ಮುಳ್ಳೇರಿಯ: ಕಾರಡ್ಕ ಬ್ಲಾಕ್ ಆರೋಗ್ಯ ಮೇಳದ ಅಂಗವಾಗಿ ಆಯೋಜಿಸಲಾದ ನೇತ್ರ ತಪಾಸಣೆ ಶಿಬಿರ ಹೆಚ್ಚು ಜನರ ಪಾಲ್ಗೊಳ್ಳುವಿಕೆಯೊಂದಿಗೆ ಯಶಸ್ವಿಯಾಯಿತು. ಬೇಡಡ್ಕ ತಾಲೂಕು ಆಸ್ಪತ್ರೆಯಲ್ಲಿ ಶಿಬಿರ ನಡೆಯಿತು. ಜಿಲ್ಲಾ ಸಂಚಾರಿ ಘಟಕ ಹಾಗೂ ಅಂಧತ್ವ ನಿವಾರಣಾ ಸೊಸೈಟಿ ಸಹಯೋಗದಲ್ಲಿ ಆಯೋಜಿಸಿದ್ದ ಶಿಬಿರದಲ್ಲಿ 240 ಮಂದಿ ತಪಾಸಣೆಗೆ ಬಂದಿದ್ದರು.
ಕಾರಡ್ಕ ಬ್ಲಾಕ್ ಪಂಚಾಯಿತಿ ಉಪಾಧ್ಯಕ್ಷೆ ಕೆ.ರಮಣಿ ಉದ್ಘಾಟಿಸಿದರು. ಬೇಡಡ್ಕ ಗ್ರಾಮ ಪಂಚಾಯಿತಿ ಅಭಿವೃದ್ಧಿ ಕಾರ್ಯಗಳ ಸ್ಥಾಯಿ ಸಮಿತಿ ಅಧ್ಯಕ್ಷೆ ಲತಾ ಗೋಪಿ ಅಧ್ಯಕ್ಷತೆ ವಹಿಸಿದ್ದರು. ಡಯಾಬಿಟಿಕ್ ರೆಟಿನೋಪತಿ, ಕಣ್ಣಿನ ಆರೈಕೆ ಮತ್ತು ನೇತ್ರದಾನದ ಬಗ್ಗೆ
ಡಾ. ಅಪರ್ಣಾ ತರಗತಿ ನಡೆಸಿದರು. ಬ್ಲಾಕ್ ಪಂಚಾಯಿತಿ ಸದಸ್ಯೆ ಸಾವಿತ್ರಿ ಬಾಲನ್, ಪಂಚಾಯಿತಿ ಸದಸ್ಯರಾದ ಎಂ.ರಜನಿ, ಎಚ್.ಶಂಕರನ್, ಆರೋಗ್ಯ ಮೇಲ್ವಿಚಾರಕ ಪಿ.ಕುಂಞÂ್ಞ ಕೃಷ್ಣನ್ ನಾಯರ್, ಲೂಕ್ ಕುರಿಯಾಕೋಸ್ ಮಾತನಾಡಿದರು.
ಆಪೆÇ್ಟೀಮೆಟ್ರಿಸ್ಟ್ ಗಳಾದ ವಿ.ಎಸ್.ಅನುಪ್ರಿಯಾ ಮತ್ತು ಸಿ.ಸಿಂಧು ಶಿಬಿರ ನಡೆಸಿಕೊಟ್ಟರು. ಪ್ರಭಾರಿ ಆರೋಗ್ಯ ನಿರೀಕ್ಷಕ ಪಿ ವಿನೋದ್ ಕುಮಾರ್ ಸ್ವಾಗತಿಸಿ, ಸಾರ್ವಜನಿಕ ಆರೋಗ್ಯ ಶುಶ್ರೂಷಕಿ ಎಂ ಗೀತಾ ವಂದಿಸಿದರು.
ಕಾರಡ್ಕ ಬ್ಲಾಕ್ ಆರೋಗ್ಯ ಮೇಳದಲ್ಲಿ ನೇತ್ರ ತಪಾಸಣೆ ಶಿಬಿರ
0
ಆಗಸ್ಟ್ 10, 2022
Tags