ಬದಿಯಡ್ಕ: ಉದಯಗಿರಿ ಬಾಂಜತ್ತಡ್ಕ ವೃಂದಾವನ ಧಾರ್ಮಿಕ, ಸಾಂಸ್ಕøತಿಕ ಸಮಿತಿಯ ವತಿಯಿಂದ ಬಾಂಜತ್ತಡ್ಕ ಶ್ರೀ ಸತ್ಯನಾರಾಯಣ ಭಜನಾ ಮಂದಿರದ ಪರಿಸರದಲ್ಲಿ ಶ್ರೀಕೃಷ್ಣಜನ್ಮಾಷ್ಟಮಿ ಸಮಿತಿಯ 9ನೇ ವರ್ಷದ ಶ್ರೀಕೃಷ್ಣ ಜನ್ಮಾಷ್ಟಮಿ ಹಾಗೂ ಮೊಸರುಕುಡಿಕೆ ಕಾರ್ಯಕ್ರಮವು ಜರಗಿತು. ಪೂರ್ವಾಹ್ನ ಉದಯಗಿರಿ ಶಾಲಾ ಮುಖ್ಯೋಪಾಧ್ಯಾಯ ದಿನೇಶ್ ಬೊಳುಂಬು ದೀಪಬೆಳಗಿಸಿ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು. ನಂತರ ವಿವಿಧ ಸ್ಪರ್ಧೆಗಳು ನಡೆಯಿತು. ಸಂಜೆ 4.30ಕ್ಕೆ ನಡೆದ ಸಮಾರೋಪ ಸಮಾರಂಭದಲ್ಲಿ ಶ್ರೀ ಸತ್ಯನಾರಾಯಣ ಭಜನಾ ಮಂದಿರದ ಅಧ್ಯಕ್ಷ ಪುರುಷೋತ್ತಮ ಭಟ್ ಮಿಂಚಿನಡ್ಕ ಅಧ್ಯಕ್ಷತೆ ವಹಿಸಿದ್ದರು. ಬದಿಯಡ್ಕ ಗ್ರಾಮಪಂಚಾಯಿತಿ ಸದಸ್ಯ ಈಶ್ವರ ಮಾಸ್ತರ್ ಉದ್ಘಾಟಿಸಿದರು. ವಿಶ್ವಹಿಂದೂ ಪರಿಷತ್ ಜಿಲ್ಲಾ ಸಮಿತಿ ಪ್ರಧಾನ ಕಾರ್ಯದರ್ಶಿ ಸಂಕಪ್ಪ ಭಂಡಾರಿ ¨ಳ್ಳಂಬೆಟ್ಟು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಪೆರಡಾಲ ಸರ್ಕಾರೀ ಪ್ರೌಢಶಾಲೆಯ ಅಧ್ಯಾಪಕ ರಾಜೇಶ್, ಉದಯಗಿರಿ ಶಾಲೆಯ ಅಧ್ಯಾಪಕ ಶಿವರಾಮ, ಕುಂಟಿಕಾನ ಶಾಲಾ ಮುಖ್ಯೋಪಾಧ್ಯಾಯ ವೆಂಕಟ್ರಾಜ ವಾಶೆಮನೆ, ಊರಿನ ಹಿರಿಯರಾದ ಪಿ.ಕೆ.ಗಣಪತಿ ಭಟ್ ಕೈಲಂಕಜೆ ಉಪಸ್ಥಿತರಿದ್ದು ಶುಭಹಾರೈಸಿದರು.
ಬಾಂಜತ್ತಡ್ಕದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ, ಮೊಸರುಕುಡಿಕೆ ಸ್ಪರ್ಧೆ
0
ಆಗಸ್ಟ್ 21, 2022