ಮಂಜೇಶ್ವರ: ಹೊಸಂಗಡಿ ಶ್ರೀ ಅಯ್ಯಪ್ಪ ಕ್ಷೇತ್ರದಲ್ಲಿ ಕಳವು ನಡೆದಿದೆ. ಕ್ಷೇತ್ರದ ಎರಡೂ ಬಾಗಿಲುಗಳನ್ನು ಮುರಿದ ಕಳ್ಳರು ಅಲ್ಲಿದ್ದ ಪಂಚಲೋಹ ಮೂರ್ತಿಯನ್ನು ಕದ್ದೊಯ್ದಿದ್ದಾರೆ.
ಶನಿವಾರ ಬೆಳಗ್ಗೆ ಅರ್ಚಕರು ಆಗಮಿಸಿದಾಗ ಕಳ್ಳತನವಾಗಿರುವುದು ಬೆಳಕಿಗೆ ಬಂತು. 5 ಕೆಜಿ ತೂಕದ ವಿಗ್ರಹ ಕಳವಾಗಿದೆ. ಮಧ್ಯರಾತ್ರಿ 12 ಗಂಟೆಯಿಂದ ಬೆಳಗಿನ ಜಾವ 5:30ರ ನಡುವೆ ಕಳ್ಳತನ ನಡೆದಿರುವ ಬಗ್ಗೆ ಶಂಕಿಸಲಾಗಿದೆ. ಬೆಳಗ್ಗೆ ಕ್ಷೇತ್ರಕ್ಕೆ ಆಗಮಿಸಿದ ಅರ್ಚಕರು ಕಳ್ಳತನವಾಗಿರುವುದನ್ನು ಆಡಳಿತ ಸಮಿತಿಗೆ ತಿಳಿಸಿದರು. ದೇಗುಲದ ಮುಖ್ಯ ಬಾಗಿಲಿನ ಬೀಗ ಮುರಿದು ಒಳ ನುಗ್ಗಿ ಕಳ್ಳತನ ನಡೆದಿದೆ. ಜನ್ಮಾಷ್ಟಮಿ ದಿನದಲ್ಲಿ ಸಂಗ್ರಹವಾಗಿದ್ದ ಕಾಣಿಕೆ ಡಬ್ಬಿಯನ್ನು ಕೂಡಾ ಹೊತ್ತೊಯ್ದಿದ್ದಾರೆ.
ಬಳಿಕ ಮಂಜೇಶ್ವರ ಪೋಲೀಸರು ಸ್ಥಳಕ್ಕಾಗಮಿಸಿ ಮಾಹಿತಿ ಕಲೆ ಹಾಕಿ ತಪಾಸಣೆ ನಡೆಸುತ್ತಿರುವ ಮಧ್ಯೆ ದೇವಸ್ಥಾನದ ಹಿಂಭಾಗದ ಪೆÇದರಿನಲ್ಲಿ ಕಳವಾಗಿದ್ದ ಪಂಚಲೋಹ ಮೂರ್ತಿ ಬಿಸಾಕಿದ ರೀತಿಯಲ್ಲಿ ಪತ್ತೆಯಾಗಿದೆ. ಅದೇ ರೀತಿ ಕಾಣಿಕೆ ಡಬ್ಬಿ ಕೂಡಾ ಪತ್ತೆಯಾಗಿದೆ. ಕಳವಾಗಿರುವ ಸುದ್ದಿ ತಿಳಿದು ಪರಿಸರದಲ್ಲಿ ಭಾರೀ ಸಂಖ್ಯೆಯಲ್ಲಿ ಜನರು ಸೇರಿದ್ದರು. ಮೂರ್ತಿ ಪತ್ತೆಯಾಗಿದೆಂಬ ಮಾಹಿತಿ ತಿಳಿಯಿತಿದ್ದಂತೆಯೇ ಜನರು ಸಮಧಾನದಿಂದ ಹಿಂದೆ ತೆರಳಿದರು.