HEALTH TIPS

ರಾಜ್ಯಸಭೆ: ಮಸೂದೆ ಅಂಗೀಕಾರಕ್ಕೆ ಎನ್ ಡಿಎ ಮುಂದಿದೆ ಕಠಿಣ ಹಾದಿ, ಬಿಜೆಡಿ, ವೈಎಸ್ ಆರ್ ಸಿಪಿ ಮೇಲೆ ಬಿಜೆಪಿ ಅವಲಂಬನೆ

 

               ನವದೆಹಲಿ: ಜೆಡಿಯು ಎನ್ ಡಿಎ ಮೈತ್ರಿಕೂಟದಿಂದ ಹೊರ ನಡೆಯುತ್ತಿದ್ದಂತೆಯೇ, ರಾಜ್ಯಸಭೆಯಲ್ಲಿ ಪ್ರಮುಖ ಮಸೂದೆಗಳು ಅಂಗೀಕಾರವಾಗಲು ಬಿಜೆಪಿ ಇದೀಗ ಬಿಜೆಡಿ ಮತ್ತು ವೈಎಸ್ ಆರ್ ಕಾಂಗ್ರೆಸ್ ನಂತರ ಪ್ರಾದೇಶಿಕ ಪಕ್ಷಗಳನ್ನು ಅವಲಂಬಿಸುವಂತಾಗಿದೆ.

                    ಉಪ ಸಭಾಪತಿ ಹರಿವಂಶ್ ಸೇರಿದಂತೆ ಜೆಡಿಯುನ ಐವರು ಸದಸ್ಯರು ರಾಜ್ಯಸಭೆಯಲ್ಲಿದ್ದಾರೆ. ಹರಿವಂಶ್ ಅವರ ಭವಿಷ್ಯ ಇದೀಗ ಅಡ್ಡ ಕತ್ತರಿಯಲ್ಲಿ ಸಿಲುಕಿದೆ. ಅವರ ಪಕ್ಷ  ಎನ್ ಡಿಎ ಮೈತ್ರಿ ಕಡಿದುಕೊಂಡಿದ್ದರೂ ಅವರು ಇನ್ನೂ ರಾಜೀನಾಮೆ ನೀಡಿಲ್ಲ. ಆದಾಗ್ಯೂ ಅವರು ಸೋಮನಾಥ್ ಚಟರ್ಜಿ ಅವರಂತೆಯೇ  ಅದೇ ಸ್ಥಾನದಲ್ಲಿ ಮುಂದುವರೆಯುವ ಸಾಧ್ಯತೆಯಿದೆ. ಸೋಮನಾಥ್ ಚಟರ್ಜಿ ಸಿಪಿಐ(ಎಂ) ನಿಂದ ಅಮಾನತುಗೊಂಡ ನಂತರವೂ ಲೋಕಸಭೆಯ ಸ್ಪೀಕರ್ ಆಗಿ ಕಾರ್ಯ ನಿರ್ವಹಿಸಿದ್ದರು.  

                   ಲೋಕಸಭೆಯಲ್ಲಿ ಜೆಡಿಯುನ 16 ಸಂಸದರಿದ್ದಾರೆ. ಆದರೆ, ಕೆಳಮನೆಯಲ್ಲಿ ಬಿಜೆಪಿಗೆ ಬಹುಮತವಿದೆ. ಆದರೆ, ರಾಜ್ಯಸಭೆಯಲ್ಲಿ ಬಹುಮತ ಹೊಂದಿಲ್ಲ. ಮೇಲ್ಮನೆಯಲ್ಲಿ ಬಿಜೆಪಿ ಕೇವಲ 91 ಸದಸ್ಯರನ್ನು ಹೊಂದಿದೆ. ಎರಡು ಪಕ್ಷೇತರರು, ಎಐಎಡಿಎಂಕೆಯ ನಾಲ್ವರು ಸದಸ್ಯರು ಒಳಗೊಂಡಂತೆ ಒಟ್ಟಾರೇ 110 ಸಂಸದರ ಬೆಂಬಲವನ್ನು ಬಿಜೆಪಿ ಹೊಂದಿದೆ.

                  245 ಸದಸ್ಯ ಬಲದ ರಾಜ್ಯಸಭೆಯಲ್ಲಿ ಸರಳ ಬಹುಮತಕ್ಕೆ ಬಿಜೆಪಿಗೆ 123 ಸದಸ್ಯರ ಬೆಂಬಲದ ಅಗತ್ಯವಿದೆ. ಇದಕ್ಕಾಗಿ ಈಗ ಮೂವರು ಸ್ವತಂತ್ರ ಅಭ್ಯರ್ಥಿಗಳು ಅಥವಾ ಬಿಜೆಡಿ, ವೈಎಸ್ ಆರ್ ಕಾಂಗ್ರೆಸ್ ಪಕ್ಷದ ಮೇಲೆ ಅವಲಂಬನೆಯಾಗಬೇಕಾಗಿದೆ. ರಾಜ್ಯಸಭೆಯಲ್ಲಿ ಬಿಜೆಪಿ ಮತ್ತು ವೈಎಸ್ ಆರ್ ಕಾಂಗ್ರೆಸ್ ಪಕ್ಷ ತಲಾ ಒಂಬತ್ತು ಸದಸ್ಯರನ್ನು ಹೊಂದಿದೆ.

            ಇತ್ತೀಚಿನ ದಿನಗಳಲ್ಲಿ ರಾಜ್ಯಸಭೆಯಲ್ಲಿ ಅಂಗೀಕಾರಗೊಂಡ ಕೆಲವು ಕಾಯ್ದೆಗಳಿಗೆ ಆಡಳಿತರೂಢ ಪಕ್ಷವನ್ನು ಇವರು ಬೆಂಬಲಿಸಿದ್ದಾರೆ. ಎನ್ ಡಿಎ ಮಿತ್ರಕೂಟದ ಇತರ ಪ್ರಾದೇಶಿಕ ಪಕ್ಷಗಳ  ಎಂಟು ಸದಸ್ಯರು ಕೂಡಾ ಬಿಜೆಪಿಯನ್ನು ಬೆಂಬಲಿಸಲಿದ್ದಾರೆ. ಅಲ್ಲದೇ ಅಸ್ಸಾಂನ ಅಜಿತ್ ಕುಮಾರ್ ಭುಯನ್ ಮತ್ತು ಹರಿಯಾಣದ ಕಾರ್ತಿಕೇಯ ಶರ್ಮಾ ಕೂಡಾ ಎನ್ ಡಿಎ ಮೈತ್ರಿಕೂಟದಲ್ಲಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries