ಮಂಜೇಶ್ವರ :ಕಾಸರಗೋಡು ಜಿಲ್ಲಾ ಕುಲಾಲ ಸಂಘದ 38 ನೇ ವಾರ್ಷಿಕ ಮಹಾಸಭೆ ಭಾನುವಾರ ಪೈವಳಿಕೆ ಕುಲಾಲ ಸಮಾಜ ಮಂದಿರ ಲಾಲ್‍ಬಾಗ್, ಕಾಯರ್ ಕಟ್ಟೆಯಲ್ಲಿ ಜರಗಿತು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಸರಗೋಡು ಜಿಲ್ಲಾ ಕುಲಾಲ ಸಂಘದ ಅಧ್ಯಕ್ಷ ನ್ಯಾಯವಾದಿ ರವೀಂದ್ರ ಮುನ್ನಿಪ್ಪಾಡಿ ವಹಿಸಿದ್ದು, ನಿವೃತ್ತ ಡೆಪ್ಯೂಟಿ ಕಮಾಂಡಂಟ್ ಚಂದಪ್ಪ ಮೂಲ್ಯ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.ಮುಖ್ಯ ಅಥಿತಿಗಳಾಗಿ ಕುಲಾಲ ಭವನ ಕಟ್ಟಡ ಸಮಿತಿಯ ಅಧ್ಯಕ್ಷ ಲಯನ್ ಅನಿಲ್ ದಾಸ್, ಉದ್ಯಮಿ ಗಣೇಶ್ ಕೆ. ಓ, ಜಿ.ಪಂ.ಸದಸ್ಯೆ ಕಮಲಾಕ್ಷಿ, ನಿವೃತ ಸೈನಿಕ ಮೋಹನ್ ಕೆ. ಕಡಂಬಾರು, ಬ್ಲಾ.ಪಂ. ಸದಸ್ಯೆ ಜಯಂತಿ, ಕುಲಾಲ ಸಂಘದ ಶಾಖಾ ಅಧ್ಯಕ್ಷ ಬಾಬು ಮೂಲ್ಯ ವಾದ್ಯಪಡ್ಪು, ಜಿಲ್ಲಾ ಕುಲಾಲ ಮಹಿಳಾ ಘಟಕದ ಮಾಜಿ ಅಧ್ಯಕ್ಷೆ ಗಿರಿಜಾ ಎಸ್. ಬಂಗೇರ ಹೊಸಬೆಟ್ಟು ಮುಖ್ಯ ಅತಿಥಿಗಳಾಗಿ ಭಾವಹಿಸಿದ್ದರು. ಎಸ್. ಎಸ್. ಯಲ್ .ಸಿ, ಕರ್ನಾಟಕ ಪಿ ಯು ಸಿ ಹಾಗೂ ಕೇರಳ ಪ್ಲಸ್ ಟು ನಲ್ಲಿ ಅತೀ ಹೆಚ್ಚು ಅಂಕ ಗಳಿಸಿದ 14 ವಿದ್ಯಾರ್ಥಿಗಳಿಗೆ
ಪ್ರತಿಭಾ ಪುರಸ್ಕಾರ, ತ್ರಿಸ್ತರ ಪಂಚಾಯತಿ ಚುನಾವಣೆಯ ವಿಜೇತ ಪ್ರತಿನಿಧಿಗಳಾದ ಕಮಲಾಕ್ಷಿ ವರ್ಕಾಡಿ, ಜಯಂತಿ ಬದಿಯಡ್ಕ, ಜಯಂತಿ ಪುತ್ತಿಗೆ, ಜಯಶ್ರೀ ಕುಲಾಲ್ ಪೆರ್ಲ, ಸರಸ್ವತಿ ಎಲಿಯಾಣ, ಮಾಲತಿ ವರ್ಕಾಡಿ ಇವರಿಗೆ ಸನ್ಮಾನ, ವಿವಿಧ ಕ್ಷೇತ್ರಗಳಲ್ಲಿ ಸಾಧಕರಾದ ನಾರಾಯಣ ಚಿಪ್ಪಾರ್, ಕುಶಾಲಾಕ್ಷಿ ಕಣ್ವತೀರ್ಥ, ಗಿರಿಜಾ ಎಸ್ ಬಂಗೇರ, ಹರೀಶ್ ಕೊಟ್ಟಾರಿ, ಯೋಗೀಶ್ ಕುಲಾಲ್, ನಿರ್ಮಲ ಶೇಷಪ್ಪ, ಕುಮಾರಿ ಶರಣ್ಯ ಬಂಗೇರ ಇವರಿಗೆ ಗೌರವಾರ್ಪಣೆ, ಜಿಲ್ಲಾ ಸಂಘದ ವ್ಯಾಪ್ತಿಯ ಕುಲಾಲ ಪಂಚಾಯತಿ ಶಾಖೆಗಳ 80 ಮಂದಿ ಅತೀ ಬಡ ಮಕ್ಕಳಿಗೆ ವಿದ್ಯಾರ್ಥಿ ವೇತನ ವಿತರಣೆ, ಕರ್ನಾಟಕ ಪಿ.ಯು.ಸಿ ಪರೀಕ್ಷೆ ಯಲ್ಲಿ 4 ನೇ ರ್ಯಾಂಕ್ ಗಳಿಸಿದ ದೀಪ್ನಾಜೆ ಮುಂಡಿತ್ತಡ್ಕ ಹಾಗೂ ಕರ್ನಾಟಕ ಲೋಕಾಯುಕ್ತ ದಕ್ಷಿಣ ಕನ್ನಡ ಜಿಲ್ಲಾ ಅಭಿಯೋಜಕರು ಹಾಗೂ ಭ್ರμÁ್ಟಚಾರ ನಿಗ್ರಹ ದಳದ ಸರ್ಕಾರಿ ಅಭಿಯೋಜಕರಾಗಿ ನೇಮಕ ಗೊಂಡಿರುವ ನ್ಯಾಯವಾದಿ, ಜಿಲ್ಲಾ ಕುಲಾಲ ಸಂಘದ ಅಧ್ಯಕರೂ ಆದ ರವೀಂದ್ರ ಮುನ್ನಿಪ್ಪಾಡಿ ಯವರನ್ನು ಈ ಸಂದರ್ಭದಲ್ಲಿ ಅಭಿನಂದಿಸಿ ಗೌರವಿಸಲಾಯಿತು.
ಸಂಘಟನೆಯ ಜೊತೆ ಕಾರ್ಯದರ್ಶಿ ಸುಧೀರ್ ರಂಜನ್ ದೈಗೋಳಿ ವರದಿ ವಾಚಿಸಿದರು. ಕೋಶಾಧಿಕಾರಿ ಆನಂದ ಮಾಸ್ತರ್ ಆಯ- ವ್ಯಯ ಮಂಡಿಸಿದರು. ರವೀಂದ್ರ ಮುನ್ನಿಪ್ಪಾಡಿ ಸ್ವಾಗತಿಸಿ ವಂದಿಸಿದರು. ಹರ್ಷೇಂದ್ರ ಕಣ್ವತೀರ್ಥ ಕಾರ್ಯಕ್ರಮ ನಿರೂಪಿಸಿದರು.
ಕಾಸರಗೋಡು ಜಿಲ್ಲಾ ಕುಲಾಲ ಸಂಘ ಮಹಾಸಭೆ
0
ಆಗಸ್ಟ್ 10, 2022
Tags