ಬದಿಯಡ್ಕ: ನಾಡಿನ ಜನತೆಯಲ್ಲಿ ದೇಶಸ್ನೇಹ, ದೇಶದ ಕುರಿತಾಗಿ ಕಾಳಜಿಯಿರಬೇಕೆನ್ನುವ ಬಲವಾದ ಉದ್ದೇಶದೊಂದಿಗೆ ಪ್ರತೀ ಮನೆಯಲ್ಲಿಯೂ, ಸಂಸ್ಥೆಗಳಲ್ಲಿಯೂ ರಾಷ್ಟ್ರಧ್ವಜಾರೋಹಣಗೈಯಬೇಕೆನ್ನುವ ನಿಲುವಿನೊಂದಿಗೆ ಭಾರತದ ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಣೆಯಲ್ಲಿದೆ ಎಂದು ಕ್ಯಾಂಪ್ಕೋ ಪ್ರಾಂತೀಯ ಪ್ರಬಂಧಕ ಗಿರೀಶ್ ಕಾನತ್ತೂರು ಹೇಳಿದರು.
ಶನಿವಾರ ಕ್ಯಾಂಪ್ಕೋ ಬದಿಯಡ್ಕ ಶಾಖೆಯಲ್ಲಿ ನಡೆದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಆಚರಣೆಯ ಸಂದರ್ಭದಲ್ಲಿ ಧ್ವಜಾರೋಹಣಗೈದು ಅವರು ಮಾತನಾಡಿದರು. ಕೃಷಿಕ ಗಿರೀಶ್ ನಾಂದ್ರೋಡು ಶುಭÀಹಾರೈಸಿದರು. ಬದಿಯಡ್ಕ ಶಾಖಾ ಪ್ರಬಂಧಕ ದಿನೇಶ್ ಕುಮಾರ್, ಶಾಖಾ ಸಿಬ್ಬಂದಿಗಳು, ಕಾರ್ಮಿಕರು, ಕ್ಯಾಂಪ್ಕೋ ಸದಸ್ಯರು ಪಾಲ್ಗೊಂಡಿದ್ದರು.
ಬದಿಯಡ್ಕ ಕ್ಯಾಂಪ್ಕೋದಲ್ಲಿ ಸ್ವಾತಂತ್ರ್ಯದ ಅಮೃತಮಹೋತ್ಸವ
0
ಆಗಸ್ಟ್ 15, 2022
Tags