ಪತ್ತನಂತಿಟ್ಟ: ನಿರಪುತ್ತರಿ ಪೂಜೆಗೆ ಶಬರಿಮಲೆ ದೇಗುಲದ ಗರ್ಭಗೃಹ ಬಾಗಿಲು ನಾಳೆ ತೆರೆಯಲಿದೆ. ಆದರೆ ಭಾರೀ ಮಳೆ ಇದ್ದರೂ ಭಕ್ತರು ಶಬರಿಮಲೆಗೆ ಪ್ರಯಾಣಿಸುವುದಕ್ಕೆ ಅಡ್ಡಿಯಿಲ್ಲ.
ಯಾತ್ರೆಯ ಅಂಗವಾಗಿ ಕೆಲವು ನಿರ್ಬಂಧಗಳನ್ನು ವಿಧಿಸಲಾಗಿದೆ. ವಿದ್ಯುತ್ ಪ್ರವಹಿಸುವ ಜಾಗ್ರತೆಯ ಕಾರಣ ಪಂಪಾ ನದಿ ಸ್ನಾನಕ್ಕೆ ಅವಕಾಶವಿಲ್ಲ. ಪಂಪಾದಿಂದ ಸನ್ನಿಧಾನಕ್ಕೆ ಸ್ವಾಮಿ ಅಯ್ಯಪ್ಪನ್ ರಸ್ತೆ ಮೂಲಕ ಮಾತ್ರ ಪ್ರಯಾಣಿಸಲು ಅವಕಾಶ ಮಾಡಲಾಗಿದೆ.
ರಾಜ್ಯದಲ್ಲಿ ತೀವ್ರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಪತ್ತನಂತಿಟ್ಟ ಜಿಲ್ಲೆಯಲ್ಲಿ ಶಬರಿಮಲೆ ಯಾತ್ರೆಗೆ ಸಂಬಂಧಿಸಿದಂತೆ ಸಚಿವೆ ವೀಣಾ ಜಾರ್ಜ್ ಅವರ ಸಮ್ಮುಖದಲ್ಲಿ ಜಿಲ್ಲಾಧಿಕಾರಿಯವರು ಪರಿಶೀಲನಾ ಸಭೆ ನಡೆಸಿದರು. ಸಭೆಯ ಬಳಿಕ ನಿರಪುತ್ತರಿ ಹಬ್ಬದ ಅಂಗವಾಗಿ ಶಬರಿಮಲೆ ಯಾತ್ರೆಗೆ ಕೆಲವು ನಿಬರ್ಂಧ ಹೇರಲಾಯಿತು. ಆಗಸ್ಟ್ 4 ರಂದು ನಿರಪುತ್ತರಿ ಉತ್ಸವ ನಡೆಯಲಿದೆ.
ಅವ್ಯಾಹತ ಮಳೆ; ನಾಳೆ ಶಬರಿಮಲೆ ದೇಗುಲ ತೆರೆಯಲಿರುವ ಹಿನ್ನೆಲೆ ಕೆಲವು ನಿಯಂತ್ರಣ ವಿಧಿಸಿದ ಸರ್ಕಾರ
0
ಆಗಸ್ಟ್ 02, 2022