ಕಾಸರಗೋಡು: ರೈಲ್ವೆ ಇಲಾಖೆ ವತಿಯಿಂದ ಸ್ವಾತಂತ್ರ್ಯೋತ್ಸವದ 75ನೇ ವಾರ್ಷಿಕದ ಅಂಗವಾಗಿ ಕಾಸರಗೋಡು ರೈಲ್ವೆ ನಿಲ್ದಾಣದ ಎದುರು ಸ್ಥಾಪಿಸಿರುವ ನೂರು ಅಡಿ ಎತ್ತರದ ಭವ್ಯ ಧ್ವಜಸ್ತಂಬದಲ್ಲಿ ರಾಷ್ಟ್ರದ್ವಜವನ್ನು ಅಳವಡಿಸಲಾಗಿದೆ. ರೈಲ್ವೆ ಪ್ರಯಾಣಿಕರಲ್ಲಿ ರಾಷ್ಟ್ರೀಯತೆ ಮತ್ತು ರಾಷ್ಟ್ರಭಕ್ತಿ ಹೆಚ್ಚಿಸುವ ನಿಟ್ಟಿನಲ್ಲಿ ಕೇಂದ್ರ ರೈಲ್ವೆ ಇಲಾಖೆಯು ಈ ಬೃಹತ್ ದ್ವಜಸ್ತಂಬ ನಿರ್ಮಿಸಿದೆ. ದ್ವಜಸ್ತಂಬವನ್ನು ಸುಮಾರು 13ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದ್ದು, ಇದರಲ್ಲಿ ಬಟ್ಟೆಯಿಂದ ತಯಾರಿಸಿದ 20 ಅಡಿ ಅಗಲ ಹಾಗೂ 30ಅಡಿ ಉದ್ದದ ತಿರಂಗವನ್ನು ಅಳವಡಿಸಲಾಗಿದೆ. ರೈಲ್ವೆ ಪಾಲಕ್ಕಾಡ್ ವಲಯದಲ್ಲಿ ಈಗಾಗಲೇ ಮಂಗಳೂರು ಜಂಕ್ಷನ್, ಕೋಯಿಕ್ಕೋಡ್ ಹಾಗೂ ಪಾಲಕ್ಕಾಡ್ ಜಂಕ್ಷನ್‍ನಲ್ಲಿ ನೂರು ಅಡಿ ಎತ್ತರದ ಧ್ವಜಸ್ತಂಬ ಅಳವಡಿಸಲಾಗಿದ್ದು, ಕಾಸರಗೋಡಿನಲ್ಲಿ ನಾಲ್ಕನೆಯದಾಗಿದೆ.
ಕಾಸರಗೋಡು ರೈಲ್ವೆ ನಿಲ್ದಾಣದಲ್ಲಿ ಭವ್ಯ ಧ್ವಜಸ್ತಂಬ
0
ಆಗಸ್ಟ್ 15, 2022
Tags