ವಯನಾಡ್: ಮುಸ್ಲಿಂ ಮದುವೆ ಸಂಪ್ರದಾಯದಲ್ಲಿ ಮನೆಯಿಂದಲೇ ವಧುವಿನ ಒಪ್ಪಿಗೆಯೊಂದಿಗೆ ನಿಖಾಹ್ ವೇದಿಕೆಗೆ ತೆರಳಿ ನಿಖಾಹ್ ನಡೆದ ಮೇಲೆ ಮಹರ್ (ವಧುವಿಗೆ ಉಡುಗೊರೆ ) ಯನ್ನು ನಿಖಾಹ್ ನಡೆದ ಬಳಿಕ ವಧುವಿನ ತಂದೆ ವರನಿಂದ ಸ್ವೀಕರಿಸುವುದು ರೂಢಿಯಾಗಿದೆ. ಆದರೆ ಕೇರಳದ ಕುಟ್ಯಾಡಿ ಎಂಬಲ್ಲಿ ಮಸೀದಿಯೊಂದರಲ್ಲಿ ನಡೆದ ನಿಖಾಹ್ ಸುಮಾರಂಭಕ್ಕೆ ವಧು ಸಾಕ್ಷಿಯಾಗಿ ನಿಖಾಹ್ ಬಳಿಕ ವರನಿಂದ ನೇರ ಮಹರ್ ಪಡೆದು ನೂತನ ಮದುವೆ ಶೈಲಿಗೆ ಚಾಲನೆ ದೊರೆತಿದೆ.
ಪಾಲೇರಿ ಪರಕ್ಕಡವ್ ಜುಮಾ ಮಸೀದಿಯಲ್ಲಿ ನಡೆದ ವಿವಾಹ ಸಮಾರಂಭಕ್ಕೆ ಕುಟ್ಯಾಡಿ ಮೂಲದ ಕೆ.ಎಸ್. ಉಮರ್ ಅವರ ಪುತ್ರಿ ಬಹ್ಜಾ ದಲಿಲಾ ಚೆರುವಕ್ಕರ ಖಾಸಿಂ ಅವರ ಪುತ್ರ ಫಹಾದ್ ಖಾಸಿಂ ನೇರವಾಗಿ ವರನಿಂದ ಮಹರ್ ವೇದಿಕೆಯಲ್ಲೇ ಸ್ವೀಕರಿಸಿದ್ದಾಳೆ.
ವಿದ್ವಾಂಸರನ್ನು ವಿಚಾರಿಸಿ ಸಕಾರಾತ್ಮಕ ಸ್ಪಂದನೆ ದೊರೆತ ಹಿನ್ನೆಲೆಯಲ್ಲಿ ನಿಖಾಹ್ ವೇದಿಕೆಗೆ ವಧು ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಮಹಲ್ ಜಮಾತ್ ಪ್ರಧಾನ ಕಾರ್ಯದರ್ಶಿ ಇ.ಜೆ. ಮುಹಮ್ಮದ್ ನಿಯಾಝ್ ತಿಳಿಸಿದ್ದಾರೆ.
ಅಂತೂ ಈ ವಿಷಯ ಸಾಮಾಜಿಕ ಜಾಲ ತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.
ನಿಖಾಹ್ ಬಳಿಕ ಮೆಹರ್: ಹೊಸ ಪದ್ದತಿಗೆ ನಾಂದಿ
0
ಆಗಸ್ಟ್ 02, 2022