ಬೆಂಗಳೂರು: ಮೆಟಾ ಒಡೆತನದ 'ವಾಟ್ಸ್‌ಆಯಪ್' ಹೊಸ ಹೊಸ ಅಪ್‌ಡೇಟ್‌ಗಳ ಮೂಲಕ ಬಳಕೆದಾರರಿಗೆ ಆಕರ್ಷಕ ಫೀಚರ್‌ಗಳನ್ನು ನೀಡುತ್ತಾ ಬರುತ್ತಿದೆ.
ಈ ಬಾರಿ ವಾಟ್ಸ್‌ಆಯಪ್, ಇನ್‌ಸ್ಟಾಗ್ರಾಮ್‌ನಲ್ಲಿ ಇರುವಂತೆಯೇ, ಚಾಟ್ ಲಿಸ್ಟ್‌ನಲ್ಲಿಯೇ ಸ್ಟೇಟಸ್ ಅಪ್‌ಡೇಟ್ ನೀಡಲು ಕಾರ್ಯನಿರತವಾಗಿದೆ.
ವಾಟ್ಸ್‌ಆಯಪ್ ಬಿಡುಗಡೆ ಮಾಡಲಿರುವ ಹೊಸ ಅಪ್‌ಡೇಟ್, ಪ್ರಸ್ತುತ ಪರೀಕ್ಷಾರ್ಥ ಬಳಕೆಯಲ್ಲಿದೆ. ಬೀಟಾ ಆವೃತ್ತಿ ಪರಿಶೀಲನೆಯ ಬಳಿಕ ಎಲ್ಲ ಬಳಕೆದಾರರಿಗೆ ದೊರೆಯಲಿದೆ.
ವಾಬೀಟಾಇನ್ಫೋ ಈ ಕುರಿತು ವರದಿ ಮಾಡಿದ್ದು, ಈಗಾಗಲೇ ಇನ್‌ಸ್ಟಾಗ್ರಾಮ್‌ನಲ್ಲಿ ಇರುವ ಮಾದರಿಯಲ್ಲೇ, ಚಾಟ್ ಜತೆಗೇ, ಲಿಸ್ಟ್‌ನಲ್ಲಿರುವ ಪ್ರೊಫೈಲ್ ಮೇಲೆ ಕ್ಲಿಕ್ ಮಾಡಿದರೆ, ಅವರ ಸ್ಟೇಟಸ್ ಕಾಣಿಸಲಿದೆ.
ಆಯಂಡ್ರಾಯ್ಡ್ ಮತ್ತು ಐಫೋನ್‌ಗಳಲ್ಲಿ ನೂತನ ಅಪ್‌ಡೇಟ್ ದೊರೆಯಲಿದ್ದು, ಈಗಾಗಲೇ ಮೆಟಾ, ಬೀಟಾ ಆವೃತ್ತಿ ಬಿಡುಗಡೆ ಮಾಡಿದೆ