HEALTH TIPS

ಪುರಿ ಜಗನ್ನಾಥನ ರತ್ನ ಭಂಡಾರ ಈಗ ಇನ್ನಷ್ಟು ನಿಗೂಢ!

 

                ಭುವನೇಶ್ವರ: ಪುರಿ ಜಗನ್ನಾಥನ 'ರತ್ನ ಭಂಡಾರ'ದಲ್ಲಿ ಏನಿದೆ ಎಂಬ ಕುತೂಹಲದಿಂದ ಸಲ್ಲಿಸಲಾದ ಮಾಹಿತಿ ಹಕ್ಕು ಅರ್ಜಿಗೆ ಜಗನ್ನಾಥ ದೇವಸ್ಥಾದ ಆಡಳಿತ (ಎಸ್‌ಜಿಟಿಎ) ಉತ್ತರ ಕೊಟ್ಟಿಲ್ಲ. ಹೀಗಾಗಿ ಭಂಡಾರದ ರಹಸ್ಯ ಈಗ ಇನ್ನಷ್ಟು ನಿಗೂಢವಾಗಿದೆ.

                ದೇಗುಲದ ಖಜಾನೆಯ ಒಳ ಕೋಣೆ ಮತ್ತೆ ತೆರೆಯಲು ಒಡಿಶಾ ಸರ್ಕಾರ ಯಾವುದೇ ಯೋಜನೆ ಹೊಂದಿಲ್ಲ ಎಂಬ ಕಾರಣ ನೀಡಿ 'ರತ್ನ ಭಂಡಾರ'ರ ರಹಸ್ಯವನ್ನು ಉಳಿಸಿಕೊಳ್ಳಲು ಯತ್ನಿಸಲಾಗಿದೆ.

                ಸಾರ್ವಜನಿಕ ಹಿತಾಸಕ್ತಿಗಾಗಿ ಮಾಹಿತಿ ಹಂಚಿಕೊಳ್ಳದ ಕಾರಣ ಎಸ್‌ಜೆಟಿಎ ಅಧಿಕಾರಿ ಎಸ್‌.ಕೆ. ಚಟರ್ಜಿ ಅವರಿಗೆ ರಾಜ್ಯ ಮಾಹಿತಿ ಆಯೋಗವು ಇತ್ತೀಚೆಗೆ ದಂಡ ವಿಧಿಸಿತ್ತು. ಆದರೆ ಮತ್ತೆ ನಿಗೂಢತೆಯನ್ನು ಮುಚ್ಚಿಯೇ ಇಡುವ ಪ್ರಯತ್ನ ಮುಂದುವರಿದಿದೆ.

                 'ರತ್ನ ಭಂಡಾರ'ದ ಒಳ ಕೋಣೆ ತೆರೆಯಲು ಎಸ್‌ಜೆಟಿಎ ನಿರ್ಧರಿಸಲು ಸಾಧ್ಯವಿಲ್ಲ. ಮುಂದಿನ ಸಭೆಯಲ್ಲಿ ಈ ಸಮಸ್ಯೆಯನ್ನು ಜಗನ್ನಾಥ ದೇವಾಲಯದ ವ್ಯವಸ್ಥಾಪನಾ ಸಮಿತಿಯ ಮುಂದೆ ಇಡಲಾಗುವುದು. ಆಡಳಿತ ಸಮಿತಿಯ ನಿರ್ಧಾರವನ್ನು ಎಸ್‌ಜೆಟಿಎ ಸರ್ಕಾರಕ್ಕೆ ತಿಳಿಸಿದ ಬಳಿಕ ಮಾತ್ರ ಖಜಾನೆ ತೆರೆಯಬಹುದು' ಎಂದು ದೇವಸ್ಥಾನದ ಆಡಳಿತಾಧಿಕಾರಿ (ಅಭಿವೃದ್ಧಿ) ಅಜಯ್ ಕುಮಾರ್ ಜೆನಾ ತಿಳಿಸಿದರು.

           ಮಳಿಗೆಯ ಗೋಡೆ ಬಿರುಕು ಬಿಟ್ಟಿದ್ದು, ಕೂಡಲೇ ಖಜಾನೆ ತೆರೆದು ದುರಸ್ತಿಗೊಳಿಸಬೇಕು ಎಂದು ದೇವಸ್ಥಾನದ 'ರತ್ನ ಭಂಡಾರ' ಪ್ರಭಾರಿ ನಿರಂಜನ ಮೇಕಪ್ ಹೇಳಿದ್ದಾರೆ. 'ಖಜಾನೆಯಲ್ಲಿ ಚಿನ್ನ, ವಜ್ರಾಭರಣ, ಅಮೂಲ್ಯ ಕಲ್ಲುಗಳು ಮತ್ತು ಇತರೆ ಆಭರಣಗಳನ್ನು ಹೊಂದಿದ್ದರೂ ಒಳಗಿನ ಕೋಣೆ ತೆರೆಯುವ ಯಾವುದೇ ಪ್ರಯತ್ನವನ್ನು ರಾಜ್ಯ ಸರ್ಕಾರ ಮಾಡಿಲ್ಲ' ಎಂದು ರಾಜ್ಯ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಜಯನಾರಾಯಣ ಮಿಶ್ರಾ ಆರೋ‍‍ಪಿಸಿದರು. ರತ್ನ ಭಂಡಾರವನ್ನು 1803, 1926 ಮತ್ತು 1978ರಲ್ಲಿ ಮಾತ್ರ ತೆರೆದು ಪರಿಶೀಲನೆ ನಡೆಸಲಾಗಿದೆ.

                 ಈ ಭಂಡಾರದಲ್ಲಿ 12,831 'ಭಾರಿ' ಚಿನ್ನ, 22,153 'ಭಾರಿ' ಬೆಳ್ಳಿ ಇದೆ ಎಂದು 1978ರಲ್ಲಿ ತಿಳಿಸಲಾಗಿತ್ತು (ಒಂದು 'ಭಾರಿ' ಎಂದರೆ 11.66 ಗ್ರಾಂನಷ್ಟಾಗುತ್ತದೆ). ಇದರ ಜತೆಗೆ ಇಲ್ಲಿ ಅಮೂಲ್ಯ ಹರಳುಗಳನ್ನು ಒಳಗೊಂಡ 12,831 ಗ್ರಾಂ ಚಿನ್ನಾಭರಣ, 22,153 ಗ್ರಾಂನಷ್ಟು ಬೆಳ್ಳಿ ಆಭರಣ ಇದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries