ಕುಂಬಳೆ: ಶಿವಮೊಗ್ಗದ ಕರ್ನಾಟಕ ಸಂಘದ ವಾರ್ಷಿಕ ಪುಸ್ತಕ ಪ್ರಶಸ್ತಿ ಪ್ರಕಟಿಸಲಾಗಿದೆ. ಕಾಸರಗೋಡಿನ ಇಬ್ಬರು ಸಾಹಿತಿಗಳಿಗೆ ಪ್ರಶಸ್ತಿ ಒಲಿದುಬಂದಿರುವುದು ಗಡಿನಾಡಿನ ಸಾಹಿತ್ಯ ಲೋಕಕ್ಕೆ ಹೆಮ್ಮೆ ತಂದಿದೆ.
ಅನುವಾದ ವಿಭಾಗದಲ್ಲಿ ಕೊಡಮಾಡುವ ಎಸ್.ವಿ.ಪರಮೇಶ್ವರ ಭಟ್ಟ ಪ್ರಶಸಸ್ತಿಗೆ ಹಂಪಿ ವಿದ್ಯಾರಣ್ಯ ವಿ.ವಿ.ಯ ಪ್ರಾಧ್ಯಾಪಕ ಡಾ.ಎ. ಮೋಹನ ಕುಂಟಾರು ಅವರ ಪ್ರೇಮ ಪತ್ರ ಪುಸ್ತಕ ಹಾಗೂ ಮಹಿಳಾ ಲೇಖಕರ ವಿಭಾಗದಲ್ಲಿ ಸ್ನೇಹಲತಾ ದಿವಾಕರ ಕುಂಬಳೆ ಅವರ ಆಮೆ ಕೃತಿಗೆ ಪ್ರಶಸ್ತಿ ಘೋಷಿಸಲಾಗಿದೆ.
ಪ್ರಶಸ್ತಿ ವಿಜೇತರಿಗೆ ಹತ್ತು ಸಾವಿರ ರೂ.ನಗದು, ಫಲಕ ನೀಡಿ ನವೆಂಬರ್ ತಿಂಗಳಲ್ಲಿ ನಡೆಯುವ ಸಮಾರಂಭದಲ್ಲಿ ವಿತರಿಸಲಾಗುವುದು ಎಂದು ಕರ್ನಾಟಕ ಸಂಘದ ಅಧ್ಯಕ್ಷ ಎಂ.ಎನ್.ಸುಂದರರಾಜ್ ತಿಳಿಸಿದ್ದಾರೆ.
ಕರ್ನಾಟಕ ಸಂಘದ ವಾರ್ಷಿಕ ಪುಸ್ತಕ ಪ್ರಶಸ್ತಿ ಪ್ರಕಟ: ಕಾಸರಗೋಡಿನ ಈರ್ವರಿಗೆ ಒಲಿದ ಪ್ರಶಸ್ತಿ
0
ಆಗಸ್ಟ್ 28, 2022
Tags