ಬದಿಯಡ್ಕ: ಭಾರತೀಯ ಮಜ್ದೂರ್ ಸಂಘ ಮಾನ್ಯ ಘಟಕದ ವತಿಯಿಂದ ಅಂಚೆ ಇಲಾಖೆಯ ಸಮೂಹ ಅಪಘಾತ ಸುರಕ್ಷಾ ಪಾಲಿಸಿಯ ನೊಂದಾವಣಾ ಶಿಬಿರ ಮಾನ್ಯ ಶಾಖಾ ಕಛೇರಿಯಲ್ಲಿ ಜರಗಿತು. ಬಿಎಂಎಸ್ ಕೆಂಪುಕಲ್ಲು ಕಾರ್ಮಿಕ ಸಂಘದ ಜಿಲ್ಲಾ ಅಧ್ಯಕ್ಷ ಪ್ರಕಾಶ್ ಕಾರ್ಮಾರು ಅಧ್ಯಕ್ಷತೆ ವಹಿಸಿದ್ದರು. ಕಾರ್ಮಾರು ಮಹಾವಿಷ್ಣು ಕ್ಷೇತ್ರ ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ಮಹೇಶ್ ವಳಕ್ಕುಂಜ ಉದ್ಘಾಟಿಸಿದರು. ಅಂಚೆ ಇಲಾಖೆಯ ಅಧಿಕಾರಿಗಳಾದ ರಂಜುಕೃಷ್ಣನ್ ಇಲಾಖೆಯ ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಬಿಎಂಎಸ್ ಕುದ್ರೆಪ್ಪಾಡಿ ವಲಯ ಉಪಾಧ್ಯಕ್ಷ ಉಮೇಶ್ ಕಾರ್ಮಾರು, ಬಾಲಸುಬ್ರಹ್ಮಣ್ಯ ಮಲ್ಲಡ್ಕ, ಮಂಜುನಾಥ ಮಾನ್ಯ, ಪುನೀತ್ ಕಾರ್ಮಾರು, ಅಂಚೆ ಇಲಾಖೆಯ ಪ್ರಕಾಶ್ ಪೆರ್ಣೆ ಮತ್ತಿತರರು ಉಪಸ್ಥಿತರಿದ್ದರು.
ಮಾನ್ಯದಲ್ಲಿ ಅಪಘಾತ ಸುರಕ್ಷಾ ನೊಂದಾವಣಾ ಶಿಬಿರ
0
ಆಗಸ್ಟ್ 08, 2022