ಕಾಸರಗೋಡು: ಕೇರಳ ರಾಜ್ಯ ಸಣ್ಣ ಕೈಗಾರಿಕೆಗಳ ಸಂಘ ಕಾಸರಗೋಡು ಜಿಲ್ಲಾ ಘಟಕದ 38ನೇ ವಾರ್ಷಿಕ ಮಹಾಸಭೆಯು ವಿದ್ಯಾನಗರ ಇಂಡಸ್ಟ್ರಿಯಲ್ ಎಸ್ಟೇಟ್, ವಿದ್ಯಾನಗರ ಭವನ ಜಿಲ್ಲಾ ಕಛೇರಿಯಲ್ಲಿ ನಡೆಯಿತು.
ಕಾಸರಗೋಡು ನಗರಸಭಾ ಅಧ್ಯಕ್ಷ ವಿ.ಎಂ.ಮುನೀರ್ ಸಮಾರಂಭ ಉದ್ಘಾಟಿಸಿದರು. ಜಿಲ್ಲಾ ಕೈಗಾರಿಕಾ ಕೇಂದ್ರದ ಪ್ರಧಾನ ವ್ಯವಸ್ಥಾಪಕ ಕೆ. ಸಜಿತ್ ಕುಮಾರ್ ಮುಖ್ಯ ಅತಿಥಿಯಾಗಿದ್ದರು. ಸಂಘಟನೆ ಜಿಲ್ಲಾಧ್ಯಕ್ಷ ಪಿ.ವಿ.ರವೀಂದ್ರನ್ ಅಧ್ಯಕ್ಷತೆ ವಹಿಸಿದ್ದರು. ಕೇರಳ ಸಾಮಾಜಿಕ ಭದ್ರತಾ ನಿಧಿಯ ಮಾಜಿ ಅಧ್ಯಕ್ಷ ಕೆ.ಜೆ.ಇಮ್ಯಾನುವೆಲ್ ಕೆಎಸ್‍ಎಸ್‍ಎಫ್ ನ ಕಾರ್ಯಚಟುವಟಿಕೆಗಳ ಕುರಿತು ಮಾಹಿತಿ ನೀಡಿದರು. ಜಿಲ್ಲಾ ಕೈಗಾರಿಕಾ ಕೇಂದ್ರದ ಪ್ರಧಾನ ವ್ಯವಸ್ಥಾಪಕರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸ್ಟೂಡೆಂಟ್ ಅವಾರ್ಡ್ ವಿಜೇತ ವಿದ್ಯಾರ್ಥಿಗಳಿಗೆ ಹಾಗೂ ಉತ್ತಮ ಸಾಧನೆ ತೋರಿದ ಉದ್ಯಮಿಗಳಿಗೆ ಸ್ಮರಣಿಕೆ ಮತ್ತು ನಗದು ಪುರಸ್ಕಾರ ವಿತರಿಸಲಾಯಿತು.
ಜಿಲ್ಲಾ ಕಾರ್ಯದರ್ಶಿ ಕೆ.ವಿ.ಸುಗತನ್ ಸ್ವಾಗತಿಸಿದರು. ಜಿಲ್ಲಾ ಕೋಶಾಧಿಕಾರಿ ಮುಹಮ್ಮದ್ ಅಲಿ ಲೆಕ್ಕಪತ್ರ, ಜಿಲ್ಲಾ ಉಪಾಧ್ಯಕ್ಷ ಎ. ಪ್ರಸನ್ನಕುಮಾರ್ ಠರಾವು ಮಂಡಿಸಿದರು. ಜಿಲ್ಲಾ ಜತೆ ಕಾರ್ಯದರ್ಶಿ ಕೆ.ಎ.ಮುಜೀಬ್ ವಂದಿಸಿದರು.
ಈ ಸಂದರ್ಭ 2022-24ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಮತ್ತು ಪದವಿಪ್ರದಾನ ಸಮಾರಂಭ ನಡೆಯಿತು. ರಾಜಾರಾಮ ಎಸ್. ಪೆರ್ಲ ಅಧ್ಯಕ್ಷ, ಕೆ.ಎ.ಮುಜೀಬ್ ಉಪಾಧ್ಯಕ್ಷ, ಕೆ.ವಿ.ಸುಗತನ್ ಕಾರ್ಯದರ್ಶಿ, ಮಹಮ್ಮದ್ ಅಲಿ ರೆಡ್ ವುಡ್ ಜತೆಕಾರ್ಯದರ್ಶಿ, ಎನ್.ಎ.ಸುಲೈಮಾನ್ ಕೋಶಾಧಿಕಾರಿ, 14 ಮಂದಿ ಜಿಲ್ಲಾ ಸಮಿತಿ ಸದಸ್ಯರು ಹಾಗೂ 12 ಜನರಲ್ ಕೌನ್ಸಿಲ್ ಸದಸ್ಯರನ್ನು ಆಯ್ಕೆ ಮಾಡಲಾಯಿತು.
ರಾಜ್ಯ ಸಣ್ಣ ಕೈಗಾರಿಕೆಗಳ ಸಂಘ ವಾರ್ಷಿಕ ಮಹಾಸಭೆ, ಪದಾಧಿಕಾರಿಗಳ ಆಯ್ಕೆ
0
ಆಗಸ್ಟ್ 20, 2022
Tags