ನವದೆಹಲಿ: ದಕ್ಷಿಣ ಕೊರಿಯಾದ ಬೂಸಾನ್ ನಗರದಲ್ಲಿ ನಡೆಯುತ್ತಿರುವ ಅಂತರರಾಷ್ಟ್ರೀಯ ಖಗೋಳವಿಜ್ಞಾನ ಒಕ್ಕೂಟದ ಸಾಮಾನ್ಯ ಸಭೆಯಲ್ಲಿ (ಐಎಯುಜಿಎ) ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್‌ಸಿ) ಗೋಪಾಲ್ ಹಾಜ್ರಾ ಸೇರಿದಂತೆ ಭಾರತದ ನಾಲ್ವರು ಖಗೋಳವಿಜ್ಞಾನಿಗಳು ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಸೂರ್ಯ ಕುರಿತ ವಿದ್ಯಮಾನಗಳ ಅಧ್ಯಯನಕ್ಕೆ ಸಂಬಂಧಿಸಿದ ಸಂಶೋಧನೆ/ಅಧ್ಯಯನದಲ್ಲಿ ಗಮನಾರ್ಹ ಸಾಧನೆ ಮಾಡಿದವರನ್ನು ಐಎಯುಜಿಎ ಪ್ರಶಸ್ತಿಗೆ ಆಯ್ಕೆ ಮಾಡಿದೆ.
ಹಾಜ್ರಾ ಅವರು ಸೌರಕಲೆಗಳಿಗೆ ಸಂಬಂಧಿಸಿದ ವಿದ್ಯಮಾನ ವಿವರಿಸಲು ಕಂಪ್ಯೂಟರ್ ಆಧಾರಿತ ಮೂರು ಆಯಾಮಗಳ ಮಾದರಿಗಳನ್ನು ಅಭಿವೃದ್ಧಿಪಡಿಸಿದ್ದಾರೆ.
ಖಗೋಳವಿಜ್ಞಾನಿಗಳಾದ ಪ್ರಾಂತಿಕಾ ಭೌಮಿಕ್ (ಐಐಎಸ್‌ಇಆರ್ ಕೋಲ್ಕತ್ತ), ರಿತಿಕಾ ಜೋಶಿ (ಎಆರ್‌ಐಇಎಸ್, ನೈನಿತಾಲ್) ಹಾಗೂ ಸೌವಿಕ್ ಬೋಸ್ (ಓಸ್ಲೊ ವಿ.ವಿ) ಅವರಿಗೂ ಪ್ರಶಸ್ತಿ ಲಭಿಸಿದೆ.