ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಗಳನ್ನಾಗಿ ರೂಪಿಸಲಾಗಿದೆ. ತೈಲದಿಂದ ರಾಸಾಯನಿಕ ಅಥವಾ O2C ವ್ಯವಹಾರವು ರಿಲಯನ್ಸ್‌ನ ಕ್ರಿಯಾತ್ಮಕ ವಿಭಾಗವಾಗಿದೆ. ನ್ಯೂ ಎನರ್ಜಿ ವ್ಯವಹಾರವು ಪೋಷಕ ಸಂಸ್ಥೆಯೊಂದಿಗಿದೆ.

            ಅಂಬಾನಿ ಅವರ ಮೂರನೇ ಮಗ 26ರ ಹರೆಯದ ಅನಂತ್ ಅವರು ಸಂಘಟಿತ ಸಂಸ್ಥೆಗಳ O2C ಮತ್ತು ನ್ಯೂ ಎನರ್ಜಿ ವ್ಯವಹಾರವನ್ನು ಮುನ್ನಡೆಸಬಹುದು ಎನ್ನಲಾಗಿದೆ.


 

 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries