ಮಂಜೇಶ್ವರ: ಮಂಜೇಶ್ವರ ಮಂಡಲದ ಸಮಗ್ರ ಅಭಿವೃದ್ಧಿಯನ್ನು ಗುರಿಯಾಗಿಟ್ಟುಕೊಂಡು ಶಾಸಕ ಎ.ಕೆ.ಎಂ.ಅಶ್ರಫ್ ಅವರು ಶಾಲೆಗಳಿಗೆ ಮೈಲ್ಸ್ ಯೋಜನೆಯ ಅಭಿಯಾನಕ್ಕೆ ಚಾಲನೆ ನೀಡಿದರು.
ನನ್ನ ಶಾಲೆ ಎಂಬ ಪರಿಕಲ್ಪನೆಯ ಮೇಲೆ ಕೇಂದ್ರೀಕೃತವಾದ ಯೋಜನೆ ಇದಾಗಿದೆ. ನನ್ನ ಶಾಲಾ ಪ್ರವಾಸದ ಅಂಗವಾಗಿ ಜಿಎಚ್‍ಎಸ್‍ಎಸ್ ಬೇಕೂರಿನಲ್ಲಿ ನಡೆದ ಮಂಜೇಶ್ವರ ಕ್ಷೇತ್ರ ಶಿಕ್ಷಣ ಅಭಿವೃದ್ಧಿ ಕ್ರಿಯಾ ಯೋಜನೆ ಕಾರ್ಯಾಗಾರವನ್ನು ಶಾಸಕ ಎಕೆಎಂ ಅಶ್ರಫ್ ಉದ್ಘಾಟಿಸಿದರು. ಮಂಜೇಶ್ವರ ಬ್ಲಾಕ್ ಪಂಚಾಯತ್ ಉಪಾಧ್ಯಕ್ಷ ಪಿ.ವಿ ಮುಹಮ್ಮದ್ ಹನೀಫ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯತ್ ಸದಸ್ಯ ಗೋಲ್ಡನ್ ರೆಹಮಾನ್, ಮಂಗಲ್ಪಾಡಿ ಪಂಚಾಯತ್ ಉಪಾಧ್ಯಕ್ಷ ಯೂಸುಫ್ ಹೇರೂರು, ಮಂಗಲ್ಪಾಡಿ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷರಾದ ಖೈರುನ್ನೀಸಾ ಉಮ್ಮರ್, ಇರ್ಫಾನಾ ಇಕ್ಬಾಲ್, ಪಂಚಾಯತ್ ಸದಸ್ಯೆ ಮಜೀದ್ ಪಚ್ಚಂಬಳ, ಶಿಕ್ಷಣ ಇಲಾಖೆಯ ಉಪನಿರ್ದೇಶಕಿ ಕೆ.ವಿ.ಪುμÁ್ಪ, ಜಿಲ್ಲಾ ಶಿಕ್ಷಣಾಧಿಕಾರಿ ಸುರೇಶ್, ಮಂಜೇಶ್ವರ ಎಇಒ ದಿನೇಶ್, ಕುಂಬಳೆ ಎಇಓ ಯತೀಶ್ ಕುಮಾರ್ ರೈ ಮತ್ತು ವಿಎಚ್ ಎಸ್ ಇ ಸಹಾಯಕ ನಿರ್ದೇಶಕಿ ಉದಯಕುಮಾರಿ ಮಾತನಾಡಿದರು. ಶಿಕ್ಷಣ ಇಲಾಖೆಯ ಉಪನಿರ್ದೇಶಕಿ ಕೆ.ವಿ.ಪುμÁ್ಪ ಅವರು ಜಿಲ್ಲಾ ಶಿಕ್ಷಣಾಧಿಕಾರಿಗಳಿಗೆ ಲಾಂಛನ ಹಸ್ತಾಂತರಿಸಿ ಲೋಗೋ ಬಿಡುಗಡೆ ಮಾಡಿದರು. ವಿವಿಧ ಶಾಲೆಗಳ ಪ್ರಾಚಾರ್ಯರು, ಮುಖ್ಯ ಶಿಕ್ಷಕರು, ಪಿಟಿಎ ಅಧ್ಯಕ್ಷರು ಹಾಗೂ ಎಸ್‍ಎಂಸಿ ಅಧ್ಯಕ್ಷರು ಭಾಗವಹಿಸಿದ್ದರು.
ಮಂಜೇಶ್ವರ ವ್ಯಾಪ್ತಿಯ ಶಾಲೆಗಳಲ್ಲಿ ಮೈಲ್ಸ್ ಯೋಜನೆಗೆ ಚಾಲನೆ
0
ಆಗಸ್ಟ್ 28, 2022