ಪೆರ್ಲ: ಬಜಕೂಡ್ಲು ಶ್ರೀ ಮಹಾಲಿಂಗೇಶ್ವರ ಭಜನಾಸಂಘದ ವತಿಯಿಂದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಮತ್ತು ಯಕ್ಷಗಾನ ವೈಭವ ಆ. 14ರಂದು ಬಜಕೂಡ್ಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಜರುಗಲಿದೆ. ಬೆಳಗ್ಗೆ 9ಕ್ಕೆ ಶ್ರೀ ಸತ್ಯನಾರಾಯಣ ಪೂಜೆ ಆರಂಭಗೊಳ್ಳುವುದು. ವೇದಮೂತಿ ಚಂದ್ರಶೇಖರ ನಾವಡ ಪೌರೋಹಿತ್ಯ ವಹಿಸುವರು.
ಮಧ್ಯಾಹ್ನ 1.30ರಿಂದ ನಡೆಯುವ ಯಕ್ಷಗಾನ ವೈಭವ ಕಾರ್ಯಕ್ರಮದಲ್ಲಿ ಭಾಗವತರಾಗಿ ಸತ್ಯನಾರಾಯಣ ಪುಣಿಂಚಿತ್ತಾಯ, ಗಿರೀಶ್ ರೈ ಕಕ್ಕೆಪದವು, ಕಾವ್ಯಶ್ರೀ ಅಜೇರು, ಚೆಂಡೆಯಲ್ಲಿ ಚೈತನ್ಯಕೃಷ್ಣ ಪದ್ಯಾಣ, ಮದ್ದಳೆಯಲ್ಲಿ ಶ್ರೀಧರ ಪಡ್ರೆ, ಚಕ್ರತಾಳದಲ್ಲಿ ಆದಿತ್ಯ ಬರೆಗೆರೆ ಸಹಕರಿಸುವರು.
ನಾಳೆ ಶ್ರೀಸತ್ಯನಾರಾಯಣ ಪೂಜೆ, ಯಕ್ಷಗಾನ ವೈಭವ
0
ಆಗಸ್ಟ್ 13, 2022