ನವದೆಹಲಿ: ದೇಶದಲ್ಲಿ ಗೋಧಿ ದಾಸ್ತುನು ಕೊರತೆ ಇಲ್ಲ ಎಂದು ಕೇಂದ್ರ ಸರ್ಕಾರ ಪುನರುಚ್ಚರಿಸಿದೆ. ಇದೇ ವರ್ಷದ ಜುಲೈ 1 ರಂದು 285.10 ಲಕ್ಷ ಮೆಟ್ರಿಕ್ ಗೋಧಿ ದಾಸ್ತಾನು ಇತ್ತು ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಲೋಕಸಭೆಗೆ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
ಖಾಸಗಿ ಖರೀದಿದಾರರು ರೈತರಿಂದ ನೇರವಾಗಿ ಗೋಧಿಯನ್ನು ಖರೀದಿಸುತ್ತಿರುವುದರಿಂದ ಗೋಧಿ ದಾಸ್ತಾನುವಿನಲ್ಲಿ ಕೊರತೆಯಾಗಿದೆಯೇ ಎಂಬ ಮತ್ತೊಂದು ಪ್ರಶ್ನೆಗೆ ಹೌದೆಂದು ಸಚಿವರು ಪ್ರತಿಕ್ರಿಯಿಸಿದರು.
ಪ್ರಚಲಿತ ಅಂತಾರಾಷ್ಟ್ರೀಯ ಭೌಗೋಳಿಕ ರಾಜಕೀಯ ಪರಿಸ್ಥಿತಿಯಿಂದಾಗಿ ಮಾರುಕಟ್ಟೆ ಬೆಲೆ ಏರಿಕೆಯಾಗಿರುವುದರಿಂದ ವ್ಯಾಪಾರಿಗಳಿಂದ ಗೋಧಿಯ ಹೆಚ್ಚಿನ ಖರೀದಿಯಿಂದಾಗಿ ಗೋಧಿ ಸಂಗ್ರಹವು ಕುಸಿದಿದೆ ಎಂದು ಕೇಂದ್ರ ಸಚಿವರು ಹೇಳಿದರು.