ಸಮರಸ ಚಿತ್ರಸುದ್ದಿ: ಬದಿಯಡ್ಕ: ಬದಿಯಡ್ಕದ ಚಿನ್ಮಯ ವಿದ್ಯಾಲಯದಲ್ಲಿ ರಕ್ಷಾ ಬಂಧನ ಮಹೋತ್ಸವವನ್ನು ಆಚರಿಸಲಾಯಿತು. ಶಾಲೆಯ ಮುಖ್ಯೋಪಾಧ್ಯಾಯಿನಿ ಮಾನಸ ಅವರು ಅಧ್ಯಕ್ಷತೆ ವಹಿಸಿ ನಡೆದ ಸಮಾರಂಭದಲ್ಲಿ ರಕ್ಷಾ ಬಂಧನ ಮಹತ್ವವನ್ನು ತಿಳಿಸಿಕೊಟ್ಟರು. ಬಳಿಕ ವಿದ್ಯಾರ್ಥಿಗಳು ರಕ್ಷೆಯನ್ನು ಕಟ್ಟಿದರು. ಇದರ ಅಂಗವಾಗಿ ವಿದ್ಯಾರ್ಥಿಗಳಿಗೆ ಕೆಲವೊಂದು ಸ್ಪರ್ಧೆ ನಡೆಸಲಾಯಿತು. ಶಿಕ್ಷಕಿ ರಚಿತ ನಿರೂಪಿಸಿದರು.
ಚಿನ್ಮಯದಲ್ಲಿ ರಕ್ಷಾಬಂಧನ ಉತ್ಸವ
0
ಆಗಸ್ಟ್ 13, 2022