ಬದಿಯಡ್ಕ: ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಭಾಗವಾಗಿ ಶಾಲೆಗಳಿಗೆ ಕೊಡ ಮಾಡುವ ತ್ರಿವರ್ಣ ಧ್ವಜವನ್ನು ಸ್ಥಳೀಯ ಆಡಳಿತ ಸಂಸ್ಥೆಗಳ ಮೂಲಕ ಕುಟುಂಬ ಶ್ರೀ ಘಟಕಗಳು ತಯಾರಿಸಿಕೊಡುತ್ತಿದ್ದು, ತ್ರಿವರ್ಣ ಧ್ವಜವನ್ನು ಬದಿಯಡ್ಕ ಗ್ರಾಮ ಪಂಚಾಯತಿ ಅಧ್ಯಕ್ಷೆ ಶಾಂತ ಬಿ ಅವರು ನವಜೀವನ ಹೈಯರ್ ಸೆಕೆಂಡರಿ ಶಾಲೆಯ ಆಧ್ಯಾಪಕ ನಿರಂಜನ ರೈ ಪೆರಡಾಲ ಇವರಿಗೆ ನೀಡಿ ಉದ್ಘಾಟಿಸಿದರು.
ಗ್ರಾಮ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಅಬ್ಬಾಸ್ ಎಂ, ಸ್ಥಾಯಿ ಸಮಿತಿ ಅಧ್ಯಕ್ಷ ರವಿಕುಮಾರ್ ರೈ, ಸದಸ್ಯರಾದ ಡಿ ಶಂಕರ, ಹಮೀದ್ ಪಳ್ಳತಡ್ಕ, ಗ್ರಾಮ ಪಂಚಾಯತಿ ಸಹ ಕಾರ್ಯದರ್ಶಿ, ಸಿಡಿಎಸ್ ಅಧ್ಯಕ್ಷೆ ಅನಿತಾ ಕ್ರಾಸ್ತಾ, ಅಧ್ಯಾಪಕ ಪ್ರಶಾಂತ್ ಕಾನತ್ತೂರು ಮೊದಲಾದವರು ಉಪಸ್ಥಿತರಿದ್ದರು.
ಬದಿಯಡ್ಕದಲ್ಲಿ ತಿರಂಗ ಹಸ್ತಾಂತರ
0
ಆಗಸ್ಟ್ 13, 2022